ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಮಾತ್ರವಲ್ಲ ಮನಸ್ಸಿನಲ್ಲಿಯೂ ದೊಡ್ಡ ಬದಲಾವಣೆಯಾಗುತ್ತಾ?; ಅಧ್ಯಯನವೊಂದು ತಿಳಿಸಿದಿಷ್ಟು..

Untitled-design-2024-09-18T205943.810
Published on

ಹೆಣ್ಣು ಮಕ್ಕಳಿಗೆ ಮಗುವಿನಿಂದ ತಾಯಿಯಾಗುವವರೆಗಿನ ಪಯಣ ಸುಖಕರ ಮಾತ್ರವಲ್ಲ ಕಷ್ಟಗಳಿಂದ ಕೂಡಿರುತ್ತದೆ. ತಾಯ್ತನದ ಸಮಯದಲ್ಲಿ ಮಹಿಳೆಯು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ. ಈ ಅವಧಿಯಲ್ಲಿ ಅವರ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಬದಲಾವಣೆಗಳಾಗುತ್ತವೆ.

ಈ ಬಗ್ಗೆ ಅಧ್ಯಯನವೊಂದರಲ್ಲಿ, ಗರ್ಭಿಣಿ ಮಹಿಳೆಯರ ಮೆದುಳಿನ 80 ಪ್ರತಿಶತಕ್ಕಿಂತ ಹೆಚ್ಚು ಬೂದು ದ್ರವ್ಯದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಈ ಬೂದು ದ್ರವ್ಯವು 'ನ್ಯೂರಲ್ ಸರ್ಕ್ಯೂಟ್‌ಗಳು' ಎಂದು ಕರೆಯಲ್ಪಡುವ ಅಂತರ್ಸಂಪರ್ಕಿತ ನರ ಕೋಶಗಳ ನೆಟ್‌ವರ್ಕ್‌ಗಳ ಪರಸ್ಪರ ಸಂಪರ್ಕವನ್ನು ಪ್ರತಿನಿಧಿಸುತ್ತದೆ. ಇದು ಮೆದುಳನ್ನು ಜೀವನದ ಹೊಸ ಹಂತಕ್ಕೆ ಸಿದ್ಧಪಡಿಸುತ್ತದೆ ಎಂಬುದು ತಿಳಿದುಬಂದಿದೆ.

ಈ ಅಧ್ಯಯನವನ್ನು ನೇಚರ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಮೊದಲ ಬಾರಿಗೆ ಗರ್ಭಾವಸ್ಥೆಯಲ್ಲಿ ಮಹಿಳೆಯ ಮೆದುಳಿನಲ್ಲಿ ಸಂಭವಿಸುವ ಬದಲಾವಣೆಗಳನ್ನು ವಿವರವಾಗಿ ತೋರಿಸಲಾಗಿದೆ. ಅಧ್ಯಯನದಲ್ಲಿ ತೊಡಗಿರುವ ಮಹಿಳೆಯರ ಮೆದುಳನ್ನು 26 ಬಾರಿ ಸ್ಕ್ಯಾನ್ ಮಾಡಲಾಯಿಗಿದೆ. ಗರ್ಭಧಾರಣೆಯ ಮೂರು ವಾರಗಳ ಮೊದಲು, ಒಂಬತ್ತು ತಿಂಗಳ ಗರ್ಭಧಾರಣೆ ಮತ್ತು ನಂತರ ಮಗು ಜನಿಸಿದ ಎರಡು ವರ್ಷಗಳ ನಂತರ ಹೀಗೆ ನೂರಾರು ಮಹಿಳೆಯರ ಮೇಲೆ ಈ ಸಂಶೋಧನೆಯನ್ನು ಪುನರಾವರ್ತಿಸುವ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.

ಗರ್ಭಿಣಿ ಮಹಿಳೆಯ ಮೆದುಳನ್ನು ಇಷ್ಟು ವಿವರವಾಗಿ ಗಮನಿಸಿದ ಮೊದಲ ಅಧ್ಯಯನ ಇದಾಗಿದೆ ಎಂದು ಹೇಳಲಾಗಿದೆ. ಹಿಂದಿನ ಅಧ್ಯಯನಗಳಲ್ಲಿ ಗರ್ಭಾವಸ್ಥೆಯ ಮೊದಲು ಮತ್ತು ನಂತರ ಮೆದುಳಿನ ಸ್ನ್ಯಾಪ್‌ಶಾಟ್‌ಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಅಧ್ಯಯನಗಳು ಗರ್ಭಧಾರಣೆಯ ಮೊದಲು ಮತ್ತು ನಂತರ ಮೆದುಳಿನ ಚಿತ್ರಗಳನ್ನು ತೆಗೆದುಕೊಂಡಿವೆ. ಆದರೆ ಈ ಪ್ರಮುಖ ಬದಲಾವಣೆಯ ಸಮಯದಲ್ಲಿ ನಾವು ಮೆದುಳನ್ನು ನೋಡಿಲ್ಲ ಎಂದು ಅಧ್ಯಯನದ ಸಹ-ಲೇಖಕ ಜಾಕೋಬ್ಸ್ ಹೇಳುತ್ತಾರೆ.

ಗ್ರೇಮ್ಯಾಟರ್ ನಷ್ಟವು ಕೆಟ್ಟ ವಿಷಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಗರ್ಭಧಾರಣೆ ಮತ್ತು ಹೆರಿಗೆಯ ನಂತರ ಮಹಿಳೆಯರಲ್ಲಿ ಮೆದುಳಿನಲ್ಲಿ ಆಗುವ ವಿಶಾಲವಾದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇದು ಉತ್ತಮ ಮೊದಲ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ಕ್ರೆಸ್ಟಿಲ್ ಎಂಬ ಮಹಿಳೆಯೊಂದಿಗೆ ಈ ಅಧ್ಯಯನವನ್ನು ಮಾಡಲಾಗಿದೆ. ಆಕೆಯ ಮೇಲಿನ ಈ ಅಧ್ಯಯನವು ಅವಳು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಾರಂಭವಾಯಿತು.

ಮಾಹಿತಿಯ ಪ್ರಕಾರ, ಕ್ರಿಸ್ಟಿನ್ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದಾಳೆ. ಗರ್ಭಾವಸ್ಥೆಯಲ್ಲಿ ಮತ್ತು ಅವರ ಮಗುವಿನ ಜನನದ ನಂತರ ಎರಡು ವರ್ಷಗಳವರೆಗೆ ಸಂಶೋಧಕರು ಅವರ ಮೆದುಳಿನಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸಿವೆ ಎಂಬುದನ್ನು ನೋಡಲು ಅವರ ಮೆದುಳಿನ ಎಂಆರ್​ಐ ಸ್ಕ್ಯಾನ್​​ಗಳನ್ನು ತೆಗೆದುಕೊಂಡರು. ಭವಿಷ್ಯದಲ್ಲಿ ಪ್ರಸವಾನಂತರದ ಖಿನ್ನತೆಯಂತಹ ಕಾಯಿಲೆಗಳ ಬಗ್ಗೆ ಈ ಸಂಶೋಧನೆಯು ಸುಳಿವುಗಳನ್ನು ನೀಡುತ್ತದೆ ಎಂದು ಸಂಶೋಧಕರು ಭಾವಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net