Lips Tips: ಮನುಷ್ಯನ ಮುಖ ನೋಡಲು ಎಷ್ಟು ಚೆಂದವೋ, ಅವರ ಮುಖದಲ್ಲಿನ ತುಟಿ ಕೂಡ ಅಷ್ಟೇ ಚೆಂದ. ಮುಖದ ಲಕ್ಷಣ, ಸೌಂದರ್ಯ ಹೇಗೆ ಸೆಳೆಯುತ್ತದೋ, ಅಂತೆಯೇ ತುಟಿಯ ಬಣ್ಣ ಸಹ ಹಲವರ ಗಮನವನ್ನು ಸೆಳೆಯುತ್ತದೆ. ಕೆಂದುಟಿಯನ್ನು ನೋಡುವ ಮಂದಿ, ನಮಗೇಕೆ ಆ ರೀತಿಯ ಲಿಪ್ಸ್ ಇಲ್ಲ ಎಂದು ಮನದೊಳಗೆ ಸಂಕಟ ಪಡುತ್ತಿರುತ್ತಾರೆ. ಲಿಪ್ಸ್ಟಿಕ್ ಇಲ್ಲದ ಬಹುತೇಕ ಸ್ಟಾರ್ ನಟಿಯರು ಮತ್ತು ಮಾಡೆಲ್ಗಳ ಲಿಪ್ಸ್ಗಳನ್ನು ನೋಡುವ ಮಂದಿ, ಕಪ್ಪಾಗಿರುವ ನಮ್ಮ ತುಟಿಗಳನ್ನು ಅವರಂತೆ ಮಾಡಿಕೊಳ್ಳುವುದು ಹೇಗೆ? ಎಂಬ ಚಿಂತೆ ಅನೇಕರಲ್ಲಿ ಕಾಡುತ್ತಿರುತ್ತದೆ.