ಮಳೆಗಾಲದಲ್ಲಿ ಬಟ್ಟೆ ಒಗೆಯುತ್ತಿದ್ದೀರಾ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ! | Clothes Washing in monsoon

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಬಟ್ಟೆಗಳಿಗೆ ಬೇಕು ಹೆಚ್ಚಿನ ಕಾಳಜಿ
  • ಮಳೆಗಾಲದಲ್ಲಿ ಬಟ್ಟೆ ಒಗೆಯುವಾಗ ಈ ತಪ್ಪುಗಳನ್ನು ಮಾಡಬೇಡಿ
  • ನಿಮ್ಮ ಉಡುಪುಗಳು ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ
Clothes Washing: ಮಳೆಗಾಲದಲ್ಲಿ ಬಟ್ಟೆ ಒಗೆಯುವುದಷ್ಟೆ ಅಲ್ಲ, ಅವುಗಳನ್ನು ಒಣಗಿಸುವುದೂ ದೊಡ್ಡ ಸವಾಲು. ವಾತಾವರಣ ತಂಪಾಗಿರುವುದರಿಂದ ಬಟ್ಟೆಗಳಲ್ಲಿ ದುರ್ವಾಸನೆ, ಶಿಲೀಂಧ್ರ ಹಾಗೂ ಕಲೆಗಳು ಕಾಣಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಮಾಡುವ ರೀತಿಯಲ್ಲೇ ಮಳೆಗಾಲದಲ್ಲೂ ಒಗೆದರೆ, ಕೆಲವೊಮ್ಮೆ ನಿಮ್ಮ ನೆಚ್ಚಿನ ಬಟ್ಟೆಗಳು ಹಾಳಾಗಬಹುದು. ಉಡುಪುಗಳು ಸ್ವಚ್ಛವಾಗಿ, ಫ್ರೆಶ್ ಆಗಿ ಮತ್ತು ಹೆಚ್ಚು ದಿನ ಬಳಸಬೇಕೆಂದರೆ ಈ 5 ತಪ್ಪುಗಳನ್ನು ಮಾತ್ರ ಮಾಡಬೇಡಿ.

1. ಒದ್ದೆ ಬಟ್ಟೆಗಳನ್ನು ಮೆಷಿನ್‌ನಲ್ಲೇ ಬಿಡಬೇಡಿ

ವಾಷಿಂಗ್ ಮುಗಿದ ನಂತರ ಬಟ್ಟೆಗಳನ್ನು ಮೆಷಿನ್‌ನಲ್ಲೇ ಹೆಚ್ಚು ಹೊತ್ತು ಬಿಟ್ಟರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇದೆ. ಇದರಿಂದ ಬಟ್ಟೆಗಳಲ್ಲಿ ಕೆಟ್ಟ ವಾಸನೆ ಬರಬಹುದು. ವಾಷ್ ಮುಗಿದ ಕೂಡಲೇ ಬಟ್ಟೆಗಳನ್ನು ಹೊರತೆಗೆದು ಒಣಗಲು ಹಾಕಿ.

2. ಲೆದರ್​ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ಮುಚ್ಚಿಡಬೇಡಿ

ಜಾಕೆಟ್, ಕೈಚೀಲ, ಸ್ಯೂಡ್ ಶೂಗಳಂತಹ ವಸ್ತುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಡಬೇಡಿ. ಆ ಚೀಲದ ಒಳಗೆ ತೇವಾಂಶವಿದ್ದರೆ ಶಿಲೀಂಧ್ರ, ಕಲೆ ಮತ್ತು ದುರ್ವಾಸನೆ ಆಗುತ್ತೆ. ಚೆನ್ನಾಗಿ ಗಾಳಿಯಾಡುವ ಅಥವಾ ಡ್ರೈ ಇರುವ ಜಾಗದಲ್ಲಿ ಇಡುವುದು ಉತ್ತಮ.

3. ವಾಶ್ ಕೇರ್ ಲೇಬಲ್ ನೋಡದೆ ಬಟ್ಟೆ ಒಗೆಯಬೇಡಿ

ಎಲ್ಲಾ ಬಟ್ಟೆಗಳನ್ನು ಒಂದೇ ರೀತಿಯಲ್ಲಿ ತೊಳೆಯುವುದು ಸರಿಯಲ್ಲ. ಕೆಲವು ಬಟ್ಟೆಗಳಿಗೆ ಕೈಯಿಂದ ತೊಳೆಯುವುದು ಸೂಕ್ತವಾಗಿದ್ದರೆ, ಇನ್ನು ಕೆಲವು ಬಟ್ಟೆಗಳಿಗೆ ತಣ್ಣೀರು ಬೇಕಾಗುತ್ತೆ. ಲೇಬಲ್ ನೋಡದೆ ತೊಳೆದರೆ ಬಟ್ಟೆ ಗುಣಮಟ್ಟ ಹಾಳಾಗುವುದು, ಬಣ್ಣ ಹೋಗುವುದು ಅಥವಾ ಉಡುಪಿನ ಅಂದ ಬದಲಾಗುವ ಸಾಧ್ಯತೆ ಇದೆ.

4. ವಾಷಿಂಗ್ ಮೆಷಿನ್‌ಗೆ ಬಟ್ಟೆಗಳನ್ನು ತುಂಬಬೇಡಿ

ಒಂದೇ ಸಲ ಹೆಚ್ಚು ಬಟ್ಟೆ ತೊಳೆಯುವುದರಿಂದ ಸಮಯ ಮತ್ತು ನೀರು ಉಳಿಯಬಹುದು ಎಂದು ಅನಿಸುತ್ತೆ. ಆದರೆ ಮೆಷಿನ್ ಓವರ್‌ಲೋಡ್ ಮಾಡಿದರೆ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗಲ್ಲ. ಡಿಟರ್ಜೆಂಟ್ ಕೂಡ ಸರಿಯಾಗಿ ಕೆಲಸ ಮಾಡದೇ ಕೊಳೆ ಬಟ್ಟೆಯಲ್ಲೇ ಉಳಿಯಬಹುದು.

5. ಸಂಪೂರ್ಣ ಒಣಗುವ ಮುನ್ನ ಮಡಚಿಡಬೇಡಿ

ಮಳೆಗಾಲದಲ್ಲಿ ಬಟ್ಟೆಗಳು ಹೊರಗಿನಿಂದ ಒಣಗಿದಂತೆ ಕಂಡರೂ ಒಳಗೆ ತೇವವಿರುತ್ತವೆ. ಇಂತಹ ಬಟ್ಟೆಗಳನ್ನು ಮಡಚಿ ಕಪಾಟಿನಲ್ಲಿ ಇಟ್ಟರೆ ಕಲೆ ಮತ್ತು ದುರ್ವಾಸನೆ ಬರುತ್ತೆ. ಹೀಗಾಗಿ ಬಟ್ಟೆ ಸಂಪೂರ್ಣ ಒಣಗಿದ ಮೇಲೆಯೇ ಕಪಾಟಿಗೆ ಹಾಕಿ.

ಬಟ್ಟೆ ಹಾಳಾಗದಿರಲು ಈ ಟಿಪ್ಸ್​

ಬಟ್ಟೆ ಹಾಳಾಗದಿರಲು ಈ ಟಿಪ್ಸ್​ಗಳನ್ನು ಫಾಲೋ ಮಾಡಿ. ಮಳೆಗಾಲದಲ್ಲಿ ಬಟ್ಟೆಗಳ ಬಗ್ಗೆ ಸ್ವಲ್ಪ ಹೆಚ್ಚುವರಿ ಕಾಳಜಿ ವಹಿಸಬೇಕಾಗುತ್ತೆ. ಮೆಷಿನ್​ಗಿಂತ ಕೈಯಲ್ಲಿ ಬಟ್ಟೆ ಒಗೆಯುವುದು ಉತ್ತಮ. ಜೀನ್ಸ್​ಗಳಂತಹ ದಪ್ಪವಾದ ಬಟ್ಟೆಗಳನ್ನು ಎರಡ್ಮೂರು ಸಲ ಉಟ್ಟು ಆಮೇಲೆ ತೊಳೆಯುವುದು ಒಳ್ಳೆಯದು. ಹೀಗೆ ಮಾಡಿದರೆ ಮಳೆಗಾಲದಲ್ಲೂ ಬಟ್ಟೆಗಳನ್ನು ಫ್ರೆಶ್ ಆಗಿ ಇರಿಸಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net