ಖಾಲಿ ಹೊಟ್ಟೆಯಲ್ಲಿ ಒಂದು ಕಪ್​​ ತುಪ್ಪದ ಕಾಫಿ ಕುಡಿದ್ರೆ ತೂಕ ಇಳಿಯೋದು ಗ್ಯಾರಂಟಿ! Ghee Coffee

Ghee Coffee
Published on

Ghee Coffee  : ಮಳೆಗಾಲದಲ್ಲಿ ಬೆಚ್ಚಗೆ ಹಾಲು, ಗ್ರೀನ್​ ಟೀ, ಟೀ, ಕಾಫಿ ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕಾಫಿ ಎಂದರೆ ಹಲವರು ಇಷ್ಟ ಪಟ್ಟು ಸೇವಿಸುತ್ತಾರೆ. ಕೆಲವರು ನಾರ್ಮಲ್​ ಕಾಫಿ ಬೇಡ ಕೊಂಚ ತುಪ್ಪವನ್ನು ಹಾಕಿ ತುಪ್ಪದ ಕಾಫಿ ಮಾಡಿಕೊಂಡು ಸೇವಿಸುತ್ತಾರೆ. ತುಪ್ಪದ ಕಾಫಿ ಮಾಡುವುದು ಹೇಗೆ? ಆರೋಗ್ಯಕ್ಕೆ ಇರುವ ಪ್ರಯೋಜನ ಏನು? ಅಡ್ಡಪರಿಣಾಮಗಳು ಏನು ಎನ್ನುವ ಪ್ರಶ್ನೆ ನಿಮಗೆ ಇದ್ದರೆ.. ನಾವು ಇಂದು ಕೆಲವು ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ.

ತುಪ್ಪದ ಕಾಫಿ ಮಾಡುವ ವಿಧಾನ:

ತುಪ್ಪ ಕಾಫಿ ಮಾಡಲು, ನಿಮ್ಮ ನೆಚ್ಚಿನ ಕಾಫಿ ಪುಡಿಯನ್ನು ಬಿಸಿ ನೀರಿನಲ್ಲಿ ಕುದಿಸಿ, ನಂತರ ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ರುಚಿಗೆ ಸ್ವಲ್ಪ ಸಕ್ಕರೆ ಅಥವಾ ದಾಲ್ಚಿನ್ನಿ ಪುಡಿಯನ್ನು ಸೇರಿಸಿಯೂ ನೀವು ಇದನ್ನು ಕುಡಿಯಬಹುದು.

ತುಪ್ಪದ ಕಾಫಿ ದೇಹಕ್ಕೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತದೆ, ಇದರಿಂದಾಗಿ ನಿಮ್ಮ ಆಯಾಸ ಕಡಿಮೆಯಾಗುತ್ತದೆ.

ತುಪ್ಪದ ಕಾಫಿ ಪ್ರಯೋಜನ :

ಹಸಿವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೀಗಾಗಿ, ಪದೇ ಪದೇ ತಿನ್ನುವ ಬಯಕೆ ಇರುವುದಿಲ್ಲ.

ತುಪ್ಪದಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಇದು ದೇಹದ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಕೊಬ್ಬನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುವವರಿಗೆ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಇರುವವರಿಗೆ ಈ ಕಾಫಿ ಹಾನಿಕಾರಕವಾಗಬಹುದು.

ತುಪ್ಪದ ಕಾಫಿಯ ಅಡ್ಡಪರಿಣಾಮ:

ಬೆಣ್ಣೆಯಲ್ಲಿ ಬಹಳಷ್ಟು ಕ್ಯಾಲೋರಿಗಳಿವೆ. ಸಮತೋಲನದಲ್ಲಿ ಇಲ್ಲದಿದ್ದರೆ, ಅದು ತೂಕ ಹೆಚ್ಚಾಗಲು ಕಾರಣವಾಗಬಹುದು. ಕೆಲವರಿಗೆ ಈ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆಮ್ಲೀಯತೆ ಅಥವಾ ಗ್ಯಾಸ್ ಉಂಟಾಗಬಹುದು.

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ಹಸಿವನ್ನು ನಿಯಂತ್ರಣದಲ್ಲಿಡುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಕಾಫಿ ಕುಡಿದಾಗ, ಅದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಉಪವಾಸದ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಇದು ದೇಹವು ಈಗಾಗಲೇ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯಾಗಿ ಬಳಸಲು ಕಾರಣವಾಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net