ಹಾಗಲಕಾಯಿ ತಿಂದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ: ಅಮೃತದಂತಹ ತರಕಾರಿ ಕೂಡ ದೇಹದಲ್ಲಿ ವಿಷವಾಗಬಹುದು ಎಚ್ಚರ! Bitter Melon

Bitter Melon ಸಾಂದರ್ಭಿಕ ಚಿತ್ರ
Bitter Melon ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಾಗಲಕಾಯಿ ಎಂದ ತಕ್ಷಣ ಹೆಚ್ಚಿನವರು ಮುಖ ಸಿಂಡರಿಸುವುದು ಸಾಮಾನ್ಯ
  • ಕಹಿ ರುಚಿಯಿಂದಾಗಿ ಇದನ್ನು ಆಹಾರ ಕ್ರಮದಿಂದ ದೂರ ಇಡುವವರೇ ಹೆಚ್ಚು
  • ಔಷಧಿ ಯಾವಾಗಲೂ ಕಹಿಯಾಗಿಯೇ ಇರುತ್ತದೆ ಎಂಬ ಗಾದೆ ಮಾತಿದೆ
  • ಹಲವಾರು ಆರೋಗ್ಯ ಸಮಸ್ಯೆಗೆ ಹಾಗಲಕಾಯಿ ಸರಳ ಹಾಗೂ ನೈಸರ್ಗಿಕ ಔಷಧ
Bitter Melon: ಹಾಗಲಕಾಯಿ ಎಂದ ತಕ್ಷಣ ಹೆಚ್ಚಿನವರು ಮುಖ ಸಿಂಡರಿಸುವುದು ಸಾಮಾನ್ಯ. ಅದರ ತೀವ್ರವಾದ ಕಹಿ ರುಚಿಯಿಂದಾಗಿ ಇದನ್ನು ಆಹಾರ ಕ್ರಮದಿಂದ ದೂರ ಇಡುವವರೇ ಹೆಚ್ಚು. ಆದರೆ, ಔಷಧಿ ಯಾವಾಗಲೂ ಕಹಿಯಾಗಿಯೇ ಇರುತ್ತದೆ ಎಂಬ ಗಾದೆ ಮಾತಿನಂತೆ ಹಾಗಲಕಾಯಿ ಕಹಿ ರುಚಿಯನ್ನು ಹೊಂದಿರಬಹುದು. ಆದರೆ, ಅದರ ಪ್ರಯೋಜನಗಳು ಹಲವಾರು. ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಕಾಡುತ್ತಿರುವ ಹಲವಾರು ಆರೋಗ್ಯ ಸಮಸ್ಯೆಗೆ ಹಾಗಲಕಾಯಿ ಅತ್ಯಂತ ಸರಳ ಹಾಗೂ ನೈಸರ್ಗಿಕ ಔಷಧವಾಗಿದೆ.
ಇದರಲ್ಲಿ ವಿಟಮಿನ್ ಸಿ, ಕಬ್ಬಿಣ, ಸತು, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಇದನ್ನು ಆದಷ್ಟು ಮಧುಮೇಹಿಗಳು ಸೇವಿಸುವುದನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ತರಕಾರಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.
ಈ ಪ್ರಯೋಜನಗಳ ಹೊರತಾಗಿಯೂ, ಹಾಗಲಕಾಯಿಯೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ಹಾನಿಕಾರಕ ಎಂದು ಹೇಳುತ್ತಾರೆ. ಅವುಗಳಿಂದ ಆದಷ್ಟು ಜಾಗರೂಕರಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಿದ್ದರೆ, ಹಾಗಲಕಾಯಿಯೊಂದಿಗೆ ಯಾವ ಆಹಾರ ಸೇವಿಸುವುದು ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದು ನೋಡೋಣ ಬನ್ನಿ....

ಹಾಗಲಕಾಯಿ ಜೊತೆ ಹಾಲು

ಹಾಲನ್ನು ಯಾವಾಗಲೂ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಹಾಲು ಕುಡಿದ ನಂತರ ಹಾಗಲಕಾಯಿ ರಸ, ಪಲ್ಯ ಸೇವಿಸುವುದರಿಂದ ದೇಹಕ್ಕೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಮಲಬದ್ಧತೆ, ಎದೆಯುರಿ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಮಾವಿನ ಹಣ್ಣುಗಳ ಜೊತೆ ಹಾಗಲಕಾಯಿ

ಬೇಸಿಗೆಯಲ್ಲಿ ಹೆಚ್ಚಿನ ಜನರು ಮಾವಿನ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಮಾವಿನ ಹಣ್ಣಿನೊಂದಿಗೆ ಹಾಗಲಕಾಯಿ ತಿನ್ನುವುದನ್ನು ಹಾನಿಕಾರಕ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇದರಿಂದ ಆಮ್ಲೀಯತೆ, ಎದೆಯುರಿ, ಮತ್ತು ವಾಕರಿಕೆ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ಉಂಟಾಗಬಹುದು.

ಹಾಗಲಕಾಯಿ ಮತ್ತು ಮೊಸರು

ಹಾಗಲಕಾಯಿ ಮತ್ತು ಮೊಸರು ಎರಡೂ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಆದರಿಂದ ನೀವೇನಾದರೂ ಹಾಗಲಕಾಯಿಯೊಂದಿಗೆ ಮೊಸರನ್ನು ಸೇರಿಸಿ ಸೇವಿಸುತ್ತಿದ್ದರೆ ಅದನ್ನು ಇಂದಿನಿಂದಲೇ ತಪ್ಪಿಸಿ.

ಹಾಗಲಕಾಯಿ ಜೊತೆ ಮೂಲಂಗಿ

ಮೂಲಂಗಿ ತಿಂದ ನಂತರ ಹಾಗಲಕಾಯಿಯನ್ನು ಸೇವಿಸುವುದನ್ನು ಕಡಿಮೆ ಮಾಡಿ. ಎರಡೂ ತರಕಾರಿಗಳು ವಿಭಿನ್ನ ಗುಣಗಳನ್ನು ಹೊಂದಿರುವುದರಿಂದ, ಇವುಗಳ ಸೇವನೆಯು ಜೀರ್ಣಾಂಗದ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೊತೆಗೆ ಕಫ, ಗ್ಯಾಸ್​, ಉಬ್ಬುವುದು ಮತ್ತು ತೂಕ ಹೆಚ್ಚಾಗುವಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಒಟ್ಟಾರೆಯಾಗಿ, ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಅದನ್ನು ಸರಿಯಾದ ಆಹಾರ ಸಂಯೋಜನೆಯಲ್ಲಿ ಬಳಸಿಕೊಳ್ಳುವುದು ಮುಖ್ಯವಾಗಿರುತ್ತದೆ. ತಪ್ಪು ಆಹಾರಗಳೊಂದಿಗೆ ಸೇವಿಸುವುದರಿಂದ ಅದರ ಪ್ರಯೋಜನಗಳು ಕಡಿಮೆಯಾಗಬಹುದು. ಜೊತೆಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net