

ಸೋಂಪು ಬೀಜಗಳನ್ನು ಸಾಂಪ್ರದಾಯಿಕವಾಗಿ ಇಟಾಲಿಯನ್ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೂ, ಅವುಗಳನ್ನು ಎಲ್ಲಾ ರೀತಿಯ ಆಹಾರಗಳಲ್ಲಿ ಬಳಸಬಹುದು. ಇತ್ತೀಚಿನ ವರ್ಷಗಳಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯು ಪಾಕವಿಧಾನಗಳಲ್ಲಿ ಸೋಂಪು ಬೀಜಗಳ ವಿಶಿಷ್ಟ ಸ್ಥಾನ ಪಡೆದಿವೆ. ಹಾಗೇಯೇ ಭಾರತದಲ್ಲಿಯೂ ಅದರ ಬಳಕೆ ಹೆಚ್ಚಾಗಿದೆ.
ಅಡುಗೆಯಲ್ಲಿ ಪರಿಮಳಕ್ಕಾಗಿ ಬಳಸುವ ಸೋಂಪು ಬೀಜಗಳು ಹಲವಾರು ಫೋಷಕಾಂಖಗಳ ಕಣಜವಾಗಿದ್ದು, ಆರೋಗ್ಯಕಾರಿಯಾಗಿದೆ. ಈ ಬೀಜಗಳು ಲೈಕೋರೈಸ್‌ಗೆ ಹೋಲುವ ಸಿಹಿ, ಶಕ್ತಿಯುತ ಪರಿಮಳವನ್ನು ಹೊಂದಿದ್ದು, ಸಾಮಾನ್ಯವಾಗಿ ಆಹಾರ ಬೇಗ ಜೀರ್ಣವಾಗಲಿ ಎಂದು ಬಳಸಲಾಗುತ್ತದೆ.
ಕ್ಯಾನ್ಸರ್ ತಡೆಹಟ್ಟುವಿಕೆ
ಕ್ಯಾನ್ಸರ್ ತಡೆಗಟ್ಟುವಿಕೆ ಸೋಂಪು ಬೀಜಗಳಲ್ಲಿ ಕಂಡುಬರುವ ಒಂದು ಪ್ರಮುಖ ಸಂಯುಕ್ತವೆಂದರೆ ಅನೆಥೋಲ್, ಇದು ಕ್ಯಾನ್ಸರ್ ವಿರುದ್ಧ ಹೋರಾಟದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಮತ್ತು ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಲ್ಲಿಸಲು ಅನೆಥೋಲ್ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ತೋರಿಸಿದೆ.
ತೂಕ ಇಳಿಕೆಗೆ ಸಹಾಯಕ
ತೂಕ ಇಳಿಕೆ ಸೋಂಪು ಬೀಜಗಳನ್ನು ಕೆಲವೊಮ್ಮೆ ತೂಕ ಇಳಿಕೆಗೆ ಸಾಧನವಾಗಿ ಮಾರಾಟ ಮಾಡಲಾಗುತ್ತದೆ. ಸೋಂಪು ಬೀಜಗಳು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ವಾದದಲ್ಲಿ ಸ್ವಲ್ಪ ಸತ್ಯವಿರಬಹುದು. ಏಕೆಂದರೆ, ಒಂದು ಆರಂಭಿಕ ಅಧ್ಯಯನದ ಪ್ರಕಾರ ಸೋಂಪು ಬೀಜಗಳನ್ನು ತಿನ್ನುವುದರಿಂದ ಹಸಿವು ಕಡಿಮೆ ಮಾಡುತ್ತದೆ ಮತ್ತು ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ.
ಬಾಣಂತಿ ಮಹಿಳೆಯರಿಗೂ ಸಹಾಯಕ
ಬಾಣಂತಿ ಮಹಿಳೆಯರಲ್ಲಿ ಹಾಲು ಹೆಚ್ಚಳ ಸ್ತನ್ಯಪಾನ ಮಾಡಿಸುವ ಮಹಿಳೆಯರು ಕೆಲವೊಮ್ಮೆ ತಮ್ಮ ಮಕ್ಕಳಿಗೆ ಬೇಕಾದಷ್ಟು ಹಾಲು ನೀಡಲು ಹೆಣಗಾಗಬೇಕಾಗುತ್ತದೆ. ಸೋಂಪು ಬೀಜಗಳು ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಸೋಂಪು ಬೀಜಗಳಲ್ಲಿ ಕಂಡುಬರುವ ಪ್ರಮುಖ ಸಂಯುಕ್ತವಾದ ಅನೆಥೋಲ್, ಈಸ್ಟ್ರೊಜೆನ್ ಅನ್ನು ಅನುಕರಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸೋಂಪು ಬೀಜಗಳನ್ನು ತಿನ್ನುವುದು ಪ್ರೊಲ್ಯಾಕ್ಟಿನ್ ಅನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಪ್ರೊಲ್ಯಾಕ್ಟಿನ್ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಹಾರ್ಮೋನ್ ಆಗಿದೆ.