ನವದೆಹಲಿ: ಅತಿಯಾಗಿ ತಿನ್ನುವುದು, ಅವಸರದಲ್ಲಿ ಆಹಾರ ಸೇವಿಸುವುದು ಅಥವಾ ಕೆಲವು ಆಹಾರ ಪದಾರ್ಥಗಳ ಅಸಹಿಷ್ಣುತೆಯಿಂದಾಗಿ ಅನೇಕರು ಊಟದ ನಂತರ ಹೊಟ್ಟೆ ಉಬ್ಬರದ(Bloated) ಸಮಸ್ಯೆಯನ್ನು ಎದುರಿಸುತ್ತಾರೆ. ಇದು ಸಾಧಾರಣ ಸಮಸ್ಯೆಯಂತೆ ಕಂಡರೂ, ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖ್ಯಾತ ಜೀರ್ಣಾಂಗವ್ಯೂಹ ತಜ್ಞ (Gastroenterologist) ಡಾ. ಸೌರಭ್ ಸೇಥಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಸರಳ ಮತ್ತು ನೈಸರ್ಗಿಕ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.