ಈ 6 ಆಹಾರಗಳ ಜತೆ ಟೀ ಕುಡಿಯುವ ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ! ಇಲ್ಲದಿದ್ರೆ ಅಪಾಯ ಕಟ್ಟಿಟ್ಟಬುತ್ತಿ | Tea

ಚಹಾ
ಚಹಾ
Published on
Tea: ಚಹಾ ಇಲ್ಲದ ದಿನವೇ ಇಲ್ಲ, ದಿನಚರಿಯೂ ಇಲ್ಲ ಎಂಬುದು ಹಲವರ ಮಾತು. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್​ ಬಿಸಿ ಬಿಸಿ ಟೀ ಕುಡಿದರೆ, ಮುಂದಿನ ಎಲ್ಲ ಕೆಲಸಗಳು ಸರಳ, ಸುಲಭ, ಸುಂದರ ಎಂಬ ಗಟ್ಟಿಯಾದ ಭಾವನೆ ಟೀ ಪ್ರಿಯರಿಗೆ. ಅದರಲ್ಲೂ, ಚಹಾದೊಂದಿಗೆ ಒಂದೆರೆಡು ಬಿಸ್ಕತ್ತು, ಬನ್​, ಬ್ರೆಡ್​ ತುಂಡಗಳಿದ್ದರೆ ಇನ್ನೂ ಮಜಾ ಬಿಡಿ. ಈ ಅಭ್ಯಾಸ ಕೆಲವರಿಗಲ್ಲ, ಹಲವರಿಗಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಬೆಳಗ್ಗಿನ ಸಮಯದಲ್ಲಿ ಟೀ ಜತೆ ಬಿಸ್ಕತ್​, ಬ್ರೆಡ್​ ಸೇವಿಸುವ ಚಹಾ ಪ್ರಿಯರು, ಅದೇ ಸಂಜೆ ವೇಳೆ ಸ್ಯಾಂಡ್​ವಿಚ್​, ಪಕೋಡಾ, ಸಮೋಸಾ ಸೇರಿದಂತೆ ಎಣ್ಣೆಯಲ್ಲಿ ಕರಿದ ಬಿಸಿ ಬಿಸಿ ತಿನಿಸುಗಳ ರುಚಿ ಬೇಕೆಂದು ಬಯಸುತ್ತಾರೆ. ಅಸಲಿಗೆ, ಇದು ನಾಲಿಗೆಗೆ ಹಿತ, ಒಳ್ಳೆಯ ರುಚಿ ನೀಡಿದ್ದೇ ಆದರೂ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿ ಮಾಡುವುದಂತು ಖಚಿತ. ಅಷ್ಟಕ್ಕೂ, ಯಾವೆಲ್ಲ ಆಹಾರಗಳೊಂದಿಗೆ ಅಥವಾ ಪದಾರ್ಥಗಳ ಜತೆ ಟೀ ಕುಡಿಯುವುದು ಸರಿಯಲ್ಲ ಎಂಬುದರ ವಿವರ ಹೀಗಿದೆ ಗಮನಿಸಿ.

ಕಬ್ಬಿಣಾಂಶ ಅಧಿಕವಿರುವ ಆಹಾರಗಳು

ಕಬ್ಬಿಣಾಂಶ ಹೆಚ್ಚಿರುವ ಆಹಾರಗಳಾದ ಸೊಪ್ಪು, ತರಕಾರಿಗಳು, ದ್ವಿದಳ ಧಾನ್ಯಗಳ ಜತೆ ಚಹಾ ಸವಿಯಬಾರದು. ಟೀ ಟ್ಯಾನಿನ್‌ಗಳು ಮತ್ತು ಆಕ್ಸಲೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಕಬ್ಬಿದ ಅಂಶವನ್ನು ಒದಗಿಸುವಲ್ಲಿ ಅಡಚಣೆ ಉಂಟುಮಾಡುತ್ತದೆ.

ಎಣ್ಣೆಯಲ್ಲಿ ಕರಿದ ತಿನಿಸುಗಳು

ಚಹಾಗೆ ಪಕೋಡಾ, ಬಜ್ಜಿ, ಸಮೋಸಾ ಈವೆಲ್ಲವೂ ತುಂಬಾ ರುಚಿಕರವಾದ ತಿಂಡಿಗಳೇ ನಿಜ. ಆದರೆ, ಈ ಆಹಾರಗಳನ್ನು ಎಣ್ಣೆಯಿಂದಲೇ ಮಾಡುವುದರಿಂದ ಇದು ಟೀಗೆ ಉತ್ತಮ ಹೊಂದಾಣಿಕೆ ಅಲ್ಲವೇ ಅಲ್ಲ. ಇದು ಹೊಟ್ಟೆ ನೋವು ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಕೋಲ್ಡ್​ ಫುಡ್ಸ್

ಚಹಾ ಕುಡಿದ ಕೆಲವೇ ಕ್ಷಣಗಳ ಬಳಿಕ ಐಸ್ ಕ್ರೀಮ್ ಅಥವಾ ಕೋಲ್ಡ್ ಪದಾರ್ಥಗಳನ್ನು ತಿನ್ನಬೇಡಿ. ಬೇರೆ ಬೇರೆ ತಾಪಮಾನ ಹೊಂದಿರುವ ಆಹಾರಗಳನ್ನು ತಿನ್ನುವುದು ಅಜೀರ್ಣಕ್ಕೆ ಕಾರಣವಾಗಬಹುದು. ನಿಮಗೆ ಹಾಗೂ ತಿನ್ನಲೇ ಬೇಕು ಎನಿಸಿದರೆ, ಬಿಸಿ ಚಹಾ ಕುಡಿದ 30ರಿಂದ 45 ನಿಮಿಷಗಳ ಬಳಿಕ ಇಂತಹ ಕೋಲ್ಡ್​ ಐಟಂಗಳನ್ನು ಸವಿಯುವುದು ಸೂಕ್ತ.

ಅರಿಶಿಣ

ಪ್ರತಿಯೊಬ್ಬರಿಗೂ ಗೊತ್ತಿರುವಂತೆ ಅರಿಶಿಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಚಹಾದೊಂದಿಗೆ ಅರಿಶಿಣವನ್ನು ಬೆರೆಸುವುದು ಅಪಾಯಕಾರಿಯೇ. ಕಾರಣ ಇದರಲ್ಲಿರುವ ಸಂಯುಕ್ತಗಳು ಹೊಟ್ಟೆಯ ಒಳಪದರದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದು ಅಜೀರ್ಣ ಮತ್ತು ಎದೆಯುರಿಗೂ ಕಾರಣವಾಗಬಹುದು.
ಅಧಿಕ ಪ್ರೋಟಿನ್​ಯುಕ್ತ ಆಹಾರಗಳು
ಸ್ನಾಯುಗಳ ದುರಸ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರೋಟೀನ್‌ಗಳು ಅತ್ಯಗತ್ಯ. ಆದರೆ, ಪ್ರೋಟೀನ್ ಭರಿತ ಆಹಾರಗಳೊಂದಿಗೆ ಟೀ ಸೇವಿಸುವುದರಿಂದ ಚಹಾದ ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ಒಂದೊಳ್ಳೆ ಚಹಾ ಅನುಭವಕ್ಕೆ, ಪ್ರೋಟೀನ್-ಭರಿತ ಆಹಾರಗಳ ಜತೆಗೆ ಇಂತಹ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net