’ಸ್ನೇಲ್ ಮೇಲ್’ ಎಂದರೆ ಸಾಂಪ್ರದಾಯಿಕ ಅಂಚೆ ಮೂಲಕ ಕಳುಹಿಸುವ ಪತ್ರಗಳು. ಆದರೆ, ಈಗ ಇದು ಕೇವಲ ಪತ್ರವಲ್ಲ, ಒಂದು ವಿಶೇಷ ಅನುಭವ ಅಂತ ಹೇಳಬಹುದು. ಭಾರತ ಸೇರಿ ಹಲವು ದೇಶಗಳಲ್ಲಿ ಈಗ ಸ್ನೇಲ್ ಮೇಲ್ ಕ್ಲಬ್‌ಗಳು (Snail Mail Clubs) ಆರಂಭವಾಗಿವೆ. ಈ ಕ್ಲಬ್‌ಗಳಿಗೆ ಸದಸ್ಯತ್ವ ಪಡೆಯುವವರು ಪ್ರತಿ ತಿಂಗಳು ತಮ್ಮ ಮನೆಗೆ ಸುಂದರವಾಗಿ ಅಲಂಕರಿಸಿದ, ಕೈಬರಹದ ಲಕೋಟೆಗಳನ್ನು ಪಡೆಯುತ್ತಾರೆ. ಈ ಪತ್ರಗಳ ಜತೆಗೆ ಬಣ್ಣಬಣ್ಣದ ಸ್ಟಿಕ್ಕರ್‌ಗಳು, ಪೋಸ್ಟ್‌ಕಾರ್ಡ್‌ಗಳು, ಬುಕ್‌ಮಾರ್ಕ್‌ಗಳು, ಒಣಗಿಸಿದ ಹೂವುಗಳು, ಫ್ರಿಜ್ ಮ್ಯಾಗ್ನೆಟ್‌ಗಳು ಸೇರಿದಂತೆ ಹಲವು ಸಣ್ಣ ಉಡುಗೊರೆಗಳೂ ಇದರಲ್ಲಿರುತ್ತದೆ.