ಅಡುಗೆ ಬರಲ್ಲ ಅನ್ನೋ ಚಿಂತೆ ಬಿಡಿ, 10 ನಿಮಿಷದಲ್ಲಿ ಮಾಡಿ ರುಚಿಯಾದ ದಾಲ್ ಖಿಚಡಿ! Recipe

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Dal Khichdi : ಬ್ಯಾಚುಲರ್‌ಗಳಿಗೆ ಅಡುಗೆ ಮಾಡುವುದು ಒಂದು ದೊಡ್ಡ ಸಾಹಸ. ಅದರಲ್ಲೂ ಸಮಯ ಕಡಿಮೆ ಇದ್ದಾಗ ಅಥವಾ ಸುಸ್ತಾದಾಗ ಹೊಟ್ಟೆ ತುಂಬುವ ಆಹಾರ ಬೇಕೆನಿಸುವುದು ಸಹಜ. ಹಾಗಾಗಿ ಹೆಚ್ಚಾಗಿ ಅವರು ಹೋಟೆಲ್​ ಮೊರೆ ಹೋಗುತ್ತಾರೆ. ಎಷ್ಟು ದಿನ ಅಂತ ಹೋಟೆಲ್​ ಊಟ ಮಾಡ್ತೀರಾ? ಇದು ನಿಮ್ಮ ಹೊಟ್ಟೆಗೆ ಹಿತ ಅಲ್ಲ. ಅಂತವರಿಗಾಗಿ ನಾವಿಂದು ದಾಲ್ ಖಿಚಡಿ ಮಾಡೋದನ್ನ ಹೇಳಿ ಕೊಡ್ತಾ ಇದ್ದೀವಿ. ಈಗ್ಲೆ ಮಾಡಿ ರುಚಿ ನೋಡಿ.

ಬೇಕಾಗುವ ಪದಾರ್ಥಗಳು

* ½ ಕಪ್ ಹೆಸರು ಬೇಳೆ 
½ ಕಪ್ ಅಕ್ಕಿ 
4-5 ಕಪ್  ನೀರು 
2 ಟೀಸ್ಪೂನ್ ತುಪ್ಪ 
1 ಟೀಸ್ಪೂನ್ ಜೀರಿಗೆ 
½ ಟೀಸ್ಪೂನ್ ಅರಿಶಿನ 
1 ಇಂಚು ಶುಂಠಿ 
1-2  ಹಸಿ ಮೆಣಸಿನಕಾಯಿ 
ರುಚಿಗೆ ತಕ್ಕಷ್ಟು ಉಪ್ಪು 
ಐಚ್ಛಿಕ: ಕ್ಯಾರೆಟ್, ಬಟಾಣಿ, ಈರುಳ್ಳಿ, ಟೊಮ್ಯಾಟೊ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಹೆಸರು ಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ತೊಳೆದು 10-15 ನಿಮಿಷ ನೆನೆಸಿಟ್ಟುಕೊಳ್ಳಿ. ಕುಕ್ಕರ್​ಗೆ 1 ಚಮಚ ತುಪ್ಪ ಬಿಸಿ ಮಾಡಿ, ಜೀರಿಗೆ ಹಾಕಿ ಒಗ್ಗರಣೆ ಮಾಡಿಟ್ಟುಕೊಳ್ಳಿ. ನಂತರ ಅದಕ್ಕೆ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಇದಾದ ಬಳಿಕ ಆ ಮಿಶ್ರಣಕ್ಕೆ ನೆನೆಸಿದ ಬೇಳೆ-ಅಕ್ಕಿ ಹಾಕಿ, ಅರಿಶಿನ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 4-5 ಕಪ್ ನೀರು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿರಿ. 3-4 ವಿಶಲ್​ ಬರುವವರೆಗೆ ಬೇಯಿಸಿ ತಣ್ಣಗಾದ ನಂತರ ತುಪ್ಪ ಸೇರಿಸಿ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net