ಗ್ಯಾಸ್ ಬಳಸುವ ಉಸಾಬರಿಯೇ ಬೇಡ! 5 ನಿಮಿಷದಲ್ಲಿ ರೆಡಿ ಮಾಡಿ 'ಫೈರ್‌ಲೆಸ್' ಪನೀರ್ ಬುರ್ಜಿ ಸ್ಯಾಂಡ್‌ವಿಚ್! Fireless Cooking
Fireless Cooking (ಸಾಂದರ್ಭಿಕ ಚಿತ್ರ)
Published on:
Copied
Follow Us
Fireless Cooking: ಇಂದಿನ ಆಧುನಿಕ ಬದುಕಿನಲ್ಲಿ ಮತ್ತು ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ನಡುವೆ, ಜನರು ಪರ್ಯಾಯ ಮತ್ತು ಸುಲಭ ಅಡುಗೆ ವಿಧಾನಗಳತ್ತ ಒಲವು ತೋರುತ್ತಿದ್ದಾರೆ. ಬಿಸಿಲಿನ ತಾಪದಿಂದ ಬಸವಳಿದಿರುವ ಜನರು ಗ್ಯಾಸ್ ಬಳಕೆಯಿಲ್ಲದೆ ಪೌಷ್ಟಿಕ ಆಹಾರ ತಯಾರಿಸಲು ಯೋಚಿಸುತ್ತಿದ್ದು, ಅಂತಹವರಿಗಾಗಿ ನಾವಿಂದು ಪನೀರ್ ಬುರ್ಜಿ ಸ್ಯಾಂಡ್‌ವಿಚ್ ಮಾಡುವುದನ್ನು ಹೇಳಿಕೊಡಲಿದ್ದೇವೆ.
ಒಂದು ಬೌಲ್‌ನಲ್ಲಿ ಪುಡಿ ಮಾಡಿದ ಪನೀರ್, ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಮಯೋನೈಸ್ , ಕಾಳುಮೆಣಸಿನ ಪುಡಿ, ಚಾಟ್ ಮಸಾಲಾ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ.
ನಂತರ ಬ್ರೆಡ್ ಸ್ಲೈಸ್‌ಗಳ ಮೇಲೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಮತ್ತು ಹಸಿರು ಚಟ್ನಿ ಹಚ್ಚಿರಿ. ಈಗ ಸಿದ್ಧಪಡಿಸಿದ ಪನೀರ್ ಮಿಶ್ರಣವನ್ನು ಒಂದು ಬ್ರೆಡ್ ಸ್ಲೈಸ್ ಮೇಲೆ ದಪ್ಪವಾಗಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಅದನ್ನು ಮುಚ್ಚಿ. ಇದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ ಗ್ರೀನ್ ಚಟ್ನಿಯೊಂದಿಗೆ ತಕ್ಷಣ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.