ಕಡಿಮೆ ಖರ್ಚಿನಲ್ಲಿ ಮಕ್ಕಳ ಫೇವರಿಟ್ ಡೋನಟ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್..Donut Recipe

Donut Recipe ಸಾಂದರ್ಭಿಕ ಚಿತ್ರ
Donut Recipe ಸಾಂದರ್ಭಿಕ ಚಿತ್ರ
Published on
Donut Recipeಇತ್ತೀಚಿನ ದಿನಗಳಲ್ಲಿ ಸಂಜೆಯ ಕಾಫಿ ಬ್ರೇಕ್ ಇರಲಿ ಅಥವಾ ಬರ್ತ್‌ಡೇ ಪಾರ್ಟಿ ಇರಲಿ, 'ಡೋನಟ್ಸ್' ಇಲ್ಲದಿದ್ದರೆ ಪಾರ್ಟಿಯೇ ಅಪೂರ್ಣ ಎನ್ನುವಂತಾಗಿದೆ. ಈ ವಿಶಿಷ್ಟ ಸಿಹಿ ತಿಂಡಿಯ ಹಿಂದೆ 150 ವರ್ಷಗಳಿಗೂ ಹೆಚ್ಚಿನ ರೋಚಕ ಇತಿಹಾಸವಿದೆ ಎಂಬುದು ನಿಮಗೆ ಗೊತ್ತೇ? ಕೇವಲ ವೆಸ್ಟರ್ನ್ ದೇಶಗಳಿಗೆ ಸೀಮಿತವಾಗಿದ್ದ ಈ ಸಾಫ್ಟ್ ಸ್ವೀಟ್ ಇಂದು ಗಲ್ಲಿ ಗಲ್ಲಿಯ ಬೇಕರಿಗಳಲ್ಲೂ ರಾರಾಜಿಸುತ್ತಿದೆ. ಹಾಗಿದ್ದರೆ ಇನ್ಯಾಕೆ ತಡ ಈಗ್ಲೆ ನಿಮ್ಮ ಮನೆಯಲ್ಲಿ ಮಾಡಿ ಬೇಕರಿ ಶೈಲಿಯ ಡೋನಟ್..

ಬೇಕಾಗುವ ಪದಾರ್ಥಗಳು

* 2 ಕಪ್ ಮೈದಾ ಹಿಟ್ಟು
* 3 ರಿಂದ 4 ಚಮಚ ಸಕ್ಕರೆ ಪುಡಿ 
 * 1 ಚಮಚ ಇನ್‌ಸ್ಟಂಟ್ ಡ್ರೈ ಈಸ್ಟ್ 
* 1/2 ಕಪ್​ ಉಗುರು ಬೆಚ್ಚಗಿನ ಹಾಲು 
* 2 ಚಮಚ ಬೆಣ್ಣೆ 
* ಒಂದು ಚಿಟಿಕೆ ಉಪ್ಪು 
* ಕರಿಯಲು ಎಣ್ಣೆ 
* ಕರಗಿಸಿದ ಚಾಕೊಲೇಟ್​ಗಳು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ಹಾಲು, 1 ಚಮಚ ಸಕ್ಕರೆ ಮತ್ತು 1 ಚಮಚ ಈಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5-10 ನಿಮಿಷ ಮುಚ್ಚಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಮೈದಾ ಹಿಟ್ಟು, ಉಳಿದ ಸಕ್ಕರೆ ಪುಡಿ, ಒಂದು ಚಿಟಿಕೆ ಉಪ್ಪು ಮತ್ತು ಕರಗಿಸಿದ ಬೆಣ್ಣೆ ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ತೀರಾ ಗಟ್ಟಿಯಾಗಿರಬಾರದು, ಮೃದುವಾಗಿರಬೇಕು. ಅಗತ್ಯವಿದ್ದರೆ ಸ್ವಲ್ಪ ಉಗುರುಬೆಚ್ಚಗಿನ ನೀರು ಅಥವಾ ಹಾಲು ಬಳಸಿ 8-10 ನಿಮಿಷ ಚೆನ್ನಾಗಿ ನಾದಿಕೊಳ್ಳಿ.
ಇದಾದ ಬಳಿಕ ಸಿದ್ಧವಾದ ಹಿಟ್ಟಿನ ಮುದ್ದೆಗೆ ಸ್ವಲ್ಪ ಎಣ್ಣೆ ಸವರಿ, ಒದ್ದೆ ಬಟ್ಟೆ ಮುಚ್ಚಿ 1 ರಿಂದ 2 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಇಡಿ. 
ಈಗ ಹಿಟ್ಟನ್ನು ಮತ್ತೊಮ್ಮೆ ಹಗುರವಾಗಿ ನಾದಿ, ಅರ್ಧ ಇಂಚು ದಪ್ಪಕ್ಕೆ ಚಪಾತಿಯಂತೆ ಲಟ್ಟಿಸಿಕೊಳ್ಳಿ. ದೋನಟ್ ಕಟ್ಟರ್ ಅಥವಾ ಮನೆಯಲ್ಲಿರುವ ಯಾವುದಾದರೂ ರೌಂಡ್ ಬಾಟಲ್ ಮುಚ್ಚಳ ಬಳಸಿ ವೃತ್ತಾಕಾರವಾಗಿ ಕತ್ತರಿಸಿ. ಅದರ ಮಧ್ಯದಲ್ಲಿ ಮತ್ತೊಂದು ಸಣ್ಣ ಮುಚ್ಚಳದಿಂದ ರಂಧ್ರ ಮಾಡಿ ಆಕಾರಕ್ಕೆ ತಂದು ಅವುಗಳನ್ನು 15-20 ನಿಮಿಷ ಮುಚ್ಚಿಡಿ.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಿಸಿ. ನಂತರ ಎಣ್ಣೆ ಬಿಸಿಯಾದಾಗ ಡೋನಟ್​ಗಳನ್ನು ಹಾಕಿ ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೂ ಕಡಿಮೆ ಉರಿಯಲ್ಲಿ ಕರಿದು ತೆಗೆಯಿರಿ. 
ಕರಿದ ದೋನಟ್‌ಗಳು ಸ್ವಲ್ಪ ತಣ್ಣಗಾದ ಮೇಲೆ, ಅವುಗಳನ್ನು ಕರಗಿಸಿದ ಚಾಕೊಲೇಟ್‌ನಲ್ಲಿ ಅದ್ದಿ  ಮೇಲಿಂದ ಕಲರ್‌ಫುಲ್ ಸ್ಪ್ರಿಂಕ್ಲರ್ಸ್ ಉದುರಿಸಿದರೆ ಆಕರ್ಷಕವಾದ, ರುಚಿಕರವಾದ ದೋನಟ್ ಸವಿಯಲು ಸಿದ್ಧ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net