ದುಬಾರಿ ಉತ್ಪನ್ನಗಳನ್ನು ಬಳಸಿದರೂ ಕೂದಲಿನ ಸಮಸ್ಯೆ ಕಡಿಮೆಯಾಗಿಲ್ಲವೇ? ಹಾಗಿದ್ದರೆ ಈ ಮನೆಮದ್ದು ಬಳಸಿ! Hair health

hairfall
Published on

Hair health: ನಾವು ಬೆಳೆಯುತ್ತಾ ಹೋದಂತೆ ತಾಯಂದಿರು ಬಾಲ್ಯದಲ್ಲಿ ನಮಗೆ ಕಲಿಸಿದ ಸೌಂದರ್ಯ ಸಲಹೆಗಳನ್ನು ಮರೆತು ಬಿಡುತ್ತೇವೆ. ಆದರೆ ವಾಸ್ತವದಲ್ಲಿ ಅವು ಶಾಶ್ವತ ಪರಿಣಾಮಕಾರಿ, ಕೂದಲಿನ ಆರೈಕೆಯ ವಿಚಾರದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸೀರಮ್​ಗಳು, ಚಿಕಿತ್ಸೆಗಳು ಮತ್ತು ದುಬಾರಿ ಉತ್ಪನ್ನಗಳು ಆಕರ್ಷಕವಾಗಿ ಕಾಣಬಹುದು. ಆದರೆ ಸರಳ ಮನೆಮದ್ದುಗಳು ಮನೆಯಲ್ಲಿಯೇ ಬಹಳ ಬೇಗನೆ ಫಲಿತಾಂಶವನ್ನು ನೀಡಬಹುದು.

1. ಅಲೊವೆರಾ ಜೆಲ್​

ಅಲೊವೆರಾ ಒಂದು ಆಯುರ್ವೇದಿಕ್​ ಔಷಧಿಯಾಗಿದ್ದು, ಇದನ್ನು ತಲೆಯ ಕೂದಲಿಗೆ ಹಚ್ಚುವುದರಿಂದ ಇದು ಕೂದಲು ಒರಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲೊವೆರಾ ತಂಪಾಗಿರುವುದರಿಂದ ಕೂದಲಿನ ಬುಡವನ್ನು ಬಲಪಡಿಸುತ್ತದೆ. ಹಾಗಾಗಿ 2 ವಾರಗಳಿಗೊಮ್ಮೆ ನಿಮ್ಮ ಕೂದಲಿಗೆ ಅಲೊವೆರಾ ಜೆಲ್​​ನ್ನು ಸಿಂಪಡಿಸಿ 1 ಗಂಟೆ ನಂತರ ತೊಳೆಯಿರಿ ಇದು ನಿಮ್ಮ ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.

2. ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಲಾವರಿಕ್​ ಆಸಿಡ್​ ಇರುವುದರಿಂದ ಕೂದಲನ್ನು ಉದುರುವುದನ್ನು ನಿಲ್ಲಿಸುತ್ತದೆ. ಹಾಗೆ ಇದು ಒಡೆದ ಕೂದಲನ್ನು ಚೆನ್ನಾಗಿ ಪೋಷಿಸುತ್ತದೆ. ಹಾಗಾಗಿ ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಕಾಯಿಸಿ ಅದನ್ನು ನಿಮ್ಮ ತೆಲೆಗೆ ಹಚ್ಚಿ ಮಸಾಜ್​ ಮಾಡುವುದರಿಂದ ಇದು ಕೂದಲನ್ನು ಪೋಷಿಸಿ, ಒಡೆಯುವ ತುದಿಗಳನ್ನು ನಿಲ್ಲಿಸುತ್ತದೆ.

3. ಈರುಳ್ಳಿ ರಸ

ಈರುಳ್ಳಿಯಲ್ಲಿ ಸಲ್ಫರ್​ ಇರುವುದರಿಂದ ಇದು ಕೂದಲಿನ ಬೇರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ರಸವನ್ನು ತಲೆಗೆ ಹಚ್ಚುವುದರಿಂದ ಕೂದಲಿನ ದುರ್ಬಲತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ನುಣ್ಣಗೆ ರುಬ್ಬಿ ತಲೆಗೆ ಹಚ್ಚಿ 15 ನಿಮಿಷ ಹಾಗೆ ಬಿಡಿ ಇದು ಕೂದಲನ್ನು ಸದೃಢವಾಗಿ ಬೆಳೆಸುವಂತೆ ಮಾಡುತ್ತದೆ.

4. ಮೆಂತೆ ಬೀಜಗಳು

ಮೆಂತೆ ಬೀಜಗಳಲ್ಲಿ ಪ್ರೊಟೀನ್​ ಹಾಗೂ ನೈಟ್ರಿಕ್​ ಆಸಿಡ್​ ಇದ್ದು, ಇದನ್ನು ತಲೆಯ ಕೂದಲಿಗೆ ಹಚ್ಚುವುದರಿಂದ ಕೂದಲನ್ನು ಬಲಪಡಿಸುತ್ತದೆ. ಹಾಗೆಯೇ ಒರಟುವಿಕೆಯನ್ನು ಕಡಿಮೆ ಮಾಡುತ್ತದೆ. 2 ಚಮಚ ಮೆಂತೆ ಬೀಜವನ್ನು ನೀರಿನಲ್ಲಿ ನೆನಸಿ ಬೆಳಿಗ್ಗೆ ಎದ್ದು ರುಬ್ಬಿ ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. ಇದು ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

5. ಮೊಟ್ಟೆಯ ಮಾಸ್ಕ್​

ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್​ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದು ನಿಮ್ಮ ಕೂದಲನ್ನು ಸದೃಢವಾಗಿ ಬೆಳೆಸಲು ಸಾಧ್ಯವಾಗುತ್ತದೆ. ಹಾಗೆಯೇ ಒಡೆದ, ದುರ್ಬಲ ಕೂದಲನ್ನು ತೆಗೆದುಹಾಕಿ ಹೊಸ ಕೂದಲನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net