ಈ 5 ಹಣ್ಣುಗಳನ್ನು ಮರೆಯದೇ ತಿನ್ನಿ! ಚಳಿಗಾಲದ ಕಾಯಿಲೆಗಳಿಗೆ ಹೇಳಿ ಗುಡ್‌ಬೈ..winter

winter
winter
Published on
ಬೆಂಗಳೂರು: ( winter ) ಚಳಿಗಾಲವು ಹವಾಮಾನ ವೈಪರೀತ್ಯದಿಂದಾಗಿ ಶೀತ, ಕೆಮ್ಮು ಮತ್ತು ಜ್ವರದಂತಹ ಸೋಂಕುಗಳನ್ನು ಹೊತ್ತು ತರುತ್ತದೆ. ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸಿಕೊಳ್ಳುವುದು ಬಹಳ ಮುಖ್ಯ.

ಚಳಿಗಾಲದಲ್ಲಿ ಸೂರ್ಯನ ಬೆಳಕು ಬಹಳ ಕಡಿಮೆ!

ಚಳಿಗಾಲದಲ್ಲಿ ಸೂರ್ಯನ ಬೆಳಕು ಬಹಳ ಕಡಿಮೆ ಇರುತ್ತದೆ.. ಇದರಿಂದಾಗಿ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಸರಿಯಾಗಿ ಸಿಗುವುದಿಲ್ಲ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯ ಜೊತೆಗೆ, ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ಸುಲಭವಾಗಿ ದೊರೆಯುವ ಮತ್ತು ಆರೋಗ್ಯಕ್ಕೆ ವರದಾನವಾಗಿರುವ ಕೆಲವು ಹಣ್ಣುಗಳನ್ನು ಸೇವಿಸುವುದು ಮುಖ್ಯವಾಗಿದೆ. ಹೀಗಾಗಿ ನಾವು ಕೆಲವು ಹಣ್ಣುಗಳನ್ನು ತಿನ್ನಲು ನಿಮಗೆ ಸಲಹೆ ನೀಡುತ್ತಿದ್ದೇವೆ.

ಪೇರಲ (Guava)

ಚಳಿಗಾಲದಲ್ಲಿ ಪೇರಲ ಹಣ್ಣು ಹೆಚ್ಚಿನ ವಿಟಮಿನ್ 'ಸಿ' ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಿದೆ.

ದಾಳಿಂಬೆ:

ದಾಳಿಂಬೆಯನ್ನು ಚಳಿಗಾಲದಲ್ಲಿ ಸೂಪರ್‌ಫುಡ್ ಎಂದು ಕರೆಯಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ರಕ್ತಹೀನತೆಯನ್ನು ತಡೆಯುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಸೇಬು (Apple)

"ದಿನಕ್ಕೊಂದು ಸೇಬು ವೈದ್ಯರಿಂದ ದೂರವಿರಿಸುತ್ತದೆ" ಎಂಬ ಮಾತು ಚಳಿಗಾಲಕ್ಕೆ ಹೆಚ್ಚು ಅನ್ವಯಿಸುತ್ತದೆ. ಸೇಬಿನಲ್ಲಿರುವ ನಾರಿನಾಂಶ (Fiber) ಮತ್ತು ವಿಟಮಿನ್‌ಗಳು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತವೆ ಹಾಗೂ ಶಕ್ತಿಯನ್ನು ನೀಡುತ್ತವೆ.

ಕಿವಿ ಹಣ್ಣು (Kiwi)

ಕಿವಿ ಹಣ್ಣಿನಲ್ಲಿ ವಿಟಮಿನ್ 'ಸಿ', ವಿಟಮಿನ್ 'ಕೆ' ಮತ್ತು ಫೋಲೇಟ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ವೈರಲ್ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಪಪ್ಪಾಯ

ಚಳಿಗಾಲದಲ್ಲಿ ಪಪ್ಪಾಯಿ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಇದು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net