ಚಿನ್ನ ಖರೀದಿಸುವ ಮುನ್ನ ಎಚ್ಚರ! ಈ ವಿಚಾರ ಮಿಸ್ ಮಾಡಿದ್ರೆ ನಷ್ಟ | Be careful before gold

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನ ಕೊಳ್ಳುವ ಮುನ್ನ ಈ ಚೆಕ್‌ಲಿಸ್ಟ್ ಗೊತ್ತಿರಲಿ
  • ಚಿನ್ನ ನಿಜಕ್ಕೂ ಗುಣಮಟ್ಟದ್ದೇ? ಚೆಕ್ ಮಾಡುವುದು ಹೇಗೆ?
Jewellery Buying Tips: ಚಿನ್ನಾಭರಣ ಅಂದ್ರೆ ಬರೀ ಫ್ಯಾಷನ್ ಅಲ್ಲ, ಅದೊಂದು ಹೂಡಿಕೆಯೂ ಹೌದು. ಆಭರಣ ನೋಡಿದ ತಕ್ಷಣ ಇಷ್ಟ ಆಗಬಹುದು. ಅದರ ಡಿಸೈನ್, ಹೊಳಪು, ಸ್ಟೋನ್‌ಗಳು ಎಲ್ಲವೂ ಕಣ್ಣಿಗೆ ಬಿದ್ದು ಖರೀದಿಸಬೇಕು ಅನಿಸಬಹುದು. ಆದರೆ ದುಡ್ಡು ಕೊಡುವ ಮುನ್ನ ಆಭರಣದ ಗುಣಮಟ್ಟ ಮತ್ತು ಶುದ್ಧತೆ ಬಗ್ಗೆ ಚೆಕ್ ಮಾಡೋದು ಬಹಳ ಮುಖ್ಯ. ಹಾಗಿದ್ರೆ ಚಿನ್ನ, ಬೆಳ್ಳಿ ಅಥವಾ ವಜ್ರದ ಆಭರಣ ಖರೀದಿಸುವಾಗ ಏನೇನು ನೋಡಬೇಕು? ಇಲ್ಲಿದೆ ಸರಳ ಗೈಡ್.

1. ಮೊದಲು ಹಾಲ್‌ಮಾರ್ಕ್ ನೋಡಿ

ಚಿನ್ನ ಖರೀದಿಸುವಾಗ ಬಿಐಎಸ್(BIS) ಹಾಲ್‌ಮಾರ್ಕ್ ಮತ್ತು ಎಚ್‌ಯುಐಡಿ(HUID) ಇದೆಯೇ ಎನ್ನುವುದನ್ನು ತಪ್ಪದೇ ಪರಿಶೀಲಿಸಿ. ಬೆಳ್ಳಿ ಆಭರಣ ಖರೀದಿಸುವಾಗ 925 ಹಾಲ್‌ಮಾರ್ಕ್ ಇದೆಯೇ ನೋಡಿ. ಇದು ಆಭರಣದ ಶುದ್ಧತೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

2. ಅಂಚು ಮತ್ತು ಫಿನಿಶಿಂಗ್ ಚೆಕ್ ಮಾಡಿ

ಆಭರಣವನ್ನು ಕೈಗೆ ತೆಗೆದುಕೊಂಡು ಚೆನ್ನಾಗಿ ಗಮನಿಸಿ. ಅಂಚುಗಳು ನಯವಾಗಿವೆಯಾ? ಎಲ್ಲಾದರೂ ಒರಟಾಗಿದೆಯಾ? ಫಿನಿಶಿಂಗ್ ಸರಿಯಾಗಿದೆಯಾ? ಆಭರಣದ ಎಲ್ಲಾ ಭಾಗಗಳಲ್ಲೂ ಒಂದೇ ರೀತಿಯ ಗುಣಮಟ್ಟದ ಕೆಲಸ ಇರಬೇಕು. ಫಿನಿಶಿಂಗ್ ಚೆನ್ನಾಗಿದ್ದರೆ ಮಾತ್ರ ಒಡವೆ ಚೆನ್ನಾಗಿ ಕಾಣುವುದು.

3. ಹುಕ್ ಕೂಡ ಮುಖ್ಯ

ನೆಕ್ಲೇಸ್ ಅಥವಾ ಬ್ರೇಸ್ಲೆಟ್‌ನ ಹುಕ್ ಸರಿಯಾಗಿ ಲಾಕ್ ಆಗುತ್ತಿದೆಯಾ ಅನ್ನೋದನ್ನು ಒಮ್ಮೆ ಪರೀಕ್ಷಿಸಿ. ತುಂಬಾ ಸಡಿಲವಾಗಿದ್ದರೆ ಮುಂದೆ ಆಭರಣ ಕಳೆದುಕೊಳ್ಳುವ ಅಪಾಯ ಇರಬಹುದು.

4. ವಜ್ರ ಮತ್ತು ಸ್ಟೋನ್‌ಗಳನ್ನು ಸೂಕ್ಷ್ಮವಾಗಿ ನೋಡಿ

ಆಭರಣದಲ್ಲಿರುವ ಹರಳುಗಳು ಗಟ್ಟಿಯಾಗಿ ಫಿಕ್ಸ್ ಆಗಿವೆಯಾ? ಎಲ್ಲಾದರೂ ಸಡಿಲವಾಗಿದೆಯಾ? ಒಂದೊಂದು ಸ್ಟೋನ್ ಬೇರೆ ಬೇರೆ ರೀತಿಯಲ್ಲಿ ಕುಳಿತಿದೆಯಾ? ಅನ್ನೋದನ್ನು ವಿವಿಧ ಕೋನಗಳಿಂದ ನೋಡಿ.

5. ಚಿನ್ನದ ಶುದ್ಧತೆ ಮತ್ತು ಮೇಕಿಂಗ್ ಚಾರ್ಜ್ ಕೇಳಿ

ಸ್ಟೋನ್‌ಗಳ ಮೇಲೆ ಮಾತ್ರ ಗಮನ ಕೊಡಬೇಡಿ. ಚಿನ್ನ ಅಥವಾ ಬೆಳ್ಳಿಯ ಶುದ್ಧತೆ ಎಷ್ಟು? ಮೇಕಿಂಗ್ ಚಾರ್ಜ್ ಎಷ್ಟು? ಬೇರೆ ಯಾವುದೇ ಹೆಚ್ಚುವರಿ ಶುಲ್ಕ ಇದೆಯಾ? ಅನ್ನೋದನ್ನೆಲ್ಲಾ ಬಿಲ್ ಮಾಡುವ ಮುನ್ನವೇ ಕೇಳಿ.

6. ರಿಪೇರಿ, ವಾರಂಟಿ ಬಗ್ಗೆ ತಿಳಿದುಕೊಳ್ಳಿ

ಮುಂದೆ ಆಭರಣಕ್ಕೆ ರಿಪೇರಿ ಬೇಕಾದರೆ ಏನು ಮಾಡಬೇಕು? ವಾರಂಟಿಯಲ್ಲಿ ಹೇಗೆ? ಆಭರಣದದ ಗಾತ್ರ ಬದಲಾಯಿಸಬಹುದಾ? ಸ್ಟೋನ್ ಸಡಿಲವಾದರೆ ಸರ್ವಿಸ್ ಸಿಗುತ್ತಾ? ಇಂಥ ಪ್ರಶ್ನೆಗಳನ್ನು ಮೊದಲೇ ಕೇಳಿ. ಒಳ್ಳೆಯ ಮಾಲಿಕರು ನೀವು ಇಂಥ ಪ್ರಶ್ನೆ ಕೇಳಿದಾಗ ಬೇಸರ ಮಾಡಿಕೊಳ್ಳಲ್ಲ. ಬದಲಾಗಿ ಶುದ್ಧತೆ, ಬೆಲೆ, ಸರ್ಟಿಫಿಕೇಟ್, ವಾರಂಟಿ ಮತ್ತು ಮೇಕಿಂಗ್ ಚಾರ್ಜ್ ಬಗ್ಗೆ ಕ್ಲಿಯರ್ ಮಾಹಿತಿ ಕೊಡಬೇಕು.
ಆಭರಣದ ಹೊಳಪು ನೋಡಿ ಖರೀದಿಸುವುದು ಸುಲಭ. ಆದರೆ ಹಣ ಕೊಡುವ ಮುನ್ನ ಅದರ ಗುಣಮಟ್ಟವನ್ನು ಪರಿಶೀಲಿಸುವುದೇ ಜಾಣತನ. ಇಂದು ಇಷ್ಟವಾದ ಆಭರಣ, ವರ್ಷಗಳ ನಂತರವೂ ಇಷ್ಟವಾಗಬೇಕು. ಖರೀದಿಗೂ ಮುನ್ನ ಈ ಚೆಕ್‌ಲಿಸ್ಟ್ ಒಮ್ಮೆ ನೋಡಿಕೊಳ್ಳಿ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net