ಭಾನುವಾರದ ಬಾಡೂಟಕ್ಕಾಗಿ ಚಿಕನ್​ ಸುಕ್ಕ! ಈಗ್ಲೇ ಟ್ರೈ ಮಾಡಿ... Recipe

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Recipe : ಭಾನುವಾರ ಬಂದೇ ಬಿಡ್ತು, ಅಡುಗೆ ಏನು ಮಾಡಬೇಕು ಅಂತಾ ಯೋಚುಸ್ತಾ ಇದ್ದೀರಾ? ನಾವಿಂದು ಮಾಂಸಹಾರಿಗಳಿಗೆ ಅದರಲ್ಲೂ ಬ್ಯಾಚುಲರ್ಸ್​ಗಳಿಗಾಗಿ ಚಿಕನ್​ ಸುಕ್ಕಾ ಮಾಡುವುದನ್ನು ಹೇಳಿಕೊಡಲಿದ್ದೇವೆ. ಇನ್ಯಾಕೆ ತಡ ಈಗ್ಲೇ ನೋಡಿ, ಟ್ರೈ ಮಾಡಿ, ಟೇಸ್ಟ್ ಹೆಂಗಿದೆ ಅಂತಾ ಹೇಳಿ!.. 

ಬೇಕಾಗುವ ಸಾಮಗ್ರಿಗಳು

* 500 ಗ್ರಾಂ ಚಿಕನ್ 
* 2 ಈರುಳ್ಳಿ 
* 1 ಟೊಮೇಟೋ
* 1 ಕಪ್ ತುರಿದ ತೆಂಗಿನಕಾಯಿ 
* 1 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* ಕರಿಬೇವು
* 3 ಚಮಚ ತುಪ್ಪ 
* ರುಚಿಗೆ ತಕ್ಕಷ್ಟು ಉಪ್ಪು 
* 1 ಚಮಚ ಗರಂ ಮಸಾಲಾ 
* 1 ಚಮಚ ಕೊತ್ತಂಬರಿ ಪೌಡರ್  
* 1-2 ಚಮಚ ರೆಡ್ ಚಿಲಿ ಪೌಡರ್  
*  ½  ಚಮಚ ಅರಿಶಿನ 

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಚಿಕನ್​ನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಚಿಲ್ಲಿ ಪೌಡರ್, ಉಪ್ಪು ಹಾಕಿ 10-15 ನಿಮಿಷಗಳ ಕಾಲ  ಮ್ಯಾರಿನೇಟ್ ಮಾಡಿ.
ನಂತರ ಒಂದು ಕುಕ್ಕರ್​ಗೆ  2 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದಕ್ಕೆ,  ಕರಿಬೇವು, ಈರುಳ್ಳಿ ತುಂಡುಗಳು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ. ಟೊಮೇಟೋ ಮೃದುವಾಗುವವರೆಗೂ ಬೇಯಿಸಿರಿ. ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಜೋರಾದ ಉರಿಯಲ್ಲಿ ಬೇಯಿಸಿರಿ. 
ರೆಡಿಯಾಗಿರುವ ಮಿಶ್ರಣಕ್ಕೆ ಮಸಾಲಾ ಪೌಡರ್‌ಗಳು ಹಾಕಿ ಮಿಕ್ಸ್ ಮಾಡಿ. ಅರ್ಧ ಕಪ್ ನೀರು ಹಾಕಿ, ಮುಚ್ಚಳ ಹಾಕಿ ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಕುಕ್​​ ಮಾಡಿರಿ. ಈ ಮಿಶ್ರಣದಲ್ಲಿ ನೀರು ಒಣಗಿ ಚಿಕನ್ ಬೆಂದ ನಂತರ, ಅರ್ಧ ಕಪ್ ತುರಿದ ತೆಂಗಿನಕಾಯಿ ಹಾಕಿ ಕೊಬ್ಬರಿ ಹಾಕಿ ಮದ್ಯಮ ಉರಿಯಲ್ಲಿ 5 ನಿಮಿಷ ಬೇಯಿಸಿರಿ. ನಂತರ ಚಪಾತಿಯೊಂದಿಗೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net