ಬೊಜ್ಜು ಕರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ, ಈ ರೆಸಿಪಿ ಸೇವಿಸಿ ಪ್ರಯೋಜನ ತಿಳಿಯಿರಿ! Recipe
ಸಾಂದರ್ಭಿಕ ಚಿತ್ರ
Published on:
Copied
Follow Us
Recipe: ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬುದು ವಾಸ್ತವ. ಅನೇಕ ಜನರು ಜಿಮ್ ಮತ್ತು ಡಯಟ್‌ನಲ್ಲಿ ಹಣವನ್ನು ವ್ಯರ್ಥ ಮಾಡಿದ ನಂತರವೂ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವೇನಾದರೂ ದೇಹದಲ್ಲಿರುವ ಅಧಿಕ ಬೊಜ್ಜನ್ನು ಕರಗಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ರೀತಿಯ ಹೆಸರು ಬೇಳೆ ದೋಸೆ ಸೇವಿಸಿ.
ಬೇಕಾಗುವ ಸಾಮಗ್ರಿಗಳು
* 1 ಕಪ್ ನೆನಸಿದ ಹೆಸರು ಬೇಳೆ
* 1 ಹಸಿ ಮೆಣಸಿನಕಾಯಿ,
* ಸ್ವಲ್ಪ ಶುಂಠಿ
* ಕೊತ್ತಂಬರಿ ಸೊಪ್ಪು
* ರುಚಿಗೆ ಉಪ್ಪು
* ಈರುಳ್ಳಿ
* ಟೊಮೇಟೋ
ಮಾಡುವ ವಿಧಾನ
ಮೊದಲು ನೆನಸಿದ ಬೇಳೆಯನ್ನು ಗ್ರೈಂಡ್ ಮಾಡಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ನಂತರ ಆ ಹಿಟ್ಟಿಗೆ ಹೆಚ್ಚಿದ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು, ಈರುಳ್ಳಿ, ಟೊಮೇಟೋ ಮಿಕ್ಸ್ ಮಾಡಿ ಹಂಚಿನ ಮೇಲೆ ಹಾಕಿ ಬೇಯಿಸಿ ಸೇವಿಸಿರಿ.
ಪ್ರಯೋಜನಗಳೇನು?
* ಪ್ರತಿದಿನ ಈ ಆಹಾರವನ್ನು ಸೇವಿಸುವುದರಿಂದ ಇದು ದೇಹಕ್ಕೆ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ನೀಡುತ್ತದೆ. ಇದು ಅನಗತ್ಯವಾಗಿ ತಿನ್ನುವುದನ್ನು ತಪ್ಪಿಸುತ್ತದೆ.
* ಫೈಬರ್ ಜಾಸ್ತಿಯಿರುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ. ಕರುಳಿನ ಆರೋಗ್ಯ ಕಾಪಾಡುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.
* ಈ ಆಹಾರದಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದಾಗಿದ್ದು, ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
* ಫೈಬರ್ ಮತ್ತು ಪೊಟ್ಯಾಸಿಯಂ ಹೆಚ್ಚಾಗಿರುವುದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡ ನಿಯಂತ್ರಿಸುತ್ತದೆ.
* ವಿಟಮಿನ್ C, E, K ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಕೊಡುತ್ತದೆ (ಏಜೆನ್ಸೀಸ್).