ಪ್ರತಿದಿನ ಚಹಾ ಸೇವಿಸುವಾಗ ಈ 7 ತಪ್ಪುಗಳು ಮಾಡಿದ್ರೆ, ನಿಮ್ಮ ಆರೋಗ್ಯ ಹಾನಿಯಾಗುತ್ತಂತೆ!

Tea
Tea
Published on
ಬೆಂಗಳೂರು: ಭಾರತದಲ್ಲಿ ಸಾಮಾನ್ಯವಾಗಿ ಚಹಾ(Tea) ಕುಡಿಯುವ ಅಭ್ಯಾಸ ಅಧಿಕವಾಗಿದೆ. ಇದು ಬರಿ ಅಭ್ಯಾಸವಲ್ಲ. ಒಂದು ರೀತಿಯ ಭಾರತದ ಆಚರಣೆಯಾಗಿದೆ. ದೇಶದಲ್ಲಿ ಜನರು ಬೆಳಗ್ಗೆಯಿಂದ ರಾತ್ರಿ ಮಲಗುವತನಕ ವಿವಿಧ ರೀತಿಯ ಚಹಾಗಳು ಸೇವಿಸುತ್ತಾರೆ. ಟೀ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನೆಗಳನ್ನು ನೀಡುತ್ತದೆ. ಆದಾಗ್ಯೂ, ಚಹಾವನ್ನು ಸರಿಯಾದ ಸಮಯದಲ್ಲಿ ಸೇವಿಸದೇ ಕೆಲ ತಪ್ಪುಗಳನ್ನು ಮಾಡುತ್ತಾರೆ. ಈ ಕೆಟ್ಟ ತಪ್ಪುಗಳಿಂದ ಲಿವರ್​ ಮತ್ತು ಕಿಡ್ನಿಗೆ ಹಾನಿಯಾಗಲಿದೆ. 
7 ಅಪಾಯಕಾರಿ ಚಹಾ ಕುಡಿಯುವ ಅಭ್ಯಾಸಗಳು
1.ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿಯುವುದು
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿದರೆ ಗ್ಯಾಸ್ಟ್ರಿಕ್ ಆಮ್ಲ ಹೆಚ್ಚಾಗಿ ಉತ್ಪತ್ತಿಯಾಗಿ ಲಿವರ್​​ನ ಒಳಪೊರೆಗೆ ಹಾನಿ ಉಂಟಾಗುತ್ತದೆ. ದೀರ್ಘಕಾಲದಲ್ಲಿ ಅಲ್ಸರ್ ಮತ್ತು ಗ್ಯಾಸ್ಟ್ರೈಟಿಸ್ ಬರುವ ಸಾಧ್ಯತೆ.
2.ತುಂಬಾ ಬಿಸಿ ಚಹಾ ಕುಡಿಯುವುದು
ತುಂಬಾ ಬಿಸಿ ಚಹಾ/ಕಾಫಿ ನಿಯಮಿತವಾಗಿ ಕುಡಿದರೆ ಆಹಾರನಾಳ (oesophagus) ಮತ್ತು ಹೊಟ್ಟೆಯ ಒಳಪೊರೆ ಸುಟ್ಟು ಗಾಯವಾಗುತ್ತದೆ. WHO ಪ್ರಕಾರ ಇದು ಆಹಾರನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
3.ರಾತ್ರಿ ಮಲಗುವ ಮುಂಚೆ ಕುಡಿಯುವುದು
ಚಹಾದಲ್ಲಿ ಇರುವ ಕೆಫೀನ್ ಮತ್ತು ಥಿಯೋಫಿಲಿನ್ ಮೂತ್ರವರ್ಧಕ (diuretic). ರಾತ್ರಿ ಹೆಚ್ಚು ಚಹಾ ಕುಡಿದರೆ ಕಿಡ್ನಿಗಳಿಗೆ (kidney) ಒತ್ತಡ ಬಂದು ನಿದ್ರೆ ತೊಂದರೆ ಉಂಟಾಗಬಹುದು.
4.ಒಂದೇ ದಿನ 5-6 ಕಪ್‌ಗಿಂತ ಚಹಾ
ದಿನಕ್ಕೆ 400 ಮಿ.ಗ್ರಾಂ.ಗಿಂತ ಹೆಚ್ಚು ಕೆಫೀನ್ (ಸುಮಾರು 6-7 ಕಪ್ ಟೀ) ಕರುಳಿನ ಮೇಲೆ ಒತ್ತಡ ಹಾಕಿ ಫ್ಯಾಟಿ ಲಿವರ್ ಮತ್ತು ಲಿವರ್ ಎಂಜೈಮ್‌ಗಳನ್ನು ಹೆಚ್ಚಿಸುತ್ತದೆ. ಯಕೃತ್ತಿನಲ್ಲಿ ಕ್ಯಾಲ್ಸಿಯಂ ಸಂಗ್ರಹ ಕಡಿಮೆಯಾಗಿ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುತ್ತದೆ.
5.ಅತಿಯಾದ ಸಕ್ಕರೆ ಹಾಕಿದ ಚಹಾ 
ಒಂದೊಂದು ಕಪ್ ಚಹಾಕ್ಕೆ 3-4 ಚಮಚ ಸಕ್ಕರೆ ಹಾಕಿದರೆ ದಿನವಿಡೀ 100-150 ಗ್ರಾಂ ಸಕ್ಕರೆ ಸೇವನೆಯಾಗುತ್ತದೆ. ಇದರಿಂದ ಲಿವರ್​ ಸಮಸ್ಯೆ ಅಧಿಕವಾಗುತ್ತದೆ.
6.ಮಾರ್ಕೆಟ್​ನ ಮಸಾಲ ಚಹಾ
ಇದರಲ್ಲಿ ಟ್ರಾನ್ಸ್ ಫ್ಯಾಟ್, ಕೃತಕ ಬಣ್ಣ, ಅತಿಯಾದ ಕಾರ್ಬೋಹೈಡ್ರೇಟ್, ಪಾಮ್ ಆಯಿಲ್ ಇರುತ್ತದೆ. ಇವು ಲಿವರ್​ಮೇಲೆ ಉರಿಯೂತ (inflammation) ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ.
7.ಪ್ಲಾಸ್ಟಿಕ್ ಕಪ್‌ಗಳಲ್ಲಿ ಬಿಸಿ ಚಹಾ ಕುಡಿಯುವುದು
ಬಿಸಿ ದ್ರಾವಣದಿಂದ ಪ್ಲಾಸ್ಟಿಕ್‌ನ ಮೈಕ್ರೋಪ್ಲಾಸ್ಟಿಕ್ ಮತ್ತು BPA, phthalates ಬಿಡುಗಡೆಯಾಗಿ ರಕ್ತದೊಡನೆ ಕರುಳು ಮತ್ತು ಲಿವರ್​ಗೆ ತಲುಪುತ್ತವೆ. ದೀರ್ಘಕಾಲದಲ್ಲಿ ಹಾರ್ಮೋನ್ ಅಸಮತೋಲನ ಮತ್ತು ಲಿವರ್ ಡಿಟಾಕ್ಸ್ ಸಾಮರ್ಥ್ಯ ಕಡಿಮೆಯಾಗುತ್ತದೆ.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net