ಮನೆಯಲ್ಲೇ ಮಾಡಿ ಮಲೆನಾಡು ಶೈಲಿಯ ಕೊಬ್ಬರಿ ಕಡ್ಡಿ: ಸಂಜೆ ಚಹಾಕ್ಕೆ ಬೆಸ್ಟ್ ಕುರುಕುರು ತಿಂಡಿ! Kobbari Kaddi

Kobbari Kaddi ಸಾಂದರ್ಭಿಕ ಚಿತ್ರ
Kobbari Kaddi ಸಾಂದರ್ಭಿಕ ಚಿತ್ರ
Published on
Kobbari Kaddi: ಕೊಬ್ಬರಿ ಕಡ್ಡಿ ಎಂಬುದು ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹಬ್ಬ ಹರಿದಿನಗಳಲ್ಲಿ ಅಥವಾ ಸಂಜೆಯ ಚಹಾ ಸಮಯಕ್ಕೆ ತಯಾರಿಸುವ ಅತ್ಯಂತ ಗರಿಗರಿಯಾದ ಮತ್ತು ರುಚಿಕರವಾದ ಸಾಂಪ್ರದಾಯಿಕ ತಿಂಡಿಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಕುರುಕುರು ತಿಂಡಿಗಳಿಗಿಂತ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಕೊಬ್ಬರಿ ಕಡ್ಡಿ ರೆಸಿಪಿಯನ್ನು ನಾವಿಂದು ಹೇಳಿಕೊಡಲಿದ್ದೇವೆ.

ಬೇಕಾಗುವ ಪದಾರ್ಥಗಳು

* 1 ಕಪ್ ರವೆ (ಚಿರೋಟಿ ರವೆ ಅಥವಾ ಸಣ್ಣ ರವೆ) 
* 1/2 ಕಪ್ ಮೈದಾ ಹಿಟ್ಟು ಅಥವಾ ಅಕ್ಕಿ ಹಿಟ್ಟು
* 1/2 ಕಪ್ ಹಸಿ ಕಾಯಿತುರಿ 
* 1 ಚಮಚ ಜೀರಿಗೆ ಅಥವಾ ಓಮಕಾಳು  
* 1 ಚಮಚ ಖಾರದ ಪುಡಿ
 * 2 ಚಮಚ ಬಿಸಿ ಮಾಡಿದ ತುಪ್ಪ ಅಥವಾ ಬೆಣ್ಣೆ:
* ರುಚಿಗೆ ತಕ್ಕಷ್ಟು ಉಪ್ಪು
* ಕರಿಯಲು ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಒಂದು ಅಗಲವಾದ ಪಾತ್ರೆಗೆ ಚಿರೋಟಿ ರವೆ, ಮೈದಾ ಜೀರಿಗೆ/ಓಮಕಾಳು, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಒಣ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣಕ್ಕೆ 2 ಚಮಚ ಬಿಸಿ ಮಾಡಿದ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ, ಕೈಯಿಂದ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ. 
ಈಗ ನುಣ್ಣಗೆ ತುರಿದ ಹಸಿ ಕಾಯಿತುರಿಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಚಿಮುಕಿಸುತ್ತಾ, ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ನಾದಿಕೊಳ್ಳಿ. ಈ ಹಿಟ್ಟನ್ನು ಮುಚ್ಚಿ 15-20 ನಿಮಿಷ ನೆನೆಯಲು ಬಿಡಿ.
ನೆನೆದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಚಪಾತಿ ಮಣೆ ಅಥವಾ ಸೆಲ್ಫ್​ ಮೇಲೆ  ಹಿಟ್ಟಿನ ಉಂಡೆಯನ್ನು ಇಟ್ಟು, ಕೈಯಿಂದ ಲಟ್ಟಿಸುತ್ತಾ ಉದ್ದನೆಯ ಕಡ್ಡಿಗಳ ಆಕಾರಕ್ಕೆ ತನ್ನಿ. ತುಂಬಾ ದಪ್ಪ ಇರಬಾರದು, ಸಾಧಾರಣ ಪೆನ್ಸಿಲ್ ಗಾತ್ರದಲ್ಲಿದ್ದರೆ ಚೆನ್ನಾಗಿ ಬೇಯುತ್ತದೆ. 
ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದ ನಂತರ ಸಿದ್ಧಪಡಿಸಿದ ಕಡ್ಡಿಗಳನ್ನು ಒಂದೊಂದಾಗಿ ಹಾಕಿ. ಮಧ್ಯಮ ಉರಿಯಲ್ಲಿ ಹೊಂಬಣ್ಣಕ್ಕೆ ಬರುವವರೆಗೂ ಎರಡೂ ಬದಿ ಚೆನ್ನಾಗಿ ಕರಿಯಿರಿ ನಂತರ ಹೊರತೆಗೆಯಿರಿ. ಈಗ ಬಿಸಿಬಿಸಿಯಾದ, ಕುರುಕುರು ಎನ್ನುವ ಕೊಬ್ಬರಿ ಕಡ್ಡಿ ಸವಿಯಲು ಸಿದ್ಧ.
ಇದು ಸಂಪೂರ್ಣವಾಗಿ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ 15 ರಿಂದ 20 ದಿನಗಳ ಕಾಲ ಗರಿಗರಿಯಾಗಿಯೇ ಇರುತ್ತದೆ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿಯಲು ಇದು ಅದ್ಭುತ ಕಾಂಬಿನೇಷನ್ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net