ಸುಲಭವಾಗಿ ತೂಕ ಇಳಿಸಲು ಈ ಟ್ರಿಕ್​​ಗಳನ್ನೊಮ್ಮೆ ಫಾಲೋ ಮಾಡಿ | Weight Loss

Weight Loss
Published on

Weight Loss: ಇತ್ತೀಚೆಗೆ ಜನರು ತೂಕ ಇಳಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ. ಡಯಟ್​​, ಯೋಗ, ವ್ಯಾಯಾಮ ಅಂತ ಹೆಚ್ಚಿನ ಸಮಯವನ್ನು ಅದಕ್ಕಾಗಿಯೇ ಮುಡಿಪಾಗಿರುತ್ತಾರೆ. ಹೀಗಿರುವಾಗ ಸುಲಭವಾಗಿ ನೀವು ಮನೆಯಲ್ಲಿಯೇ ಈ ರೀತಿ ಮಾಡಿ ನಿಮ್ಮ ತೂಕವನ್ನು ಇಳಿಸಬಹುದು. ಅದು ಹೇಗೆ ಗೊತ್ತಾ ಇಲ್ಲಿದೆ ನೋಡಿ.

1. ಕುಡಿಯುವ ನೀರು

ತೂಕ ಇಳಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದರೆ ಅದು ನೀರು. ಇದನ್ನು ಊಟದ ಮೊದಲು ಮತ್ತು ನಂತರ ಮಾಡಬೇಕು. ಇದು ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಹೆಚ್ಚು ತಿನ್ನಲು ಮನಸಾಗುವುದಿಲ್ಲ. ಇದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ.

2. 8020 ಡಯಟ್

ಅಂದರೆ ಇದರಲ್ಲಿ ಶೇಕಡಾ 20 ನೀವು ಇಷ್ಟಪಡುವ ತಿಂಡಿಗಳನ್ನು ತಿನ್ನಿ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ಶೇಕಡ 90 ರಷ್ಟು ರೋಗಗಳನ್ನು ನಿವಾರಿಸುತ್ತದೆ.

3. ನಡೆಯುವುದು

ಊಟ ಮಾಡಿದ ನಂತರ ಹೊಟ್ಟೆ ತುಂಬಿದ ಅನುಭವವಾದಾಗ ನಡೆಯುವುದು ಒಳ್ಳೆಯದು. ಇದು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದ್ದರಿಂದ ನಿಯಮಿತವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

4. ಮಲಗುವ ಸಮಯದಲ್ಲಿ ಹಸಿವಾಗುವುದು

ನೀವು ಮಲಗಲು ಹೋದಾಗ ಸಂಪೂರ್ಣವಾಗಿ ಹೊಟ್ಟೆ ತುಂಬಿಲ್ಲ, ಬದಲಾಗಿ ಸ್ವಲ್ಪ ಹಸಿದಿರುವಂತೆ ನೋಡಿಕೊಳ್ಳಿ. ಇದು ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಇದಲ್ಲದೆ, ನೀವು ಹೊಟ್ಟೆ ತುಂಬಿಸಿಕೊಂಡು ಮಲಗಿದರೆ, ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಇವುಗಳ ಜೊತೆಗೆ

ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕು.

ನೀವು ಹೆಚ್ಚು ಪ್ರೋಟೀನ್ ಸೇವಿಸಬೇಕು.

ಉತ್ತಮ ಜೀವನಶೈಲಿಯನ್ನು ಅನುಸರಿಸಿ

ನಿಯಮಿತ ವ್ಯಾಯಾಮಗಳು ಬಹಳ ಮುಖ್ಯ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net