ಮನೆಯಲ್ಲಿ ಹಲಸಿನ ಹಣ್ಣು ಇದೆಯೇ? ಹಾಗಾದರೆ ಇಂದೇ ಟ್ರೈ ಮಾಡಿ ಈ ಡಿಫರೆಂಟ್ ಸ್ವೀಟ್.. Jack fruit Gatti ​

Jack fruit Gatti ​ (ಸಾಂದರ್ಭಿಕ ಚಿತ್ರ)
Jack fruit Gatti ​ (ಸಾಂದರ್ಭಿಕ ಚಿತ್ರ)
Published on
Jack fruit Gatti: ಏಪ್ರಿಲ್​ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ಎಲ್ಲಿ ನೋಡಿದರೂ ಹಲಸಿನ ಹಣ್ಣಿನ ಘಮವನ್ನು ನೋಡಬಹುದು. ಮಾರ್ಕೆಟ್​ಗಳಲ್ಲಿ ಈ ಸೀಸನ್​ ಇದರದ್ದೇ ಆಗಿರುತ್ತದೆ. ಈ ಹಣ್ಣನ್ನು ಅನೇಕರು ಇಷ್ಟಪಟ್ಟು ತಿನ್ನುವುದನ್ನು ನಾವು ನೋಡಿರುತ್ತೇವೆ. ಅಂದಹಾಗೇ, ಈ ಹಣ್ಣಿನಿಂದ ಮಾಡುವ ಸ್ವೀಟ್​ಗಳು ಯಾರಿಗೆ ಇಷ್ಟ ಆಗಲ್ಲ ಹೇಳಿ. ಅಂದಹಾಗೇ ನಾವಿಂದು ಹಲಸಿನ ಹಣ್ಣಿನ ಕಡುಬು ಮಾಡುವುದನ್ನು ಹೇಳಿಕೊಡಲಿದ್ದೇವೆ.
ಹಲಸಿನ ಹಣ್ಣಿನ ಕಡುಬು ಕರಾವಳಿ ಭಾಗದ ಒಂದು ಸಾಂಪ್ರದಾಯಿಕ ಮತ್ತು ಅತ್ಯಂತ ರುಚಿಕರವಾದ ಸಿಹಿ ತಿಂಡಿ. ಇದನ್ನು ಬಾಳೆ ಎಲೆ ಅಥವಾ ಪೂರೆ ಎಲೆಯಲ್ಲಿ ಮಾಡುವುದರಿಂದ ಒಂದು ವಿಶಿಷ್ಟ ಪರಿಮಳ ಬರುತ್ತದೆ.

ಬೇಕಾಗುವ ಸಾಮಗ್ರಿಗಳು

* 2 ಕಪ್ ಹಲಸಿನ ಹಣ್ಣಿನ ತೊಳೆಗಳು
* 1 ಕಪ್ ಅಕ್ಕಿ ತರಿ ಅಥವಾ ನೆನೆಸಿದ ಅಕ್ಕಿ
* 3/4 ಕಪ್ ಬೆಲ್ಲ
* 1/2 ಕಪ್ ತೆಂಗಿನಕಾಯಿ ತುರಿ
* 1 ಚಮಚ ಏಲಕ್ಕಿ ಪುಡಿ
* 1 ಚಿಟಿಕೆ ಉಪ್ಪು
* ಬಾಳೆ ಎಲೆ

ಮಾಡುವ ವಿಧಾನ

ಮೊದಲಿಗೆ ಸಣ್ಣಗೆ ಹೆಚ್ಚಿದ ಹಲಸಿನ ಹಣ್ಣು, ತೆಂಗಿನಕಾಯಿ ತುರಿ ಮತ್ತು ಬೆಲ್ಲವನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೆಯೇ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅಕ್ಕಿ ತರಿ, ಏಲಕ್ಕಿ ಪುಡಿ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
ಈ ಮಿಶ್ರಣವನ್ನು 15-20 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ಅಕ್ಕಿ ತರಿ ಮೆತ್ತಗಾಗಿ ಗಟ್ಟಿ ಮೃದುವಾಗಿ ಬರುತ್ತದೆ. ನಂತರ ಬಾಳೆ ಎಲೆಯನ್ನು ಸ್ವಲ್ಪ ಉರಿಯಲ್ಲಿ ಬಾಡಿಸಿಕೊಳ್ಳಿ. ಎಲೆಯ ಮಧ್ಯಭಾಗದಲ್ಲಿ ಸ್ವಲ್ಪ ಹಿಟ್ಟನ್ನು ಇಟ್ಟು ಸಮನಾಗಿ ಹರಡಿ, ನಂತರ ಎಲೆಯನ್ನು ಮಡಚಿ.
ಇದಾದ ಬಳಿಕ ಇಡ್ಲಿ ಪಾತ್ರೆಯಲ್ಲಿ ನೀರಿಟ್ಟು, ನೀರು ಕುದಿ ಬಂದ ನಂತರ ಈ ಮಡಚಿದ ಎಲೆಗಳನ್ನು ಅದರೊಳಗೆ ಇಡಿ. ಸುಮಾರು 30-40 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಆವಿಯಲ್ಲಿ ಬೇಯಿಸಿಕೊಳ್ಳಿ. ಬೆಂದ ನಂತರ ಉರಿಯನ್ನು ಆರಿಸಿ ಕಡುಬು ಪೂರ್ತಿಯಾಗಿ ತಣ್ಣಗಾದ ನಂತರ ಎಲೆಯಿಂದ ಬಿಡಿಸಿ ತುಪ್ಪ ಸೇರಿಸಿ ತಿನ್ನಿರಿ.
ಗಮನಿಸಿ: ಮಿಶ್ರಣವು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ತುಂಬಾ ತೆಳುವಾದರೆ ಗಟ್ಟಿ ಸರಿಯಾಗಿ ಬರುವುದಿಲ್ಲ. ಒಂದು ವೇಳೆ ತೆಳುವಾದರೆ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ರವೆ ಸೇರಿಸಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net