Curd: ಬೇಸಿಗೆಯಲ್ಲಿ ಮೊಸರನ್ನ ತಿನ್ನೋದು ಕೆಲವರಿಗೆ ತುಂಬ ಖುಷಿ ಕೊಡುತ್ತದೆ. ಅದರಲ್ಲೂ ಮೊಸರು ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿಸುವಲ್ಲಿ ಸಹಕಾರಿ. ಈ ವಿಚಾರ ಎಷ್ಟೋ ಮಂದಿಗೆ ಗೊತ್ತಿರದು. ಮೊಸರು ಮಿಶ್ರಿತ ಅನ್ನ ಬ್ಯಾಚುಲರ್ಸ್ಗೆ ಒಂದೊತ್ತಿನ ಊಟವಾದರೆ, ಸಂಸಾರಸ್ಥರಿಗೆ ಇದು ಮಜ್ಜಿಗೆಯಾಗಿ, ಲಸ್ಸಿಯಾಗಿ ಹೊಟ್ಟೆ ತಂಪಾಗಿಡುತ್ತದೆ. ಆದರೆ, ಗೃಹಿಣಿಯರಿಗೆ ಬೇಸಿಗೆಯಲ್ಲಿ ಮೊಸರು ಬೇಗನೆ ಹುಳಿಯಾಗುತ್ತದೆ ಎಂಬುದೇ ಚಿಂತೆ.