

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ನೀವು ಪ್ರತಿದಿನ ಒಂದು ಮೊಟ್ಟೆ ತಿನ್ನಲು ಪ್ರಾರಂಭಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯುಬಹುದು ಎಂಬುದು ತಿಳಿಯೋಣ.
ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟಿನ್ ಇದ್ದು, ಇದು ಬಲವಾದ ಮತ್ತು ಆರೋಗ್ಯಕಾರ ಸ್ನಾಯುಗಳ ರೂಪಿಸಲು ಮೊಟ್ಟೆ ಸಹಕಾರಿಯಾಗಲಿದೆ. ಒಂದು ಮೊಟ್ಟೆಯಲ್ಲಿ ಸುಮಾರು 6-7 ಗ್ರಾಂ ಪ್ರೋಟಿನ್ ಇರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೆ ಅಂಗಾಂಶ ದುರಸ್ತಿಯೂ ಸಹಾಯ ಮಾಡುತ್ತದೆ. ಜಿಮ್ಗೆ ಹೋಗುವವರಿಗೆ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವರು ತಮ್ಮ ದೈನಂದಿನ ಊಟದಲ್ಲಿ ಮೊಟ್ಟೆ ಸೇರಿಸಿಕೊಳ್ಳುವುದು ಉತ್ತಮ.
1. ಮೂಳೆಗಳನ್ನು ಬಲಪಡಿಸುತ್ತದೆ
ಮೊಟ್ಟೆಗಳಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ತನ್ಮೂಲಕ ಆಸ್ಟಿಯೊಪೊರೋಸಿಸ್ ಮತ್ತು ಕೀಲು ನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಟ್ಟೆ ತಿನ್ನುವುದು ಮಕ್ಕಳು ಮತ್ತು ವೃದ್ಧರಿಗೆ ವಿಶೇಷವಾಗಿ ಪ್ರಯೋಜನಕಾರಿ.
2.ಮೆದುಳಿಗೆ ಒಳ್ಳೆಯದು
ಮೊಟ್ಟೆಯಲ್ಲಿ ಕೊಲಿನ್ ಎಂಬ ಅಂಶ ಇದೆ. ಮೆದುಳಿನ ಬೆಳವಣೆ ಹಾಗೂ ಕಾರ್ಯನಿರ್ವಹಣೆಗೆ ಇದು ಅವಶ್ಯಕ. ಇದು ಸ್ಮರಣಶಕ್ತಿಯನ್ನು ಚುರುಕುಗೊಳಿಸುತ್ತದೆ. ನರಗಳ ಆರೋಗ್ಯವನ್ನು ಸುಧಾರಿಸಲು ಸಹಾಕಾರಿಯಾಗಿದೆ. ಅದರಲ್ಲೂ ಗರ್ಭಿಣಿಯರೂ ಮೊಟ್ಟೆ ತಿನ್ನವುದು ಕೂಡ ಪ್ರಯೋಜಕಾರಿ. ಏಕೆಂದರೆ ಇದು ಭ್ರೂಣದ ಮಾಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
3.ದೃಷ್ಟಿ ಸುಧಾರಿಸುತ್ತೆ
ಮೊಟ್ಟೆಯ ಹಳದಿ ಲೋಳೆಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಉತ್ಕಷ್ಟ ನಿರೋಧಕಗಳು ಇರುತ್ತದೆ. ಇದು ಕಣ್ಣುಗಳಲ್ಲಿರುವ ರೇಟಿನಾವನ್ನು ಆರೋಗ್ಯಕರವಾಗಿಸುತ್ತದೆ. ಇದು ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ತಡೆಯುತ್ತದೆ. ನಿಯಮಿತವಾಗಿ ಮೊಟ್ಟೆಗಳನ್ನು ತಿನ್ನುವುದರಿಂದ ದೃಷ್ಟಿ ರಕ್ಷಿಸಲು ಮತ್ತು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4.ತೂಕ ನಿಯಂತ್ರಣಕ್ಕೆ ಸಹಾಯ
ಮೊಟ್ಟೆಗಳಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಕ್ಯಾಲೋರಿಗಳು ಕಡಿಮೆ. ಇವು ಹೊಟ್ಟೆಯನ್ನು ಹೆಚ್ಚು ಸಮಯದವರೆಗೆ ತುಂಬಿರುವಂತೆ ನೋಡಿಕೊಳ್ಳುತ್ತವೆ. ಬೆಳಗಿನ ಉಪಾಹಾರಕ್ಕೆ ಮೊಟ್ಟೆಗಳನ್ನು ತಿನ್ನುವುದರಿಂದ ದಿನವಿಡೀ ಚೈತನ್ಯಶೀಲರಾಗಿರುತ್ತೀರಿ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತೀರಿ.(ಏಜೆನ್ಸೀಸ್)