50 ಕ್ಯಾರೆಟ್ ವಜ್ರದ ನೆಕ್ಲೇಸ್ ಧರಿಸಿ ಮಿಂಚಿದ Cristiano Ronaldo ಸಂಗಾತಿ; ಜಾರ್ಜಿಯಾ ಮದುವೆ ಜ್ಯುವೆಲ್ಲರಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

Georgina Rodriguez Queen of Kalahari 342 carat diamond
Georgina Rodriguez Queen of Kalahari 342 carat diamond
Published on

ಪ್ರಮುಖ ಮುಖ್ಯಾಂಶಗಳು

  • ಮದುವೆಗೆ 342-ಕ್ಯಾರೆಟ್ ತೂಕದ ಅಪರೂಪದ 'ಕ್ವೀನ್ ಆಫ್ ಕಲಹರಿ' ವಜ್ರ ಧರಿಸಿದ್ದ ಜಾರ್ಜಿಯಾ
  • ರೊಡ್ರಿಗಸ್ ಒಂದೇ ವಜ್ರವನ್ನು ನುರಿತ ಕುಶಲಕರ್ಮಿಗಳು 23 ಪ್ರತ್ಯೇಕ ವಜ್ರಗಳಾಗಿ ಕತ್ತರಿಸಿ ರೂಪಿಸಲಾಗಿದೆ
  • ಜಾರ್ಜಿನಾ ತಮ್ಮ ಮದುವೆಯಲ್ಲಿ ಈ ಅತ್ಯಮೂಲ್ಯವಾದ ವಜ್ರದ ಆಭರಣವನ್ನು ಧರಿಸಿ ಮಿಂಚಿದರು​

Georgina Rodriguez Queen of Kalahari 342 carat diamond:

ಪ್ರಸಿದ್ಧ ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಆಗಸ್ಟ್​11ರಂದು ಉದ್ಯಮಿ ಮತ್ತು ಮಾಡೆಲ್​ ಆಗಿರುವ ಜಾರ್ಜಿನಾ ರೊಡ್ರಿಗಸ್​ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪೋರ್ಚುಗಲ್​ನ ಕಾಸ್ಕೈಸ್​​ನಲ್ಲಿ ತಮ್ಮ ಮಕ್ಕಳ ಮುಂದೆ ಸರಳವಾಗಿ ಮದುವೆ ಮಾಡಿಕೊಂಡರು. ವಿವಾಹ ಕಾರ್ಯಕ್ರಮ ಮುಗಿದು

ಕೆಲವು ದಿನಗಳು ಕಳೆದಿವೆ. ಇಂದಿಗೂ ಚರ್ಚೆಗೆ ಗ್ರಾಸವಾಗಿರುವ ವಿಚಾರ ಏನೆಂದರೆ, ಅದು ಮದುವೆಗೆ ಜಾರ್ಜಿಯಾ ಧರಿಸಿದ್ದ 478 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್​​.

50 ಕ್ಯಾರೆಟ್ ಡಿ-ದೋಷರಹಿತ ವಜ್ರದ ನೆಕ್ಲೇಸ್ ಮಾಡೆಲ್​ ಬಗ್ಗೆ, ಎಷ್ಟು ತೂಕ ಇದೆ. ಇದರ ವಿನ್ಯಾಸ ಮಾಡಿದ್ಯಾರು ಎನ್ನುವ ಚರ್ಚೆಗಳು ಸಾರ್ವಜನಿಕರ ವಲಯದಲ್ಲಿ, ನೆಟ್ಟಿಗರಲ್ಲಿ ಉಳಿದುಕೊಂಡಿದೆ.

ದೀರ್ಘ ಕಾಲದ ಸಂಗಾತಿ ಜೊತೆ ಮದುವೆ

ಒಂದು ದಶಕದಿಂದ ಒಟ್ಟಿಗೆ ಇದ್ದ 41 ವರ್ಷದ ರೊನಾಲ್ಡೊ ಮತ್ತು 32 ವರ್ಷದ ಜಾರ್ಜಿಯಾ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಐದು ಮಕ್ಕಳ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ಮದುವೆ ಮಾಡಿಕೊಂಡರು ಜಾರ್ಜಿಯಾ ಅವರ ಆಕರ್ಷಕ ಉಡುಗೆಯ ಶೈಲಿ ಈಗ ಜಾಗತಿಕ ಮಟ್ಟದಲ್ಲ ಫ್ಯಾಷನ್ ಲೋಕದ ಗಮನ ಸೆಳೆದಿದೆ.
ಜಾರ್ಜಿನಾ ರೊಡ್ರಿಗಸ್​ ಕ್ಲಾಸಿ ಮತ್ತು ಐಷಾರಾಮಿ ಲುಕ್ ನೀಡುವ ಗುಚ್ಚಿ ಸ್ಕರ್ಟ್ ಸೂಟ್ ಧರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಅವರ ಈ ಸಿಂಪಲ್ ಹಾಗೂ ಎಲಿಗೆಂಟ್ ಲುಕ್, ಡೈಮಂಡ್ ನೆಕ್ಲೇಸ್ ಮದುವೆಯ ಅತಿ ದೊಡ್ಡ ಆಕರ್ಷಣೆಯ ಕೇಂದ್ರವಾಯಿತು.

ಜಾರ್ಜಿಯಾ ಧರಿಸಿದ್ದ ನೆಕ್ಲೇಸ್ ಬೆಲೆ ಎಷ್ಟು?

ಜಾರ್ಜಿಯಾ ರೊಡ್ರಿಗಸ್​ ವಿವಾಹದ ಸಂದರ್ಭದಲ್ಲಿ ಚೋಪಾರ್ಡ್‌ನ ಗಾರ್ಡನ್ ಆಫ್ ಕಲಹರಿ ಸಂಗ್ರಹದ ಆಭರಣಗಳು ಸದ್ದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡಿಂಗ್​ ಟಾಪಿಕ್​ ಆಗಿ ಬದಲಾಗಿದೆ.

ವಿನ್ಯಾಸವಾಗಿರುವುದು ಹೀಗೆ

ಹಲವು ವರದಿಗಳ ಪ್ರಕಾರ ಜಾರ್ಜಿಯಾ ಅವರು ಧರಿಸಿದ್ದ 50 ಕ್ಯಾರೆಟ್ ಡಿ-ದೋಷರಹಿತ ವಜ್ರದ ನೆಕ್ಲೇಸ್

ಸಾಮಾನ್ಯವಾದದ್ದಲ್ಲ; ಇವು 'ಕ್ವೀನ್ ಆಫ್ ಕಲಹರಿ' ಎಂಬ ಹೆಸರಿನ ಅಪರೂಪದ 342-ಕ್ಯಾರೆಟ್ ವಜ್ರದಿಂದ ತಯಾರಿಸಲಾಗಿರುವುದು ಎನ್ನಲಾಗಿದೆ.

ವರದಿಯ ಪ್ರಕಾರ, ಈ ಬೃಹತ್ 342-ಕ್ಯಾರೆಟ್ ವಜ್ರವನ್ನು ಅತ್ಯಂತ ಕರಾರುವಾಕ್ಕಾಗಿ ವಿಭಜಿಸಿ, ಒಟ್ಟು 23 ವಿಭಿನ್ನ ಮತ್ತು ಅದ್ಭುತವಾದ ವಜ್ರಗಳಾಗಿ ಪರಿವರ್ತಿಸಲಾಗಿದೆ.

$50 ಮಿಲಿಯನ್, ಭಾರತದ ರೂಪಾಯಿಯಲ್ಲಿ 478 ಕೋಟಿ ಮೌಲ್ಯದ್ದಾಗಿದೆ.

ಈ ಐಷಾರಾಮಿ ಆಭರಣವು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಪಂಚದಾದ್ಯಂತ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ, (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net