ಬೀದಿಯಲ್ಲಿ ನಾಯಿಗಳು ನಿಮ್ಮನ್ನು ಬೆನ್ನಟ್ಟುತ್ತಿವೆಯೇ? ಎದ್ದನೋ ಬಿದ್ದನೋ ಅಂತ ಓಡ್ಬೇಡಿ..Stray dog

Stray dog
Published on

Stray dog : ಜನರು ಈ ಮೂಖಪ್ರಾಣಿಗಳ ಕುರಿತಾಗಿ ಪ್ರೀತಿಯನ್ನು ಹೊಂದಿದ್ದಾರೆ. ಸಾಕು ನಾಯಿಗಳಿಗೆ ಮನೆಯಲ್ಲಿ ಪ್ರೀತಿ ತೋರಿಸುತ್ತಿದ್ದರೆ ಹಲವರು ಬೀದಿ ನಾಯಿಗಳ ಕುರಿತಾಗಿಯೂ ಅಷ್ಟೇ ಪ್ರೀತಿ ತೋರಿಸಿ ಆಹಾರ ನೀಡುತ್ತಾರೆ. ಹೀಗಿರುವಾಗ ಕೆಲವೊಮ್ಮೆ ಬೀದಿ ನಾಯಿಗಳು ಹೆದರಿ ಅಥವಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಾಗೂ ಇನ್ನಿತರ ಕಾರಣಗಳಿಂದ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಹೀಗೆ ದಾಳಿ ಮಾಡಿದಾಗ ನೀವು ಯಾವ ರೀತಿ ಅವುಗಳಿಂದ ಪಾರಾಗಬೇಕು ಎನ್ನುವ ಪ್ರಶ್ನೆ ನಿಮಗೆ ಬಂದಿದ್ದರೆ ನಾವು ಈ ಕುರಿತಾಗಿ ನಿಮಗೆ ತಿಳಿಸಿಕೊಡಲಿದ್ದೇವೆ...

ಎದ್ದನೋ ಬಿದ್ದನೋ ಅಂತ ಓಡ್ಬೇಡಿ

ನೀವು ಬೀದಿ ನಾಯಿ ಎದುರು ಬಂದರೆ ನೇರ ಕಣ್ಣಿನ ಸಂಪರ್ಕವನ್ನು ತಪ್ಪಿಸಿ, ಶಾಂತವಾಗಿರಲು ಮತ್ತು ಸಾಮಾನ್ಯ ದೇಹದ ಭಂಗಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.

ಬೀದಿನಾಯಿಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ, ವಿಶೇಷವಾಗಿ ಅವು ಭಯಭೀತ, ಆಕ್ರಮಣಕಾರಿಯಾಗಿ ಕಂಡುಬಂದರೆ. ನೀವು ಬೀದಿನಾಯಿಯನ್ನು ಹಾದುಹೋಗಬೇಕಾದರೆ, ದೂರದಿಂದ ನಡೆದುಕೊಂಡು ಅಲ್ಲಿಂದ ಹೋಗಿ.

ಬೀದಿ ನಾಯಿ ನೋಡಿ ನೀವು ಓಡುವುದರಿಂದ ಅದರ ಬೇಟೆಯ ಪ್ರವೃತ್ತಿ ಹೆಚ್ಚಾಗುತ್ತದೆ ಮತ್ತು ಅದು ನಿಮ್ಮನ್ನು ಬೆನ್ನಟ್ಟಬಹುದು. ಬದಲಾಗಿ, ನಾಯಿಯನ್ನು ಗಮನಿಸುತ್ತಾ ನಿಧಾನವಾಗಿ ಮತ್ತು ಶಾಂತವಾಗಿ ದೂರ ಹೋಗಲು ಪ್ರಯತ್ನಿಸಿ.

ನಿಮ್ಮ ಬಳಿ ಛತ್ರಿ ಅಥವಾ ಕೋಲಿನಂತಹ ವಸ್ತುವಿದ್ದರೆ, ಅದನ್ನು ನಿಮ್ಮ ಮತ್ತು ನಾಯಿಯ ನಡುವೆ ರಕ್ಷಣಾತ್ಮಕ ತಡೆಗೋಡೆಯಾಗಿ ಬಳಸಿ. ನಿಮ್ಮ ನೆರೆಹೊರೆಯಲ್ಲಿ ದಾಳಿ ಮಾಡುವ ಬೀದಿ ನಾಯಿಯನ್ನು ನೋಡಿದರೆ, ಅದನ್ನು ನಿಮ್ಮ ಸ್ಥಳೀಯ ಪ್ರಾಣಿ ನಿಯಂತ್ರಣ ಕೇಂದ್ರ ಅಥವಾ ಹತ್ತಿರದ ಪ್ರಾಣಿ ಕಲ್ಯಾಣ ಸಂಸ್ಥೆಗೆ ವರದಿ ಮಾಡಿ.

ಸುಪ್ರೀಂ ಕೋರ್ಟ್ :

ದೆಹಲಿಯಲ್ಲಿ ಹೆಚ್ಚಾದ ನಾಯಿ ದಾಳಿ ಪ್ರಕರಣವನ್ನು ಗಮನಿಸಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು ಸುಪ್ರೀಂಕೋರ್ಟ್, ಆಗಸ್ಟ್ 11 ರಂದು ಆದೇಶವೊಂದನ್ನು ಪ್ರಕಟಿಸಿದೆ. ದೆಹಲಿ ಸರ್ಕಾರವು, ದೆಹಲಿಯಲ್ಲಿರುವ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಗೊಳಿಸಿ ಅವುಗಳಿಗೆ ನೆಲೆ ಕಲ್ಪಿಸಬೇಕು ಎಂದಿದೆ. ಸಿಎಂ ರೇಖಾ ಗುಪ್ತಾ ಅವರು, ಸುಪ್ರೀಂ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದಾರೆ. ಚಲನಚಿತ್ರ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಲಯದ ತೀರ್ಪಿಗೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ರಾಜಧಾನಿ ದೆಹಲಿಯ ಅಧಿಕಾರಿಗಳಿಗೆ ಎಲ್ಲಾ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತಕ್ಷಣವೇ ಕರೆದುಕೊಂಡು ಹೋಗಿ ನಾಯಿಗಳ ಆಶ್ರಯ ತಾಣಗಳಿಗೆ ಕಳುಹಿಸುವಂತೆ ನಿರ್ದೇಶಿಸಿದೆ. ಈ ಸೂಚನೆಗಳು ನೋಯ್ಡಾ, ಗುರಗಾಂವ್ ಮತ್ತು ಗಾಜಿಯಾಬಾದ್‌ಗೂ ಅನ್ವಯಿಸುತ್ತವೆ. ನಾಯಿಗಳನ್ನು ಬೀದಿಗಳಿಂದ ಹೊರತೆಗೆದು ಸಂಬಂಧಪಟ್ಟ ಅಧಿಕಾರಿಗಳು ನಿರ್ಮಿಸಿರುವ ಆಶ್ರಯ ತಾಣಗಳಲ್ಲಿ ಇಡಬೇಕೆಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net