ಈ ಸಮಯದಲ್ಲಿ ನೀವು ನಿಂಬು ಜ್ಯೂಸ್​​ ಕುಡಿದರೆ ಅಪಾಯವಾಗಬಹುದು..ಎಚ್ಚರ! Lemon Water

Lemon Water
Published on

Lemon Water: ಬೇಸಿಗೆಯ ಬಿಸಿಲಿಗೆ ಬೆವೆತು ದೇಹವನ್ನು ತಂಪಾಗಿಸಲು ಮತ್ತು ದಾಹವನ್ನು ನೀಗಿಸಲು ನಾವು ಸಾಮಾನ್ಯವಾಗಿ ವಿವಿಧ ಬಗೆಯ ಪಾನೀಯಗಳನ್ನು ಸೇವೆಸುತ್ತೇವೆ. ಅದರಲ್ಲಿಯೂ ಮನೆಯಲ್ಲಿಯೇ ಸಿಗುವಂತಹ ಮಜ್ಜಿಗೆ, ಎಳನೀರು, ನಿಂಬು ಜ್ಯೂಸ್​​​ಗಳನ್ನು ಕುಡಿಯುವುದೇ ಹೆಚ್ಚು. ಹುಳಿ, ಉಪ್ಪು, ಸಿಹಿ ಮಿಶ್ರಿತ ನಿಂಬೆ ಪಾನಕವು ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಮನಸ್ಸಿಗೆ ವಿಶ್ರಾಂತಿಯನ್ನು ಸಹ ನೀಡುತ್ತದೆ. ಆದರೆ ನೀವು ತಪ್ಪು ಸಮಯದಲ್ಲಿ ನಿಂಬೆ ಪಾನಕವನ್ನು ಕುಡಿದರೆ ನಿಮ್ಮ ದೇಹಕ್ಕೆ ಏನೆಲ್ಲಾ ತೊಂದರೆಗಳಾಗುತ್ತವೆ ಗೊತ್ತಾ? ಹಾಗಾದ್ರೆ ಬೇಸಿಗೆಯಲ್ಲಿ ನಿಂಬು ಜ್ಯೂಸ್​ನ್ನು ಕುಡಿಯಲು ಸರಿಯಾದ ಸಮಯ ಯಾವುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ನಿಂಬೆಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಸಹ ಕಂಡುಬರುತ್ತವೆ, ಇದು ದೇಹವನ್ನು ಚೈತನ್ಯಪೂರ್ಣ ಮತ್ತು ಆರೋಗ್ಯಕರವಾಗಿರಿಸುತ್ತದೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ನೀವು ಸುಸ್ತಾದಾಗ ಮೊದಲು ನಿಂಬೆ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ.

ನಿಂಬು ಜ್ಯೂಸ್​​ ಕುಡಿಯಲು ಸರಿಯಾದ ಸಮಯ

ತೂಕ ಇಳಿಕೆ ಮಾಡಲು ನೀವು ಬಯಸಿದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸಬೇಕು. ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸುತ್ತದೆ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ತೂಕ ಬೇಗನೆ ತೂಕ ಇಳಿಯಲು ಸಹಾಯವಾಗುತ್ತದೆ.

ಊಟದ ನಂತರ

ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿರುವ ಜನರು ಊಟದ ನಂತರ ನಿಂಬೆ ನೀರನ್ನು ಕುಡಿಯಬೇಕು. ಊಟದ 30 ನಿಮಿಷಗಳ ನಂತರ ನೀವು ಒಂದು ಲೋಟ ನಿಂಬೆ ನೀರನ್ನು ಕುಡಿಯಬಹುದು.

ವ್ಯಾಯಾಮದ ನಂತರ

ವ್ಯಾಯಾಮದ ನಂತರ ದೇಹದಲ್ಲಿನ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಮಟ್ಟವನ್ನು ಸಮತೋಲನಗೊಳಿಸಲು ನೀವು ನಿಂಬೆ ನೀರನ್ನು ಕುಡಿಯಬಹುದು. ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಯಾವಾಗ ಕುಡಿಯಬಾರದು?

ರಾತ್ರಿ ವೇಳೆ ನಿಂಬೆ ಪಾನಕ ಕುಡಿದರೆ ಜೀರ್ಣಕ್ರಿಯೆ ಹಾಳಾಗಬಹುದು. ಇದು ಆಮ್ಲೀಯತೆ, ಅಲರ್ಜಿ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಹೀಗಾಗಿ ನೀವು ಬೇಸಿಗೆಯಲ್ಲಿ ನಿಂಬೆ ನೀರು ಅಥವ ಜ್ಯೂಸ್​​ನ್ನು ಕುಡಿಯುವ ಮೊದಲು ಎಚ್ಚರದಿಂದಿರುವುದು ಸೂಕ್ತ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net