ಮಧುಮೇಹಿಗಳೇ ಯಾವುದೇ ಆರೋಗ್ಯ ಭಯ ಇಲ್ಲದೇ ಈ ಆಹಾರ ಸೇವಿಸಿ! Recipe

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Recipe: ಸಾಮಾನ್ಯವಾಗಿ ಅನೇಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಈ ಜನರು ಸಿಹಿ ಇಷ್ಟ ಇದ್ದರೂ ಕೆಲವೊಮ್ಮೆ ತಿನ್ನಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ನೀವೇನಾದರೂ ಮಧುಮೇಹಿಗಳಾಗಿದ್ದರೆ, ಈ ರೀತಿಯ ಆಹಾರವನ್ನು ಬಾಳೆಹಣ್ಣಿನ ಕೇಕನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮಗೆ ಶಕ್ತಿಯನ್ನು ನೀಡುವುದರ ಜೊತೆಗೆ ರುಚಿಯನ್ನು ಕೊಡುತ್ತದೆ.

ಬೇಕಾಗುವ ಪದಾರ್ಥಗಳು

* 5 ಬಾಳೆಹಣ್ಣು
* 1.5 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
* 2 ಮೊಟ್ಟೆ
* 1/4 ಕಪ್​ ತುಪ್ಪ
* 1/4 ಕಪ್​ ಹಾಲು
* 1 ಚಮಚ ಬೇಕಿಂಗ್ ಪೌಡರ್
* 1/2 ಚಮಚ ಬೇಕಿಂಗ್ ಸೋಡಾ
* 1 ಚಮಚ ದಾಲ್ಚಿನ್ನಿ ಪುಡಿ
* 1 ಚಮಚ ವೆನಿಲ್ಲಾ ಎಸೆನ್ಸ್
* ವಾಲ್‌ನಟ್ ಅಥವಾ ಒಣದ್ರಾಕ್ಷಿ

ಮಾಡುವ ವಿಧಾನ

ಮೊದಲು ಒಂದು ಬೌಲ್​ಗೆ ಬಾಳೆಹಣ್ಣು ಹಾಕಿ ಚೆನ್ನಾಗು ಮ್ಯಾಶ್ ಮಾಡಿಕೊಳ್ಳಿ. ನಂತರ ಅದಕ್ಕೆ ಮೊಟ್ಟೆ, ಕರಗಿದ ತುಪ್ಪ, ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಾದ ಬಳಿಕ ಮತ್ತೊಂದು ಬೌಲ್​ಗೆ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ದಾಲ್ಚಿನ್ನಿ ಪುಡಿ ಮತ್ತು ಉಪ್ಪು ಸ್ವಲ್ಪ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ನೀರು ಸೇರಿಸಿ ಮಿಶ್ರಣ ತಯಾರಿಸಿ. ಇದಕ್ಕೆ ಒಣದ್ರಾಕ್ಷಿ ಅಥವಾ ನಟ್ಸ್ ಸೇರಿಸಿಕೊಳ್ಳಿ.

ಈ ಮಿಶ್ರಣವನ್ನು ಒಂದು ಕೇಕ್​ ತಯಾರಿಸುವ ಪಾತ್ರೆಗೆ ಹಾಕಿ 3- -40 ನಿಮಿಷ ಗ್ಯಾಸ್​ ಮೇಲೆ ಸಣ್ಣ ಉರಿಯಿಟ್ಟು ಬೇಯಿಸಿಕೊಳ್ಳಿ. ನಂತರ ತೆಗೆಯಿರಿ. ತಣ್ಣಗಾದ ಬಳಿಕ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net