ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಲು ಈ ಆರೋಗ್ಯಕರ ಖಿಚಡಿ ಸೇವಿಸಿ! Recipe

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Recipe: ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸರಳವಾದ, ಭಾರತೀಯ ಶೈಲಿಯ ಹೈ ಫೈಬರ್ ರೆಸಿಪಿಗಳು ಸಹಾಯ ಮಾಡುತ್ತವೆ. ಇವು ನಾರು ಹೆಚ್ಚಿರುವ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಿಂದ ತಯಾರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಮಲವನ್ನು ಮೃದುಗೊಳಿಸುತ್ತದೆ. ಹಾಗಾಗಿ ನಾವಿಂದು ಗ್ಯಾಸ್ಟ್ರಿಕ್​ ಕಡಿಮೆ ಮಾಡುವ ರೆಸಿಪಿ ಖಿಚಡಿ ಮಾಡುವುದನ್ನು ಹೇಳಿಕೊಡಲಿದ್ದೇವೆ.

ಬೇಕಾಗುವ ಪದಾರ್ಥಗಳು

* 1/2 ಕಪ್​ ಹೆಸರು ಬೇಳೆ
* 1/2 ಕಪ್​ ಅಕ್ಕಿ
* 1-2 ಚಮಚ ತುಪ್ಪ ಅಥವಾ ಎಣ್ಣೆ
* ಪಾಲಕ್ ಸೊಪ್ಪು
* ಕ್ಯಾರೆಟ್​
* ಸೋರೆಕಾಯಿ
* ಜೀರಿಗೆ
* ಇಂಗು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ಬೇಳೆಯನ್ನು 2-3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು 15-20 ನಿಮಿಷ ನನೆಸಿ ಬಿಡಿ. ನಂತರ ಒಂದು ಕುಕ್ಕರ್​ಗೆ ತುಪ್ಪ/ಎಣ್ಣೆ ಬಿಸಿ ಮಾಡಿ. ಜೀರಿಗೆ, ಹಿಂಗು ಹಾಕಿ ಚಟಪಟ ಸಿಡಿಸಿ. ನಂತರ ಅದಕ್ಕೆ ಸೋರೆಕಾಯಿ, ಬೇಳೆ, ತರಕಾರಿ ಸೇರಿಸಿ ಸ್ವಲ್ಪ ಸಮಯ ಹುರಿದುಕೊಳ್ಳಿ. ನಂತರ ಅಕ್ಕಿ ಸೇರಿಸಿ ನೀರು, ಉಪ್ಪು ಹಾಕಿ ಚೆನ್ನಾಗಿ ಕಲಸಿ 3 ವಿಶಲ್​ ಕೂಗಿಸಿಕೊಳ್ಳಿ. ನಂತರ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net