ದೀರ್ಘಕಾಲದವರೆಗೆ ಶುಂಠಿ ಕೆಡದಂತೆ ಸಂಗ್ರಹಿಸಲು ಬಯಸಿದರೆ ಈ ಟಿಪ್ಸ್ ಅನುಸರಿಸಿ

ginger
Published on

ಬೆಂಗಳೂರು: ಆಹಾರದ ರುಚಿ ಹೆಚ್ಚಲು ಸಾಮಾನ್ಯವಾಗಿ ನಾವು ಮನೆಯಲ್ಲಿ ಶುಂಠಿಯನ್ನು ಬಳಸುತ್ತೇವೆ. ಆದರೆ ಹೆಚ್ಚು ಶುಂಠಿ ಸಂಗ್ರಹಿಸಿದಾಗ ಅದು ಸ್ವಲ್ಪ ಸಮಯದ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಇಲ್ಲಿ ನಿಮಗಾಗಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ದೀರ್ಘಕಾಲದವರೆಗೆ ಶುಂಠಿಯನ್ನು ತಾಜಾವಾಗಿರಿಸಿಕೊಳ್ಳಬಹುದು.

* ಶುಂಠಿಯನ್ನು ಖರೀದಿಸಿದಾಗ ಯಾವಾಗಲೂ ತಾಜಾ ಖರೀದಿಸಿ. ಶುಂಠಿ ಒಣಗಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ತಾಜಾ ಶುಂಠಿಯನ್ನು ಖರೀದಿಸಿದರೆ, ಅದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ.

*ಶುಂಠಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಅದನ್ನು ಸಿಪ್ಪೆ ತೆಗೆಯದೆ ಗಾಳಿಯಾಡದ ಕಂಟೇನರ್ ಅಥವಾ ಜಿಪ್ ಲಾಕ್ ಬ್ಯಾಗ್‌ನಲ್ಲಿ ಇರಿಸಿ. ಇದು ಶುಂಠಿಯನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

*ತಾಜಾ ಶುಂಠಿಯನ್ನು ರೆಫ್ರಿಜರೇಟರ್​​​ನಲ್ಲಿ ಇರಿಸಬಹುದು, ಇದರಿಂದಾಗಿ ಅದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಜಿಪ್ ಲಾಕ್ ಬ್ಯಾಗ್‌ನಿಂದ ಗಾಳಿಯನ್ನು ಸಂಪೂರ್ಣವಾಗಿ ತೆಗೆದ ನಂತರವೇ ನೀವು ಅದನ್ನು ಫ್ರಿಜ್‌ನಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.

*ಇದಲ್ಲದೆ, ನೀವು ಶುಂಠಿಯನ್ನು ಒಣಗಿಸಿ ಸಂಗ್ರಹಿಸಬಹುದು. ಶುಂಠಿಯನ್ನು ಒಣಗಿಸಲು ನೀವು ಒವನ್ ಅಥವಾ ಏರ್ ಫ್ರೈಯರ್ ಅನ್ನು ಬಳಸಬಹುದು ಮತ್ತು ಅದನ್ನು ಮಸಾಲೆಯಾಗಿ ಬಳಸಲು ಪುಡಿಯನ್ನು ತಯಾರಿಸಬಹುದು.

*ಶುಂಠಿಯನ್ನು ಸಿಪ್ಪೆ ಸುಲಿದು ಕತ್ತರಿಸಿ ಬೇಕಿಂಗ್ ಶೀಟ್‌ನಲ್ಲಿ ಇರಿಸಿ ಮತ್ತು ತುಂಡುಗಳು ಗಟ್ಟಿಯಾದಾಗ ಫ್ರೀಜ್‌ನಲ್ಲಿ ಇರಿಸಿ. ನೀವು ಈ ಶುಂಠಿಯನ್ನು ಗಾಳಿಯಾಡದ ಡಬ್ಬದಲ್ಲಿ ಕೂಡ ಇಡಬಹುದು.

*ಶುಂಠಿಯನ್ನು ಕೆಲವು ದಿನಗಳವರೆಗೆ ಸಂರಕ್ಷಿಸಲು ಬಯಸಿದರೆ, ಸಿಪ್ಪೆ ತೆಗೆಯದ ಶುಂಠಿಯನ್ನು ಪೇಪರ್ ಬ್ಯಾಗ್ ಅಥವಾ ಪೇಪರ್ ಟವೆಲ್‌ನಲ್ಲಿ ಕಟ್ಟಿಡಿ. ಶುಂಠಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಗಾಜಿನ ಜಾರ್‌ನಲ್ಲಿ ಹಾಕಿ. ಈಗ ಅದಕ್ಕೆ ನಿಂಬೆರಸ ಸೇರಿಸಿ ಫ್ರಿಡ್ಜ್ ನಲ್ಲಿಟ್ಟರೆ ಶುಂಠಿ ಬೇಗ ಕೆಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net