ಫ್ರೀಜರನ್ನು ಐಸ್​ ಮುಕ್ತವಾಗಿಸುವುದು ಹೇಗೆಂದು ಆಲೋಚಿಸುತ್ತಿದ್ದೀರಾ?; ನಿಮಗಾಗಿಯೇ ಈ ಸಿಂಪಲ್​ ಟಿಪ್ಸ್​​

Untitled-design-2024-09-17T195832.927
Published on

ನಮ್ಮ ಜೀವನಶೈಲಿ ಬದಲಾದಂತೆ ನಾವು ಬಳಸುವ ವಸ್ತುಗಳ ಸಂಖ್ಯೆಯು ಹೆಚ್ಚುತ್ತಲೆ ಇದೆ. ವ್ಯಾಕ್ಯೂಮ್ ಕ್ಲೀನರ್, ವಾಷಿಂಗ್​ಮೆಷಿನ್, ರೆಫ್ರಿಜಿರೇಟರ್​ ಹೀಗೆ ವಿದ್ಯುತ್​ ಉಪಕರಣಗಳನ್ನು ಬಳಸುವುದು ಸಹಜವಾಗಿದೆ. ರೆಫ್ರಿಜಿರೇಟರ್​ ವಿಷಯಕ್ಕೆ ಬಂದರೆ ಆಗಾಗ್ಗೆ ಫ್ರೀಜರ್​​​ನಲ್ಲಿ ಬಹಳಷ್ಟು ಐಸ್ ಸಂಗ್ರಹವಾಗುವುದನ್ನು ನೋಡುತ್ತಿರುತ್ತೇವೆ. ಅದನ್ನು ಸ್ವಚ್ಛಗೊಳಿಸುವುದು ಅಥವಾ ಐಸ್​ ಮುಕ್ತವಾಗಿಸುವುದು ಹೇಗೆ ಎಂಬುದೆ ದೊಡ್ಡ ಸವಾಲಾಗಿರುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ ಕೊನೆಗೆ ಡಿಫ್ರಾಸ್ಟಿಂಗ್ ಮಾಡುವ ಮೂಲಕ ಐಸ್​​ ಕರಗುವಂತೆ ಮಾಡುತ್ತೇವೆ.

ಡಿಫ್ರಾಸ್ಟಿಂಗ್ ಮಾಡುವುದರಿಂದ ಅನಾನುಕೂಲವೆ ಹೆಚ್ಚು. ಫ್ರೀಜರ್​​ ಅನ್ನು ಡಿಫ್ರಾಸ್ಟ್ ಮಾಡಿದಾಗ ಫ್ರಿಜ್ನ ತಂಪಾಗುವಿಕೆಯು ನಿಲ್ಲುತ್ತದೆ. ಆ ಸಮಯದಲ್ಲಿ ರೆಫ್ರಿಜರೇಟರ್​​​ನಲ್ಲಿ ಇರಿಸಲಾದ ಹಣ್ಣುಗಳು, ತರಕಾರಿಗಳು ಮತ್ತು ಆಹಾರ ಪದಾರ್ಥಗಳು ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಐಸ್ ಕರಗಿಸಲು ಮನೆಯಲ್ಲಿ ಮಾಡಬಹುದಾದ ಟ್ರಿಕ್ಸ್​​ ಬಗ್ಗೆ ನಿಮಗೆ ಇಲ್ಲಿ ತಿಳಿಸಲಾಗಿದೆ.

ಫ್ರೀಜರ್​​ ನಲ್ಲಿ ಹೆಚ್ಚು ಮಂಜುಗಡ್ಡೆ ಶೇಖರಣೆಗೊಂಡಾಗ ಅದನ್ನು ಸುಲಭವಾಗಿ ಕರಗಿಸಲು ಬಿಸಿ ನೀರನ್ನು ಸಣ್ಣ ಪಾತ್ರೆಯಲ್ಲಿ ಕುದಿಸಬೇಕು. ಬಳಿಕ ಆ ಪಾತ್ರೆಯನ್ನು ಬಿಸಿನೀರಿನ ಜತೆಗೆ ಫ್ರೀಜರ್ ಒಳಗೆ ಇಡಬಹುದು. ಕೆಲವೆ ಸಮಯದಲ್ಲಿ ಮಂಜುಗೆಡ್ಡೆ ಕರಗಲು ಪ್ರಾರಂಭಿಸುತ್ತದೆ. ಅಷ್ಟು ಸಣ್ಣ ಪಾತ್ರೆ ನಿಮ್ಮ ಬಳಿ ಇಲ್ಲವಾದರೆ, ಸಿಂಪಲ್​​ ಕಾಫಿ ಮಗ್​​ನಲ್ಲಿ ಬಿಸಿ ನೀರನ್ನು ತುಂಬಿಸಿ ಅದನ್ನು ನಿಧಾನವಾಗಿ ಫ್ರೀಜರ್‌ನಲ್ಲಿ ಇರಿಸಿ. ಈ ಟ್ರಿಕ್ ಸಹಾಯದಿಂದ ಫ್ರೀಜರ್​​ನಲ್ಲಿ ಸಂಗ್ರಹವಾಗಿರುವ ಹಿಮಗೆಡ್ಡೆ ಸುಲಭವಾಗಿ ಕರಗುತ್ತದೆ.

ಅನೇಕ ಬಾರಿ ರೆಫ್ರಿಜರೇಟರ್​​​ನಲ್ಲಿ ಕಟ್ಟುವ ಐಸ್​ಗೆಡ್ಡೆಯನ್ನು ಬಿಸಿನೀರಿನ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಆದ್ದರಿಂದ ಸ್ವಲ್ಪ ಹೆಚ್ಚು ಬಿಸಿ ಇರುವ ನೀರನ್ನು ಸ್ಪೂನ್​ ಮೂಲಕ ಐಸ್​ ಮೇಲೆ ಹಾಕುವ ಮೂಲಕ ಸ್ವಚ್ಛಗೊಳಿಸಬಹುದು. ಬಿಸಿ ನೀರು ಬಳಸುವುದನ್ನು ಹೊರತು ಪಡಿಸಿ ಇನ್ನೊಂದು ಮಾರ್ಗವೂ ಇದೆ. ಐಸ್ ಕರಗಿಸಲು ನೀವು ಹೇರ್ ಡ್ರೈಯರ್​​ ಅನ್ನು ಬಳಸಬಹುದು.

ಹೇರ್ ಡ್ರೈಯರ್ ಬಳಸುವುದರಿಂದ ಕಡಿಮೆ ಸಮಯದಲ್ಲಿ ಫ್ರೀಜರ್​​​ನಲ್ಲಿ ಐಸ್ ಅನ್ನು ಕರಗಿಸಬಹುದು. ಇದು ಸುಲಭವಲ್ಲ ಆದರೆ ಬಹಳ ಉಪಯುಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net