ಮೊಡವೆ ಸಮಸ್ಯೆಯಿಂದ ಬೇಸತ್ತಿದ್ದೀರಾ.. ಇಲ್ಲಿದೆ ನೋಡಿ ಪರಿಹಾರ..

Pappay
Published on

ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ತಿಂದವರು ಅದರ ಬೀಜಗಳನ್ನು ಎಸೆಯುವುದುಂಟು. ಆದರೆ ಪಪ್ಪಾಯಿ ಬೀಜಗಳು ಕೂಡ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಅದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆಯೊಂದು ಹೇಳಿದೆ. ಪಪ್ಪಾಯಿ ಬೀಜದಲ್ಲಿ ಹಲವಾರು ರೀತಿಯ ಆಂಟಿ ಆಕ್ಸಿಡೆಂಟ್ಸ್ ಇವೆ. ಇದು ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ.

ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪಪ್ಪಾಯಿ ಬೀಜಗಳನ್ನು ಹೆಚ್ಚಾಗಿ ಸೇವಿಸುವುದು ಕೂಡ ಅಪಾಯಕಾರಿ. ಹೆಚ್ಚಿನ ಪ್ರಮಾಣದಲ್ಲಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅದರಲ್ಲಿರುವ ಬೆಂಜೈಲ್ ಐಸೊಥಿಯೊಸೈನೇಟ್ ಹಾನಿಕರವೂ ಹೌದು. ಆದ್ದರಿಂದ ಪಪ್ಪಾಯಿ ಬೀಜಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡಿ ಆರೋಗ್ಯಕರ ಲಾಭ ಪಡೆದುಕೊಳ್ಳಬೇಕು. ಆದ್ದರಿಂದ ಬಳಸುವ ಮೊದಲು ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ.

# ಸಾಮಾನ್ಯವಾಗಿ ದೇಹದ ಹಾಮೋನ್​ನಲ್ಲಿ ಉಂಟಾಗುವ ಏರುಪೇರಿನಿಂದ ಮೊಡವೆ ಕಾಣಿಸಿಕೊಳ್ಳುತ್ತದೆ. ಪಪ್ಪಾಯಿ ಬೀಜಗಳು ಮತ್ತು ಎಲೆಗಳನ್ನು ಅರೆದು ಫೇಸ್​ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿ ಹತ್ತು ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.

# ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

# ಪಪ್ಪಾಯಿ ಆರು ಒಣಗಿದ ಬೀಜಗಳನ್ನು ಜಜ್ಜಿ ನೀರು ಅಥವಾ ನಿಂಬೆರಸದೊಂದಿಗೆ ಬೆರೆಸಿ ಒಂದೆರಡು ತಿಂಗಳ ಕಾಲ ನಿಯತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಈ ಬೀಜಗಳಲ್ಲಿ ಯಕೃತ್ತಿನ ಸಿರೋಸಿಸ್ ಗುಣಪಡಿಸುವ ಪೋಷಕಾಂಶಗಳಿವೆ.

# 3-4 ಪಪ್ಪಾಯಿ ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಕುಡಿದರೆ ನಿಧಾನವಾಗಿ ಮೂತ್ರಪಿಂಡದ ಸಮಸ್ಯೆಯಿಂದ ಪಾರಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net