ಕಪ್ಪು ಒಣದ್ರಾಕ್ಷಿ ತಿಂದ್ರೆ ನೀವು ಈ ಎಲ್ಲ ಸಮಸ್ಯೆಗಳಿಂದ ಸೇಫ್​​ ಆಗಬಹುದು | Health Tips

Health Tips
Published on

Health Tips : ಒಣ ಬೀಜಗಳು ಹಾಗೂ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸಲು ಬಯಸುವವರು ಹೆಚ್ಚಾಗಿ ಉಪಾಹಾರದಲ್ಲಿ ಒಣ ಹಣ್ಣುಗಳು ಹಾಗೂ ಬೀಜಗಳನ್ನು ಸೇವಿಸುತ್ತಾರೆ. ಅದೇ ರೀತಿ ಕಪ್ಪು ಒಣದ್ರಾಕ್ಷಿಯೂ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿನಿತ್ಯ ಕಪ್ಪು ಒಣದ್ರಾಕ್ಷಿಯನ್ನು ತಿಂದರೆ ಯಾವೆಲ್ಲಾ ರೋಗಗಳಿಂದ ನೀವು ದೂರವಿರಬಹುದು, ಹಾಗೂ ಅವುಗಳನ್ನು ಸೇವಿಸುವ ಬಗೆ ಹೇಗೆ ಎನ್ನುವ ಉಪಯುಕ್ತ ಮಾಹಿತಿ ಇಲ್ಲಿದೆ.

ಕಪ್ಪು ಒಣದ್ರಾಕ್ಷಿ ಈ ಸಮಸ್ಯೆಗೆ ಪ್ರಯೋಜನಕಾರಿ:

ಅಧಿಕ ಬಿಪಿ ಸುಧಾರಣೆ: ಕಪ್ಪು ಒಣದ್ರಾಕ್ಷಿಗಳು ಪೊಟ್ಯಾಸಿಯಂನ ಸಮೃದ್ಧ ಮೂಲವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿದೆ.

ರೋಗನಿರೋಧಕ ಶಕ್ತಿ: ಕಪ್ಪು ಒಣದ್ರಾಕ್ಷಿ ವಿಟಮಿನ್ ಸಿ ಮತ್ತು ಬಿ ಯ ಅತ್ಯುತ್ತಮ ಮೂಲವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿಯೂ ದೇಹದ ನೈಸರ್ಗಿಕ ರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿಯಂತ್ರಣ: ಒಣದ್ರಾಕ್ಷಿ ಕರುಳಿನಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ತಿನ್ನಬಹುದು. ಇದು ಪರಿಣಾಮಕಾರಿ ಪರಿಹಾರವಾಗಿದೆ.

ಕಣ್ಣುಗಳ ಆರೋಗ್ಯ: ಕಪ್ಪು ಒಣದ್ರಾಕ್ಷಿಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಣ್ಣನ್ನು ರಕ್ಷಿಸಲು ಸಹಾಯ ಮಾಡುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಪೊರೆಗಳು ಬರದಂತೆ ಕಾಪಾಡುತ್ತದೆ.

ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ: ಕಪ್ಪು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಇದರಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿಗೆ ಪೋಷಣೆ ನೀಡುತ್ತದೆ. ಅಲ್ಲದೆ, ನಿಯಮಿತ ಸೇವನೆಯು ಚರ್ಮವನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಶಕ್ತಿ ನೀಡುವುದು: ದೇಹದ ಶಕ್ತಿಗಾಗಿ ಕಬ್ಬಿಣಾಂಶವು ಅಗತ್ಯ. ಕಪ್ಪು ದ್ರಾಕ್ಷಿಯಲ್ಲಿ ಕಬ್ಬಿಣಾಂಶವು ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ತುಂಬಾ ಲಾಭಕಾರಿ. ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಅಥವಾ ರಕ್ತಹೀನತೆ ಸಮಸ್ಯೆ ಇದ್ದರೆ ಒಣದ್ರಾಕ್ಷಿ ಸೇವಿಸಿ.

ಮೂಳೆಗಳ ಆರೋಗ್ಯ: ಕಪ್ಪು ಒಣ ದ್ರಾಕ್ಷಿಯಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಅಸ್ಥಿರಂಧ್ರತೆ ಸಮಸ್ಯೆಯನ್ನು ಎದುರಿಸುವಂತಹ ಮಹಿಳೆಯರಿಗೆ ಇದು ಒಳ್ಳೆಯ ಪರಿಹಾರ. ಯಾಕೆಂದರೆ ಇದರಲ್ಲಿನ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.

ಸೇವಿಸಲು ಸರಿಯಾದ ರೀತಿ ಮತ್ತು ಸಮಯ

ನೀರಿನಲ್ಲಿ ನೆನೆಸಿದ ಕಪ್ಪು ಒಣದ್ರಾಕ್ಷಿ ತಿನ್ನುವುದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೇ ಒಣದ್ರಾಕ್ಷಿಯನ್ನು ಹಾಲಿನಲ್ಲಿ ಸೇರಿಸಿ ತಿನ್ನಬಹುದು. ನೀವು ಅದನ್ನು ರಾತ್ರಿ, ಬೆಳಿಗ್ಗೆ ಮತ್ತು ಸಂಜೆ ತಿನ್ನಬಹುದು. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಇನ್ನಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ತೂಕ ಇಳಿಸಲು ಬಯಸುವವರು ಹೆಚ್ಚಾಗಿ ಉಪಾಹಾರದಲ್ಲಿ ಒಣ ಹಣ್ಣುಗಳು ಹಾಗೂ ಬೀಜಗಳನ್ನು ಬಳಸುವರು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net