ಸಿಹಿ ಗೆಣಸು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಅವು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಈ ಶಕ್ತಿಯು ನಿಮ್ಮನ್ನು ಬೆಳಿಗ್ಗೆ ಪೂರ್ತಿ ಸಕ್ರಿಯವಾಗಿರಿಸುತ್ತದೆ. ಅಲ್ಲದೆ, ಸಕ್ಕರೆ ಅಂಶ ವೇಗವಾಗಿ ಕುಸಿಯದಂತೆ ನೋಡಿಕೊಳ್ಳುತ್ತದೆ. ಹಾಲು ಮತ್ತು ಬೆಲ್ಲದೊಂದಿಗೆ ತಿನ್ನಲು ಉತ್ತಮವಾಗಿದೆ. ಇದು ದಿನವನ್ನು ಸುಲಭವಾಗಿ ಕಳೆಯಲು ನಿಮಗೆ ಸಹಾಯ ಮಾಡುತ್ತದೆ.