ಕ್ರೀಮ್ ರೋಲ್ ಪ್ರಿಯರೇ ಎಚ್ಚರ! ಈ ವೈರಲ್​ ವಿಡಿಯೋ ನೋಡಿದ್ರೆ ವಾಕರಿಕೆ ಬರೋದು ಗ್ಯಾರಂಟಿ! Viral Video

ವೈರಲ್​ ಆಗುತ್ತಿರುವ ಕ್ರೀಮ್​ ರೋಲ್​ ವಿಡಿಯೋ
ವೈರಲ್​ ಆಗುತ್ತಿರುವ ಕ್ರೀಮ್​ ರೋಲ್​ ವಿಡಿಯೋ
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಮಾಧ್ಯದ ಇದೊಂದು ವೈರಲ್​ ವಿಡಿಯೋಗಳ ಲೋಕ
  • ಕ್ರೀಮ್​ ರೋಲ್​ ತಯಾರಾಗುವ ವಿಡಿಯೋ ನೋಡಿದರೆ ನೀವು ವಾಂತಿ ಮಾಡೋದು ಗ್ಯಾರಂಟಿ
  • ವಿಡಿಯೋ ನೋಡಿದ ನೆಟ್ಟಿಗರಿಂದ ಕಮೆಂಟ್​ ಸುರಿಮಳೆ
ಸಾಮಾಜಿಕ ಜಾಲತಾಣ: ಸೋಷಿಯಲ್ ಮೀಡಿಯಾ ಅನ್ನೋದು ಒಂದು ಅಚ್ಚರಿಗಳ ಲೋಕ. ದಿನ ಬೆಳಗಾದ್ರೆ ಸಾಕು ಒಂದಲ್ಲ ಒಂದು ವಿಡಿಯೋ ವೈರಲ್ (Viral Video) ಆಗ್ತಾ ಇರುತ್ತದೆ. ಕೆಲವೊಮ್ಮೆ ಮನಸ್ಸಿಗೆ ಸಂತೋಷ ನೀಡುವ ಡ್ಯಾನ್ಸ್ ವಿಡಿಯೋಗಳು ಬಂದ್ರೆ, ಇನ್ನೂ ಕೆಲವೊಮ್ಮೆ ಬಾಯಲ್ಲಿ ನೀರು ತರಿಸೋ ರುಚುಕರ ತಿಂಡಿಗಳ ವಿಡಿಯೋಗಳು ನಮ್ಮನ್ನು ಸೆಳೆಯುತ್ತವೆ. ಆದರೆ, ಈಗ ವೈರಲ್ ಆಗ್ತಿರೋ ಒಂದು ವಿಡಿಯೋ ಮಾತ್ರ ಜನರನ್ನು ಎಷ್ಟು ಬೆಚ್ಚಿಬೀಳಿಸಿದೆ ಅಂದರೆ, ಇದನ್ನು ನೋಡಿದವರು ಇನ್ನು ಮೇಲೆ ಜೀವನದಲ್ಲಿ ಕ್ರೀಮ್ ರೋಲ್ ತಿನ್ನಲ್ಲಪ್ಪಾ ಅಂತಾ ಹೇಳ್ತಿದ್ದಾರೆ.
ಬಾಲ್ಯದ ನೆನಪಿನ 'ಕ್ರೀಮ್ ರೋಲ್'
ಕ್ರೀಮ್ ರೋಲ್ ಅಂದ ತಕ್ಷಣ ನಮಗೆಲ್ಲಾ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಆ ಗರಿಗರಿಯಾದ ಹೊರಪದರ ಮತ್ತು ಒಳಗಿನ ಸಿಹಿಯಾದ ಕ್ರೀಮ್. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇದು ಫೇವರಿಟ್ ಸ್ನ್ಯಾಕ್ಸ್. ಬೇಕರಿಗೆ ಹೋದಾಗ ಒಂದು ಪ್ಯಾಕೆಟ್ ಕ್ರೀಮ್ ರೋಲ್ ತರೋದು ನಮಗೆ ಅಭ್ಯಾಸ. ಆದರೆ, ನಾವು ಅಷ್ಟು ಆಸೆಯಿಂದ ತಿನ್ನೋ ಈ ಕ್ರೀಮ್ ರೋಲ್ ಹೇಗೆ ತಯಾರಾಗುತ್ತೆ ಅಂತಾ ನೀವು ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ?
ಬೆಚ್ಚಿಬೀಳಿಸುತ್ತೆ ಈ ರಿಯಲ್ ವಿಡಿಯೋ!
ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಕ್ರೀಮ್ ರೋಲ್ ತಯಾರಾಗೋ ಜಾಗವನ್ನು ನೋಡಿದ್ರೆ ಅಸಹ್ಯ ಅನ್ಸುತ್ತೆ. ಅಲ್ಲಿ ಸ್ವಚ್ಛತೆ ಅನ್ನೋ ಪದಕ್ಕೆ ಬೆಲೆಯೇ ಇಲ್ಲದಂತಿದೆ. ವೈರಲ್​ ವಿಡಿಯೋನಲ್ಲಿ ಕ್ರಿಮ್​ ತುಂಬಿರುವ ಬಕೆಟ್​ ನೋಡಿದರೆ, ಆ ಬಕೆಟ್​ನ್ನು ನಾವು ಟಾಯ್ಲೆಟ್ ತೊಳೆಯಲು ಸಹ ಬಳಸಲು ಸಾಧ್ಯವಿಲ್ಲ ಅಷ್ಟು ಗಲೀಜಾಗಿದೆ. ಆ ಪರಮ ಕೊಳಕಾದ ಬಕೆಟ್​ನಲ್ಲಿರುವ ಕ್ರಿಮ್​ನ್ನು ವ್ಯಕ್ತಿಯೊಬ್ಬ ಬರಿ ಕೈಯಲ್ಲಿ ತೆಗೆದಿ ರೋಲ್​ಗೆ ತುಂಬಿಸುವ ದೃಶ್ಯ ಈಗ ಕ್ರಿಮ್​ ರೋಲ್​ ಪ್ರೀಯರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗದು.

ನೆಟ್ಟಿಗರ ಆಕ್ರೋಶ ಹೇಗಿದೆ ಗೊತ್ತಾ?

ಈ ವಿಡಿಯೋವನ್ನು ಟ್ವಿಟ್ಟರ್ ಹಂಚಿಕೊಳ್ಳಲಾಗಿದ್ದು, ಕ್ರೀಮ್ ರೋಲ್ ಇಷ್ಟು ಅಸಹ್ಯವಾಗಿ ತಯಾರಾಗುತ್ತೆ ಅಂತಾ ಗೊತ್ತಿರಲಿಲ್ಲ, ಇನ್ಮೇಲೆ ನಾನು ಇದನ್ನು ತಿನ್ನಲ್ಲ ಅಂತಾ ಅವರು ಕ್ಯಾಪ್ಷನ್ ಬರೆದಿದ್ದಾರೆ.
ಈ ವಿಡಿಯೋ ನೋಡಿದ ಒಬ್ಬ ಬಳಕೆದಾರರು, ನಮ್ಮ ದೇಶದಲ್ಲಿ ಪ್ಯಾಕೇಜ್ಡ್ ಫುಡ್‌ಗಳ ಬಗ್ಗೆ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ, ಅದಕ್ಕೇ ನಾನು ಪ್ಯಾಕೆಟ್ ಆಹಾರಗಳನ್ನು ತಿನ್ನೋದೇ ಬಿಟ್ಟಿದ್ದೇನೆ ಅಂತಾ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮಾರುಕಟ್ಟೆಯಲ್ಲಿ ಇಂತಹ ನಕಲಿ ಮತ್ತು ಕಳಪೆ ಗುಣಮಟ್ಟದ ಆಹಾರಗಳು ಸಿಕ್ಕಾಪಟ್ಟೆ ಇವೆ, ಜನರು ಜಾಗರೂಕರಾಗಿರಬೇಕು ಅಂತಾ ಎಚ್ಚರಿಸಿದ್ದಾರೆ.

ಜಾಗರೂಕರಾಗಿರೋದು ನಮ್ಮ ಕೈಯಲ್ಲೇ ಇದೆ!

ನೋಡಲು ಕೆಂಪು ಬಣ್ಣದ ಪ್ಯಾಕೆಟ್‌ನಲ್ಲಿ ಆಕರ್ಷಕವಾಗಿ ಕಂಡರೂ, ಅದರ ಒಳಗೆ ಏನಿರುತ್ತೆ ಅನ್ನೋದು ಈಗ ಬಯಲಾಗಿದೆ. ಬೇಕರಿಯಿಂದ ಯಾವುದೇ ಆಹಾರ ಪದಾರ್ಥ ತರುವ ಮುನ್ನ ಅವು ಎಲ್ಲಿ ತಯಾರಾಗುತ್ತವೆ ಮತ್ತು ಎಷ್ಟು ಸ್ವಚ್ಛವಾಗಿವೆ ಅನ್ನೋದನ್ನ ಗಮನಿಸೋದು ನಮ್ಮ ಜವಾಬ್ದಾರಿ ಎನ್ನುವುದು ನಟ್ಟಿಗರು ಹೇಳಿದ ಕಿವಿಮಾತಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net