ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಯೌವನದ ರಹಸ್ಯ! ಇದನ್ನು ಬಳಸುವ ಸರಿಯಾದ ವಿಧಾನ ಇಲ್ಲಿದೆ.. Mango Peel Benefits

Mango Peel Benefits  (ಸಾಂದರ್ಭಿಕ ಚಿತ್ರ)
Mango Peel Benefits (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಆರಂಭವಾಗುತ್ತಿದ್ದಂತಲೇ ವಿವಿಧ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ
  • ಎಥೇಚ್ಛವಾಗಿ ಜನರು ಹಣ್ಣನ್ನು ತಿಂದು ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ
  • ಮಾವಿನ ಹಣ್ಣಿನ ತಿರುಳಿನಷ್ಟೇ ಪೋಷಕಾಂಶಗಳು ಅದರ ಸಿಪ್ಪೆಯಲ್ಲೂ ಅಡಗಿರುತ್ತದೆ
Mango Peel Benefits: ಬೇಸಿಗೆ ಆರಂಭವಾಗುತ್ತಿದ್ದಂತಲೇ ವಿವಿಧ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈಗಾಗಲೇ ಜನರು ಈ ಹಣ್ಣನ್ನು ಖರೀದಿಸಲು ಮುಂದಾಗಿರುತ್ತಾರೆ. ಎಥೇಚ್ಛವಾಗಿ ಹಣ್ಣನ್ನು ತಿಂದು ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ವಾಸ್ತವವಾಗಿ, ಮಾವಿನ ಹಣ್ಣಿನ ತಿರುಳಿನಷ್ಟೇ ಪೋಷಕಾಂಶಗಳು ಅದರ ಸಿಪ್ಪೆಯಲ್ಲೂ ಅಡಗಿರುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿರುವುದಿಲ್ಲ. ಈ ಸಿಪ್ಪೆ ಬಳಸಿ ಕೆಲವೊಂದು ಅಡುಗೆಮನೆಯ ಅದ್ಭುತ ಭಕ್ಷ್ಯಗಳನ್ನು ಮಾಡಬಹುದು ಹೇಗಂತೀರಾ ಇಲ್ಲಿದೆ ನೋಡಿ...

ಮಾವಿನ ಸಿಪ್ಪೆಯಿಂದ ಮಾಡಿ ಗರಿಗರಿ ಚಿಪ್ಸ್​!

ಮಾವಿನ ಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲಿಗೆ ಅದರಿಂದ ಸಂಜೆಯ ಚಹಾ ಸಮಯಕ್ಕೆ ಅದ್ಭುತವಾದ 'ಮ್ಯಾಂಗೋ ಪೀಲ್ ಚಿಪ್ಸ್' ತಯಾರಿಸಬಹುದು. ಮೊದಲಿಗೆ ಮಾವಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಅದರ ಮೇಲೆ ಉಪ್ಪು ಮತ್ತು ಚಾಟ್​ ಮಸಾಲ ಸಿಂಪಡಿಸಿ ಒಲೆಯಲ್ಲಿ ಬೇಯಿಸಿರಿ. ನಂತರ ಗರಿಗರಿಯಾದ ಮಾವಿನ ಚಿಪ್ಸ್​ ಸವಿಯಿರಿ.

ಜ್ಯೂಸ್​ನಲ್ಲಿ ಬಳಕೆ

ಮಾವಿನ ಸಿಪ್ಪೆಯನ್ನು ನೀರು ಮತ್ತು ಸ್ವಲ್ಪ ಸಕ್ಕರೆಯೊಂದಿಗೆ ಕುದಿಸಿರಿ ನಂತರ ಸೋಸಿ ಫ್ರಿಜ್ಡ್​ನಲ್ಲಿಟ್ಟು ತಣ್ಣಗಾದ ನಂತರ ಕುಡಿಯಿರಿ. ಇದು ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ ಪ್ರಯೋಜನ ನೀಡುತ್ತದೆ.

ಮಾವಿನ ಸಿಪ್ಪೆಯಿಂದ ಫೇಸ್ ಪ್ಯಾಕ್ ತಯಾರಿಸಿ

ಮಾವಿನಹಣ್ಣಿನಲ್ಲಿ ವಿಟಮಿನ್ ಸಿ, ಆಂಟಿ-ಆಕ್ಸಿಡೆಂಟ್​ನಂತಹ ಅನೇಕ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವೆಲ್ಲವೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿ ಮಾವಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ. ಇದನ್ನು ಯಾವುದಾದರೂ ಫೇಸ್​ಪ್ಯಾಕ್​, ಮೊಸರು ಅಥವಾ ಕಡಲೆಹಿಟ್ಟಿನಲ್ಲಿ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಹರ್ಬಲ್ ಟೀ

ಚೆನ್ನಾಗಿ ತೊಳೆದು ಒಣಗಿಸಿದ ಮಾವಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಅದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿನೆಗರ್ ಮಾಡಿ

ಒಂದು ಸ್ವಚ್ಛವಾದ ಗಾಜಿನ ಜಾರ್‌ಗೆ ಈ ಸಿಪ್ಪೆಗಳನ್ನು ಹಾಕಿ. ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಬೆರೆಸಿದ ನೀರನ್ನು ಸುರಿಯಿರಿ. ಜಾರ್‌ನ ಬಾಯಿಯನ್ನು ಗಾಳಿಯಾಡುವಂತೆ ತೆಳುವಾದ ಹತ್ತಿ ಬಟ್ಟೆಯಿಂದ ಮುಚ್ಚಿ, ರಬ್ಬರ್ ಬ್ಯಾಂಡ್ ಅಥವಾ ದಾರದಿಂದ ಕಟ್ಟಿರಿ. ಈ ಜಾರ್ ಅನ್ನು ತಂಪಾದ ಜಾಗದಲ್ಲಿ 3 ರಿಂದ 4 ವಾರಗಳ ಕಾಲ ಇರಿಸಿ. ಪ್ರತಿ ಎರಡು ದಿನಕ್ಕೊಮ್ಮೆ ಮರದ ಚಮಚದಿಂದ ಈ ಮಿಶ್ರಣವನ್ನು ಸ್ವಲ್ಪ ಕಲಕುತ್ತಿರಿ. 4 ವಾರಗಳ ನಂತರ, ಮಿಶ್ರಣವು ಹುಳಿ ವಾಸನೆ ಬರಲು ಪ್ರಾರಂಭಿಸುತ್ತದೆ. ಆಗ ಸಿಪ್ಪೆಗಳನ್ನು ಸೋಸಿ ತೆಗೆದು, ಉಳಿದ ದ್ರವವನ್ನು ಮಾತ್ರ ಮತ್ತೊಂದು ಗಾಜಿನ ಬಾಟಲಿಗೆ ಹಾಕಿಡಿ. ಇದನ್ನು ಸೋಸಿ ನಂತರ ಬಳಸಿರಿ.

ರುಚಿಯಾದ ಚಟ್ನಿ ತಯಾರಿಸಿ

ಮಾವಿನ ಸಿಪ್ಪೆಯನ್ನು ಸ್ವಲ್ಪ ಸಾಸಿವೆ, ಹಸಿಮೆಣಸಿನಕಾಯಿ ಮತ್ತು ಬೆಲ್ಲದೊಂದಿಗೆ ಸೇರಿಸಿ ರುಬ್ಬಿರಿ. ಈಗ ಚಟ್ನಿ ರೆಡಿಯಾಗಿದೆ. ಇದನ್ನು ದೋಸೆ ಅಥವಾ ರೊಟ್ಟಿಯೊಂದಿಗೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net