ಲಿವರ್ ಫೇಲ್ಯೂರ್ ಭೀತಿಯೇ? ಇಂದೇ ನಿಮ್ಮ ಡಯಟ್‌ನಲ್ಲಿ ಈ 7 'ಮ್ಯಾಜಿಕ್' ಆಹಾರ ಸೇರಿಸಿಕೊಳ್ಳಿ! | Liver

Liver Health
Liver Health
Published on
ಬೆಂಗಳೂರು: ಯಕೃತ್ತು ಅಥವಾ ಲಿವರ್(Liver ) ನಮ್ಮ ದೇಹದ 'ಕೆಮಿಕಲ್ ಫ್ಯಾಕ್ಟರಿ' ಇದ್ದಂತೆ. ಜೀರ್ಣಕ್ರಿಯೆಯಿಂದ ಹಿಡಿದು ದೇಹದ ಕಶ್ಮಲಗಳನ್ನು ಹೊರಹಾಕುವವರೆಗೆ 500ಕ್ಕೂ ಹೆಚ್ಚು ಕೆಲಸಗಳನ್ನು ಮಾಡುವ ಈ ಅಂಗದ ಆರೋಗ್ಯ ಹದಗೆಟ್ಟರೆ ಇಡೀ ದೇಹದ ವ್ಯವಸ್ಥೆಯೇ ಏರುಪೇರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ 'ಫ್ಯಾಟಿ ಲಿವರ್' (Fatty Liver) ಮತ್ತು ಲಿವರ್ ಸಿರೋಸಿಸ್ ಸಮಸ್ಯೆಯಿಂದ ಬಚಾವಾಗಲು ಪ್ರಕೃತಿಯಲ್ಲಿ ಕೆಲವು 'ಸೂಪರ್‌ಫುಡ್‌'ಗಳಿವೆ.

ನಿಮ್ಮ ಯಕೃತ್ತನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು (Detox) ಈ ಕೆಳಗಿನ ಆಹಾರಗಳನ್ನು ಪ್ರತಿದಿನ ಸೇವಿಸಿ.

1. ಬೆಳ್ಳುಳ್ಳಿ (Garlic)
ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶವು ಯಕೃತ್ತಿನ ಕಿಣ್ವಗಳನ್ನು (Enzymes) ಸಕ್ರಿಯಗೊಳಿಸುತ್ತದೆ, ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಲಿಸಿನ್ ಮತ್ತು ಸೆಲೆನಿಯಮ್ ಲಿವರ್ ಅನ್ನು ಸ್ವಚ್ಛವಾಗಿಡಲು ಸಹಕಾರಿ.
2. ಅರಿಶಿನ (Turmeric)
ಅರಿಶಿನದಲ್ಲಿರುವ 'ಕುರ್ಕುಮಿನ್' ಅಂಶವು ಯಕೃತ್ತಿನ ಜೀವಕೋಶಗಳು ಹಾನಿಯಾಗದಂತೆ ರಕ್ಷಿಸುತ್ತದೆ. ಇದು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
3. ಹಸಿರು ಎಲೆಗಳ ತರಕಾರಿ (Leafy Greens)
ಪಾಲಕ್, ಮೆಂತೆ ಸೇರಿದಂತೆ ಹಸಿರು ಸೊಪ್ಪುಗಳಲ್ಲಿ ಕ್ಲೋರೊಫಿಲ್ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿರುವ ಪರಿಸರ ಮಾಲಿನ್ಯಕಾರಕಗಳನ್ನು ಹೀರಿಕೊಂಡು ಯಕೃತ್ತಿನ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
4. ಸಿಟ್ರಸ್ ಹಣ್ಣುಗಳು (Citrus Fruits)
ನಿಂಬೆಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ-ಆಕ್ಸಿಡೆಂಟ್ ಹೇರಳವಾಗಿದೆ. ಇದು ಯಕೃತ್ತಿನಲ್ಲಿ ನೈಸರ್ಗಿಕ ಶುದ್ಧೀಕರಣ ಕಿಣ್ವಗಳ ಉತ್ಪಾದನೆಗೆ ಚಾಲನೆ ನೀಡುತ್ತದೆ.
5. ಬೀಟ್ರೂಟ್ ಮತ್ತು ಕ್ಯಾರೆಟ್
ಇವುಗಳಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಫ್ಲೇವನಾಯ್ಡ್‌ಗಳು ಅಧಿಕವಾಗಿದ್ದು, ಯಕೃತ್ತಿನ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ. ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದು ಲಿವರ್‌ಗೆ ರಾಮಬಾಣ.
6. ವಾಲ್‌ನಟ್ಸ್ (Walnuts)
ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಅಮಿನೋ ಆಸಿಡ್ ಹೊಂದಿರುವ ವಾಲ್‌ನಟ್ಸ್, ಯಕೃತ್ತನ್ನು ಅಮೋನಿಯಾದಂತಹ ವಿಷಕಾರಿ ಅಂಶಗಳಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ.
7. ಗ್ರೀನ್ ಟೀ (Green Tea)
ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್ ಎಂಬ ಆ್ಯಂಟಿ-ಆಕ್ಸಿಡೆಂಟ್ ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಲಿವರ್ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ.
ತಜ್ಞರ ಕಿವಿಮಾತು!
ಕೇವಲ ಆಹಾರವಷ್ಟೇ ಅಲ್ಲದೆ, ಅತಿಯಾದ ಮದ್ಯಪಾನ, ಸಂಸ್ಕರಿಸಿದ ಸಕ್ಕರೆ (Refined Sugar) ಮತ್ತು ಎಣ್ಣೆಯುಕ್ತ ಆಹಾರಗಳಿಂದ ದೂರವಿದ್ದರೆ ಮಾತ್ರ ಲಿವರ್ ಆರೋಗ್ಯವಾಗಿರಲು ಸಾಧ್ಯ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದು ಅತಿ ಅಗತ್ಯ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net