ಮದ್ಯಪಾನ-ಧೂಮಪಾನ ಮಾಡುವವರು ದಿನಕ್ಕೊಂದು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್ ಸತ್ಯ! Banana Benefits

Banana Benefits ಸಾಂದರ್ಭಿಕ ಚಿತ್ರ
Banana Benefits ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಧೂಮಪಾನ ಮತ್ತು ಮದ್ಯಪಾನಕ್ಕೆ ಜನರು ತುತ್ತಾಗುತ್ತಾರೆ
  • ಈ ಅಭ್ಯಾಸಗಳು ದೇಹದ ಆಂತರಿಕ ಅಂಗದ ಮೇಲೆ ತೀವ್ರವಾದ ಒತ್ತಡ ಮತ್ತು ಹಾನಿ ಉಂಟು ಮಾಡುತ್ತವೆ
  • ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಆಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ
  • ಮದ್ಯಪಾನ ಮಾಡುವುದರಿಂದ ದೇಹದಲ್ಲಿ ಮೂತ್ರ ವಿಸರ್ಜನೆ ಹೆಚ್ಚಾಗಿ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ
Banana Benefits: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಧೂಮಪಾನ ಮತ್ತು ಮದ್ಯಪಾನಕ್ಕೆ ಜನರು ತುತ್ತಾಗುತ್ತಾರೆ. ಆದಾಗ್ಯೂ, ಈ ಅಭ್ಯಾಸಗಳು ದೇಹದ ಆಂತರಿಕ ಅಂಗದ ಮೇಲೆ ತೀವ್ರವಾದ ಒತ್ತಡ ಮತ್ತು ಹಾನಿ ಉಂಟು ಮಾಡುತ್ತವೆ. ಆದಾಗ್ಯೂ, ಇಂತಹ ಪರಿಸ್ಥಿತಿಯಲ್ಲಿ ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಆಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಿದ್ದರೆ ಮದ್ಯಪಾನ ಮತ್ತು ಧೂಮಪಾನ ಮಾಡಿದ ನಂತರ ಬಾಳೆ ಹಣ್ಣು ಸೇವಿಸುವುದರಿಂದ ಆಗುವಂತಹ ಪ್ರಯೋಜನಗಳನ್ನು ನೋಡೋಣ ಬನ್ನಿ...

ಕಳೆದುಹೋದ ಪೊಟ್ಯಾಸಿಯಂ ಮರುಪೂರಣ

ಮದ್ಯಪಾನ ಮಾಡುವುದರಿಂದ ದೇಹದಲ್ಲಿ ಮೂತ್ರ ವಿಸರ್ಜನೆ ಹೆಚ್ಚಾಗಿ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದರೊಂದಿಗೆ ದೇಹದಲ್ಲಿರುವ ಪ್ರಮುಖ ಖನಿಜಾಂಶವಾದ 'ಪೊಟ್ಯಾಸಿಯಂ' ಮೂತ್ರದ ಮೂಲಕ ಹೊರಟುಹೋಗುತ್ತದೆ. ಇಂತಹ ಸಂದರ್ಭದಲ್ಲಿ ಬಾಳೆಹಣ್ಣನ್ನು ಸೇವಿಸುವುದರಿಂದ ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿ ಮರುದಿನ ಕಾಡುವ ತಲೆನೋವು ಹಾಗೂ ಸುಸ್ತನ್ನು ಕಡಿಮೆ ಮಾಡುತ್ತದೆ.

ಲಿವರ್ ಮತ್ತು ಕಿಡ್ನಿ ರಕ್ಷಣೆ

ಮದ್ಯಪಾನವು ಲಿವರ್ ಮೇಲೆ ನೇರ ಪರಿಣಾಮ ಬೀರಿದರೆ, ಧೂಮಪಾನವು ರಕ್ತದೊತ್ತಡವನ್ನು ಹೆಚ್ಚಿಸಿ ಕಿಡ್ನಿಗಳ ಮೇಲೆ ಒತ್ತಡ ಹೇರುತ್ತದೆ. ಇದಾದ ಬಳಿಕ ಬಾಳೆಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ ಬಿ 6 ಲಿವರ್‌ನಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಯಕೃತ್ತಿಗೆ ಶಕ್ತಿ ನೀಡುತ್ತದೆ. ಅಲ್ಲದೆ, ಇದರಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಕಿಡ್ನಿಗಳ ಆರೋಗ್ಯವನ್ನು ರಕ್ಷಿಸುತ್ತದೆ.
ಮದ್ಯಪಾನವು ಲಿವರ್ ಮತ್ತು ಕಿಡ್ನಿ ಮೇಲೆ ನೇರ ಪರಿಣಾಮ ಬೀರುತ್ತದೆ

ಧೂಮಪಾನದ ನಿಕೋಟಿನ್ ಮುಕ್ತಿಗೆ ನೆರವು

ಧೂಮಪಾನ ಬಿಡಲು ಪ್ರಯತ್ನಿಸುವಾಗ ಅಥವಾ ಧೂಮಪಾನದ ಗೀಳು ಹೆಚ್ಚಾದಾಗ ದೇಹವು ನಿಕೋಟಿನ್ ಕೊರತೆಯಿಂದಾಗಿ ತೀವ್ರ ಮಾನಸಿಕ ಒತ್ತಡ ಮತ್ತು ನಿಶ್ಯಕ್ತಿಯನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ಬಾಳೆಹಣ್ಣು ಸೇವಿಸುವುದರಿಂದ ಧೂಮಪಾನದ ಮೇಲಿರುವ ಕಡುಬಯಕೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ನಿಕೋಟಿನ್ ಕೊರತೆಯಿಂದಾಗಿ ತೀವ್ರ ಮಾನಸಿಕ ಒತ್ತಡ

ಅಸಿಡಿಟಿ ಮತ್ತು ಅಲ್ಸರ್ ತಡೆಗಟ್ಟುವಿಕೆ

ಮದ್ಯಪಾನ ಮತ್ತು ಧೂಮಪಾನ ಎರಡೂ ಹೊಟ್ಟೆಯಲ್ಲಿ ಅತಿಯಾದ ಆಸಿಡ್ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಇದು ದೀರ್ಘಕಾಲದ ಗ್ಯಾಸ್ಟ್ರಿಟಿಸ್ ಅಥವಾ ಹೊಟ್ಟೆಯ ಅಲ್ಸರ್‌ಗೆ ದಾರಿ ಮಾಡಿಕೊಡುತ್ತದೆ. ಆದಾಗ್ಯೂ, ನೀವು ಹೊಟ್ಟೆಯ ಒಳಪದರವನ್ನು ಆಸಿಡ್​ನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಲಗುವ ಮುನ್ನ ಒಂದು ಬಾಳೆಹಣ್ಣನ್ನು ತಿನ್ನಿರಿ. ಇದು ತಕ್ಷಣವೇ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಅತಿಯಾದ ಆಸಿಡ್ ಉತ್ಪತ್ತಿಯಾಗಲು ಕಾರಣ

ಹಾನಿಗೊಳಗಾದ ಜೀವಕೋಶಗಳ ಪುನಶ್ಚೇತನ

ಧೂಮಪಾನದ ಹೊಗೆಯಿಂದಾಗಿ ದೇಹದಲ್ಲಿ 'ಫ್ರೀ ರಾಡಿಕಲ್ಸ್' ಎಂಬ ಹಾನಿಕಾರಕ ಕಣಗಳು ಸೃಷ್ಟಿಯಾಗಿ ಜೀವಕೋಶಗಳು ಬೇಗನೆ ನಾಶವಾಗುತ್ತವೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಬಾಳೆಹಣ್ಣನ್ನು ಸಂಜೀವಿನಿ ಎಂದು ಕರೆಯುತ್ತಾರೆ. ಆದಾಗ್ಯೂ, ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಪ್ರಮುಖ ಆಂಟಿ-ಆಕ್ಸಿಡೆಂಟ್‌ಗಳು ಹಾನಿಗೊಳಗಾದ ಜೀವಕೋಶವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net