Summer Food Safety: ಬೇಸಿಗೆಯ ತಾಪಮಾನವು ಏರುತ್ತಿದ್ದಂತೆ, ಅಡುಗೆಮನೆಯಲ್ಲಿ ಗೃಹಿಣಿಯರಿಗೆ ಮತ್ತು ಕಚೇರಿಗೆ ಹೋಗುವವರಿಗೆ ಹೊಸದೊಂದು ತಲೆನೋವು ಶುರುವಾಗಿದೆ. ಅದುವೇ 'ಟಿಫಿನ್ ಬಾಕ್ಸ್‌ನಲ್ಲಿ ಆಹಾರ ಹಾಳಾಗುವುದು'. ಬೆಳಿಗ್ಗೆ ಎದ್ದು ಬಹಳ ಪ್ರೀತಿಯಿಂದ, ತಾಜಾವಾಗಿ ತಯಾರಿಸಿ ಪ್ಯಾಕ್ ಮಾಡಿದ ಅಡುಗೆ, ಮಧ್ಯಾಹ್ನ ಊಟದ ಸಮಯಕ್ಕೆ ಬರುವಷ್ಟರಲ್ಲಿ ವಾಸನೆ ಬರುತ್ತಿರುತ್ತದೆ ಅಥವಾ ರುಚಿ ಕೆಟ್ಟು ಹುಳಿಯಾಗಿರುತ್ತದೆ.