ಕರಾವಳಿ ಭಾಗದ ಫೇಮಸ್ ಸೌತೆಕಾಯಿ ಇಡ್ಲಿ; ಮನೆಯಲ್ಲೇ ಮಾಡುವ ಸರಳ ವಿಧಾನ ಇಲ್ಲಿದೆ! Cucumber Idli

 Cucumber Idli (ಸಾಂದರ್ಭಿಕ ಚಿತ್ರ)
Cucumber Idli (ಸಾಂದರ್ಭಿಕ ಚಿತ್ರ)
Published on
Cucumber Idli: ಸೌತೆಕಾಯಿ ಇಡ್ಲಿ ಒಂದು ತುಂಬಾ ಆರೋಗ್ಯಕರ, ಸುಲಭ ಮತ್ತು ರುಚಿಕರವಾದ ಬೆಳಿಗ್ಗೆಯ ತಿಂಡಿ. ಇದು ಕರ್ನಾಟಕದ ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯವಾಗಿದೆ. ಇದನ್ನು ಅನೇಕರು ಇಷ್ಟ ಪಟ್ಟು ತಿನ್ನುವ ರೆಸಿಪಿ ಇದಾಗಿದ್ದು, ಕಡಿಮೆ ಸಮಯದಲ್ಲಿ ಇದನ್ನು ತಯಾರಿ ಮಾಡಬಹುದಾಗಿದೆ.

ಬೇಕಾಗುವ ಸಾಮಾಗ್ರಿಗಳು

* 2 ಸೌತೆಕಾಯಿ
* 2 ಕಪ್ ಇಡ್ಲಿ ರವೆ / ಬಿಳಿ ರವೆ
* 1 ಕಪ್ ತೆಂಗಿನಕಾಯಿ ತುರಿ
* 1 ಕಪ್ ಮೊಸರು
* 2–3 ಹಸಿ ಮೆಣಸಿನಕಾಯಿ
* 1 ಚಿಕ್ಕ ತುಂಡು ಶುಂಠಿ
* ಕೊತ್ತಂಬರಿ ಸೊಪ್ಪು
* 1 ಚಮಚ ಸಾಸಿವೆ
* 1 ಚಮಚ ಕಡಲೆಬೇಳೆ
* 2 ಚಮಚ ಎಣ್ಣೆ
* ಉಪ್ಪು

ಮಾಡುವ ವಿಧಾನ

ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ. ನಂತರ ಸ್ವಲ್ಪ ರಸ ತೆಗೆದು ಅದಕ್ಕೆ ರವೆ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಕೊಂಡು 5–10 ನಿಮಿಷ ಬಿಟ್ಟುಕೊಳ್ಳಿ. ಈಗ ಆ ಮಿಶ್ರಣಕ್ಕೆ ತೆಂಗಿನಕಾಯಿ ತುರಿ, ಹಸಿ ಮೆಣಸಿನಕಾಯಿ, ಶುಂಠಿ ಒಟ್ಟಿಗೆ ಮಿಕ್ಸರ್‌ನಲ್ಲಿ ಸ್ವಲ್ಪ ನೀರು ಹಾಕಿ ಒರಟಾಗಿ ರುಬ್ಬಿಕೊಳ್ಳಿ.
ರವೆ ಮಿಶ್ರಣಕ್ಕೆ ತೆಂಗಿನ ಮಿಶ್ರಣ, ಮೊಸರು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಂಡು ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಇಡ್ಲಿ ಮೋಲ್ಡ್‌ಗೆ ಎಣ್ಣೆ ಹಚ್ಚಿ ಮಿಶ್ರಣ ಹಾಕಿ. ಕುಕ್ಕರ್​ನಲ್ಲಿ ನೀರು ಕಾಯಿಸಿ ಸ್ಟೀಮ್​ ಮಾಡಿ 12-15 ನಿಮಿಷ ಬೇಯಿಸಿ. ಕಾಯಿ ಚಟ್ನಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net