ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಪ್ರೆಶರ್ ಕುಕರ್‌ಗೆ ಹಾಕಿ. ಅರಿಶಿನ, ಸ್ವಲ್ಪ ಉಪ್ಪು, 2-2.5 ಕಪ್ ನೀರು ಹಾಕಿ 3-4 ವಿಸಲ್ ಕೂಗಿಸಿಕೊಳ್ಳಿ. ನಂತರ ಕುಕ್ಕರ್ ತೆರೆದ ಮೇಲೆ ಬೇಳೆಯನ್ನು ಸ್ವಲ್ಪ ಸ್ಮಾಶ್ ಮಾಡಿಕೊಳ್ಳಿ. ಇದಾದ ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಟೊಮೇಟೊ, ಹಸಿ ಮೆಣಸಿನಕಾಯಿ ಹಾಕಿ ಮೃದುವಾಗುವವರೆಗೆ ಬೇಯಿಸಿರಿ.