ಮೊಟ್ಟೆಗಳು ಕೇವಲ ಬಾಯಿ ರುಚಿಯನ್ನು ತಣಿಸುವುದಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಮತ್ತು ಪೌಷ್ಟಿಕ ಸತ್ವಗಳ ಮೂಲ

rgfibnal
Published on

Benifits of eating egg: ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿಗಳಿರುತ್ತವೆ, ಇದು ಪ್ರೋಟೀನ್, ವಿಟಮಿನ್ ಡಿ, ಬಿ 12, ಬಿ 6, ಕ್ಯಾಲ್ಸಿಯಂ, ಫೋಲೇಟ್, ರೈಬೋಫ್ಲಾವಿನ್, ಸತು ಮತ್ತು ಕಬ್ಬಿಣದಂತಹ ವಿವಿಧ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
ಆಹಾರ ತಯಾರಿಕೆ ವಿಧಗಳಿಂದ ( ಆಮ್ಲೆಟ್, ಹಾರ್ಡ್ ಬಾಯ್ಲೆಡ್ ಎಗ್, ಡೆವಿಲ್ಡ್ ಎಗ್ ) ಮನೆ ಮಾತಾಗಿರುವ ಮೊಟ್ಟೆಗಳು ಕೇವಲ ಬಾಯಿ ರುಚಿಯನ್ನು ತಣಿಸುವುದಲ್ಲದೆ, ತಮ್ಮಲ್ಲಿನ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್ ಗಳು ಮತ್ತು ಪೌಷ್ಟಿಕ ಸತ್ವಗಳ ಮೂಲಗಳಿಂದ ಜನರ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುತ್ತೆ.

ಮೊಟ್ಟೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ
ವೈದ್ಯಲೋಕದ ಪ್ರಕಾರ ಮನುಷ್ಯನ ದೇಹಕ್ಕೆ ಅವಶ್ಯವಾಗಿ ಬೇಕಾಗಿರುವ ಕೊಲೆಸ್ಟ್ರಾಲ್ ಅಂಶ ಎಂದರೆ ಅದು ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಅಥವಾ ಹೈ - ಡೆನ್ಸಿಟಿ ಲಿಪಾಪ್ರೋಟೀನ್. ಇದನ್ನು ಹೆಚ್ ಡಿ ಎಲ್ ಎಂತಲೂ ಕರೆಯುತ್ತಾರೆ. ಯಾವ ವ್ಯಕ್ತಿಗೆ ಹೆಚ್ ಡಿ ಎಲ್ ಮಟ್ಟ ಹೆಚ್ಚಾಗಿರುವುದೋ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸಮಸ್ಯೆ ಮತ್ತು ಇನ್ನಿತರ ಪ್ರಮುಖ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಒಂದು ಅಧ್ಯಯನದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಆರು ವಾರಗಳ ತನಕ ಒಂದು ದಿನಕ್ಕೆ ಎರಡರಂತೆ ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು ಶೇಕಡ 10 % ನಷ್ಟು ಹೆಚ್ ಡಿ ಎಲ್ ಅಂಶ ಹೆಚ್ಚಾಗುತ್ತದೆ.

ಹೃದಯಕ್ಕೆ ಒಳ್ಳೆಯದು
ಕಳೆದ ದಶಕಗಳಲ್ಲಿ ಜನರು ನಂಬಿದಂತೆ ಮೊಟ್ಟೆ ಸೇವನೆಗೂ ಮತ್ತು ಹೃದಯದ ಕಾಯಿಲೆ ಅಥವಾ ಪಾರ್ಶ್ವವಾಯುವಿಗೂ ಯಾವುದೇ ಸಂಬಂಧವಿಲ್ಲ. ಆದರೆ ಕೆಲವೊಂದು ಸಂಶೋಧನೆಗಳು ತಿಳಿಸಿರುವಂತೆ ಯಾರಿಗೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಎಂದು ಕರೆಸಿಕೊಳ್ಳುವ ಮಧುಮೇಹದ ಸಮಸ್ಯೆ ಇದೆಯೋ ಅಂಥವರು ಮೊಟ್ಟೆಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುತ್ತಾರೆ ಎಂದು ಕಂಡು ಬಂದಿದೆ. ಯಾವ ವ್ಯಕ್ತಿ ತಾನು ತನ್ನ ಆಹಾರದಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಸೇವನೆ ಮಾಡುತ್ತಾನೆಯೋ ಮತ್ತು ಮೊಟ್ಟೆಗಳ ಸೇವನೆ ಮಾಡುತ್ತಾನೆಯೋ ಆತನಿಗೆ ಹೃದಯದ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಕಡಿಮೆ ಎಂದು ಕೆಲವು ಅಧ್ಯಯನಗಳು ತಿಳಿಸಿಕೊಟ್ಟಿವೆ.

ಮೊಟ್ಟೆ ತುಂಬಿಸುತ್ತದೆ ನಿಮ್ಮ ಹೊಟ್ಟೆ
ಬೆಳಗಿನ ಉಪಹಾರದಲ್ಲಿ ಮೊಟ್ಟೆಯ ಸೇವನೆಯಿಂದ ನಿಮಗೆ ದೀರ್ಘ ಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಇರುವುದು. ನೀವು ನಿಮ್ಮ ಉಪಹಾರಕ್ಕೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಚಿಕ್ಕ ಚಿಕ್ಕ ಆಹಾರಗಳ ನಡುವೆ ನಿಮಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಆಗಾಗ ಆಹಾರ ಸೇವನೆ ಮಾಡಬೇಕು ಎಂಬ ಭಾವನೆ ಉಂಟಾಗುವುದಿಲ್ಲ ಮತ್ತು ರಸ್ತೆ ಬದಿಯ ಆಹಾರಗಳನ್ನು ತಿನ್ನಬೇಕೆಂಬ ಚಪಲ ಕೂಡ ಕಡಿಮೆ ಆಗುತ್ತದೆ.
ಮೊಟ್ಟೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ವೈದ್ಯಲೋಕದ ಪ್ರಕಾರ ಮನುಷ್ಯನ ದೇಹಕ್ಕೆ ಅವಶ್ಯವಾಗಿ ಬೇಕಾಗಿರುವ ಕೊಲೆಸ್ಟ್ರಾಲ್ ಅಂಶ ಎಂದರೆ ಅದು ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಅಥವಾ ಹೈ - ಡೆನ್ಸಿಟಿ ಲಿಪಾಪ್ರೋಟೀನ್. ಇದನ್ನು ಹೆಚ್ ಡಿ ಎಲ್ ಎಂತಲೂ ಕರೆಯುತ್ತಾರೆ. ಯಾವ ವ್ಯಕ್ತಿಗೆ ಹೆಚ್ ಡಿ ಎಲ್ ಮಟ್ಟ ಹೆಚ್ಚಾಗಿರುವುದೋ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸಮಸ್ಯೆ ಮತ್ತು ಇನ್ನಿತರ ಪ್ರಮುಖ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಒಂದು ಅಧ್ಯಯನದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಆರು ವಾರಗಳ ತನಕ ಒಂದು ದಿನಕ್ಕೆ ಎರಡರಂತೆ ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು ಶೇಕಡ 10 % ನಷ್ಟು ಹೆಚ್ ಡಿ ಎಲ್ ಅಂಶ ಹೆಚ್ಚಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net