ಇದು ಸಾಮಾನ್ಯ ಅನ್ನವಲ್ಲ, ಜಪಾನ್‌ನ ಅದ್ಭುತ! ಒಂದು ಕೆಜಿ ಅಕ್ಕಿ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ! Rice price
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತದ ಉತ್ತರದಿಂದ ದಕ್ಷಿಣದವರೆಗೆ, ಅಕ್ಕಿಯು ಕೇವಲ ಹೊಟ್ಟೆ ತುಂಬಿಸುವ ಆಹಾರವಲ್ಲ
ಜನನದಿಂದ- ಮರಣದವರೆಗೆ ಪ್ರತಿಯೊಂದು ಕಾರ್ಯದಲ್ಲೂ ಅಕ್ಕಿಯ ಉಪಸ್ಥಿತಿ ಕಡ್ಡಾಯ
ಭಾರತದಲ್ಲಿ 6,000 ಕ್ಕೂ ಹೆಚ್ಚು ಬಗೆಯ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ
ಜಪಾನ್‌ನ 'ಕಿನ್ಮೆಮೈ ಪ್ರೀಮಿಯಂ ರೈಸ್ ಅತ್ಯಂತ ದುಬಾರಿ ಅಕ್ಕಿ ಎಂದು ಗಿನ್ನಿಸ್ ದಾಖಲೆ ಪಡೆದಿತ್ತು
ಜಪಾನ್: ಭಾರತದ ಉತ್ತರದಿಂದ ದಕ್ಷಿಣದವರೆಗೆ, ಅಕ್ಕಿಯು ಕೇವಲ ಹೊಟ್ಟೆ ತುಂಬಿಸುವ ಆಹಾರವಲ್ಲ. ಇದು ಒಂದು ಸಮೃದ್ಧಿಯ ಸಂಕೇತ. ಜನನದಿಂದ- ಮರಣದವರೆಗೆ ಪ್ರತಿಯೊಂದು ಕಾರ್ಯದಲ್ಲೂ ಅಕ್ಕಿಯ (Rice price) ಉಪಸ್ಥಿತಿ ಕಡ್ಡಾಯವಾಗಿದೆ. ವಿವಿಧ ಮೂಲಗಳ ಪ್ರಕಾರ, ಭಾರತದಲ್ಲಿ 6,000 ಕ್ಕೂ ಹೆಚ್ಚು ಬಗೆಯ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಇದರ ಸರಾಸರಿ ಬೆಲೆ ಕೆಜಿಗೆ 40 ರಿಂದ 300 ರೂಪಾಯಿಗಳವರೆಗೆ ಇರುತ್ತದೆ. ಆದರೆ, ನಾವು ಹೇಳಲು ಹೊರಟಿರುವ 1 ಕೆಜಿ ಅಕ್ಕಿ ಬೆಲೆ ಒಂದು ಸ್ಮಾರ್ಟ್‌ಫೋನ್ ಖರೀದಿಸಬಹುದು. ಹಾಗಿದ್ದರೆ, ಆ ಅಕ್ಕಿ ಯಾವುದು ಎಂದು ನಿಮಗೇ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ...
ವಿಶ್ವದ ಅತ್ಯಂತ ದುಬಾರಿ ಅಕ್ಕಿ
ಜಪಾನ್‌ನ 'ಕಿನ್ಮೆಮೈ ಪ್ರೀಮಿಯಂ ರೈಸ್' 2016 ರಲ್ಲಿ ಅತ್ಯಂತ ದುಬಾರಿ ಅಕ್ಕಿ ಎಂದು ಗಿನ್ನಿಸ್ ದಾಖಲೆ ಪಡೆದಿತ್ತು. ಇದರ ಬೆಲೆ ವಿಭಿನ್ನವಾಗಿದ್ದು, ಅದರ ಉತ್ಪಾದನಾ ರುಚಿಯೂ ವಿಭಿನ್ನ ಸ್ಥಾನವನ್ನು ನೀಡುತ್ತದೆ.
840 ಗ್ರಾಂನ ಒಂದು ಬಾಕ್ಸ್ ಅಕ್ಕಿ ಬೆಲೆ ಸುಮಾರು 10,800 ಜಪಾನೀಸ್ ಯೆನ್. ಅದು ಭಾರತೀಯ ಕರೆನ್ಸಿ ಪ್ರಕಾರ, ಸರಿ ಸುಮಾರು 6,000 ದಿಂದ 7,000 ರೂಪಾಯಿಳಾಗಿದ್ದು, ಈ ಅಕ್ಕಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು 12,500 ರಿಂದ 15,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.
ಇದು ಏಕೆ ಇಷ್ಟೊಂದು ದುಬಾರಿಯಾಗಿದೆ?
ಕಿನ್ಮೆಮೈ ಕೇವಲ ಒಂದು ತಳಿಯ ಅಕ್ಕಿಯಲ್ಲ. ಟೊಯೊ ರೈಸ್ ಕಾರ್ಪೊರೇಷನ್ ಜಪಾನ್‌ನ ಅತ್ಯುತ್ತಮ ಪ್ರಭೇದಗಳಾದ ಕೋಶಿಹಿಕಾರಿ ಮತ್ತು ಪಿಕಾಮಾರು ಸೇರಿದಂತೆ ಐದು ಪ್ರೀಮಿಯಂ ತಳಿಗಳನ್ನು ಅತ್ಯಂತ ನಿಖರವಾದ ಅನುಪಾತದಲ್ಲಿ ಮಿಶ್ರಣ ಮಾಡುವ ಮೂಲಕ ತಯಾರಿಸಲಾಗುತ್ತದೆ. ಈ ಅಕ್ಕಿಯನ್ನು ಜಪಾನ್‌ನ ಪ್ರಸಿದ್ಧ ಕೃಷಿ ಪ್ರದೇಶಗಳಾದ ಗುನ್ಮಾ, ನಾಗಾನೊ ಮತ್ತು ನಿಗಾಟಾದಿಂದ ಕೊಯ್ಲು ಮಾಡಲಾಗುತ್ತದೆ. ಈ ಅಕ್ಕಿಗೆ ಹೆಚ್ಚಿನ ಬೆಲೆ ಎಂದರೆ, ಅದರ ದೀರ್ಘ ಮತ್ತು ವಿಶೇಷ ಸಂಸ್ಕರಣಾ ವಿಧಾನವಾಗಿದೆ.
ಈ ಅಕ್ಕಿಯನ್ನು ಕೊಯ್ಲು ಮಾಡಿದ ತಕ್ಷಣ ಮಾರಾಟ ಮಾಡುವುದಿಲ್ಲ. ಇದನ್ನು ಆರು ತಿಂಗಳುಗಳ ಕಾಲ ವಿಶೇಷ ವಿಧಾನದಲ್ಲಿ ಸಂಗ್ರಹಿಸಿಡುತ್ತಾರೆ. ಈ ರೀತಿ ಮಾಡುವುದರಿಂದ ಅಕ್ಕಿಯ ರುಚಿ ಮತ್ತು ವಿನ್ಯಾಸ ಸುಧಾರಿಸುತ್ತದೆ. ಇದರ ಜೊತೆಗೆ ಅಕ್ಕಿಯ ಹೊರ ಪದರವನ್ನು ವಿಶೇಷವಾಗಿ ಸಂಸ್ಕರಿಸಲಾಗುವುದರಿಂದ ಮೌಲ್ಯವನ್ನು ಹಾಗೇ ಇಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಇದರ ರುಚಿ ಹೇಗಿದೆ?
ಬೇಯಿಸಿದ ನಂತರ, ಈ ಅಕ್ಕಿಯ ಕಾಳುಗಳು ವಜ್ರಗಳಂತೆ ಹೊಳೆಯುತ್ತದೆ. ಇದು ಸಾಮಾನ್ಯ ಅಕ್ಕಿಗಿಂತ ವಿಭಿನ್ನ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಇದರ ರಚನೆಯು ಕೆನೆ ಮತ್ತು ಬೆಣ್ಣೆಯಂತಿರುತ್ತದೆ. ಬಾಯಲ್ಲಿ ಇಟ್ಟರೆ ತಕ್ಷಣವೇ ಕರಗುವ ಅಕ್ಕಿಯಾಗಿದೆ.
ಸೀಮಿತ ಉತ್ಪಾದನೆ
ಈ ಅಕ್ಕಿಯನ್ನು ಪ್ರತಿ ವರ್ಷ 1,000 ಬಾಕ್ಸ್‌ಗಳಷ್ಟು ಮಾತ್ರ ಉತ್ಪಾದಿಸಲಾಗುತ್ತದೆ. ಪ್ರತಿ ಬಾಕ್ಸ್‌ನಲ್ಲಿ 140 ಗ್ರಾಂನ ಆರು ಸಣ್ಣ ಪ್ಯಾಕೆಟ್‌ಗಳಿರುತ್ತವೆ. ಜಪಾನಿನಲ್ಲಿ ಈ ಅಕ್ಕಿಯನ್ನು ಐಷಾರಾಮಿ ಉಡುಗೊರೆಯಾಗಿ ನೀಡುತ್ತಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.