ದೇಹದಲ್ಲಿ ಅತಿಯಾದ ಬೊಜ್ಜನ್ನು ಹೊಂದಿದ್ದರೆ ಈ ಸೂಪನ್ನು ಕುಡಿಯಿರಿ! Weight loss recipe
ಸಾಂದರ್ಭಿಕ ಚಿತ್ರ
Published on:
Copied
Follow Us
Weight loss recipe: ಇಂದಿನ ದಿನಗಳಲ್ಲಿ ಆದಷ್ಟು ಜನರು ದೇಹದಲ್ಲಿ ಅಧಿಕ ಬೊಜ್ಜನ್ನು ಹೊಂದಿರುತ್ತಾರೆ. ಇದನ್ನು ಕರಗಿಸಿಕೊಳ್ಳಲು ಅನೇಕ ರೀತಿಯಲ್ಲಿ ಹರಸಾಹಸ ಪಡುತ್ತಿರುತ್ತಾರೆ. ಅದಕ್ಕಾಗಿ ಆಹಾರ ಸೇವನೆಯಲ್ಲಿ ಪಥ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಆದರೂ, ಕೆಲವೊಮ್ಮೆ ಬೊಜ್ಜು ಕಡಿಮೆಯಾಗದೇ, ಚಿಂತಿತರಾಗಿರುತ್ತಾರೆ. ಯಾರು ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತೀರೋ ಅವರು ಈ ಸೂಪನ್ನು ಸೇವಿಸುವುದರಿಂದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು
* 1 ಬಟ್ಟಲು ಪಾಲಕ್ ಸೊಪ್ಪು
* 1 ಚೂರು ಹಸಿ ಅರಶಿನ
* 5-6 ಕಾಳು ಮೆಣಸು
* 1 ಚಮಚ ಹುರಿದ ಜೀರಿಗೆ
* ¼ ಚಮಚ ಕಾಳುಮೆಣಸು ಪುಡಿ
* ಉಪ್ಪು
ಮಾಡುವ ವಿಧಾನ
ಮೊದಲು ಒಂದು ಬಟ್ಟಲಿನಲ್ಲಿ ಪಾಲಕ್ ಸೊಪ್ಪನ್ನು ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ಅರಶಿನ, ಕಾಳು ಮೆಣಸು, ಜೀರಿಗೆ, ಉಪ್ಪು ಸೇರಿಸಿ ಕುದಿಸಿಕೊಳ್ಳಿ. ನಂತರ ಸೋಸಿ, ಬೆಚ್ಚಗಿರುವಾಗಲೇ ಕುಡಿಯಿರಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.