ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾ ಕುಡಿಯುತ್ತೀರಾ? ಅಪಾಯ ಕಟ್ಟಿಟ್ಟ ಬುತ್ತಿ...

tea
Published on

ಬೆಂಗಳೂರು: ಚಹಾವು ನಮ್ಮ ದೇಶದಾದ್ಯಂತ ಬಹಳ ಜನಪ್ರಿಯ ಪಾನೀಯವಾಗಿದೆ. ಹೆಚ್ಚಿನ ಜನರು ಬೆಳಿಗ್ಗೆ ತಿಂಡಿ ಜತೆಗೆ ಬಿಸಿ.. ಬಿಸಿ ಚಹಾವನ್ನು ಕುಡಿದು ದಿನವನ್ನು ಪ್ರಾರಂಭಿಸುತ್ತಾರೆ. ದೇಶಾದ್ಯಂತ ವಿವಿಧ ರೀತಿಯ ಚಹಾಗಳು ಲಭ್ಯವಿದೆ.

Tea

ಖಾಲಿ ಹೊಟ್ಟೆಯಲ್ಲಿ ಹಾಲಿನ ಟೀ ಕುಡಿಯುವುದು ಆರೋಗ್ಯಕರವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಚಹಾವು ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಅಂತೆ. ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ.

ಪೌಷ್ಟಿಕತಜ್ಞರ ಪ್ರಕಾರ, ಬೆಳಿಗ್ಗೆ ಹಾಲಿನ ಚಹಾವನ್ನು ಕುಡಿಯುವುದು ದೇಹದಲ್ಲಿನ ವಿಷದ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯ ಬದಲಿಗೆ ಸ್ವಲ್ಪ ಆಹಾರದೊಂದಿಗೆ ಚಹಾವನ್ನು ಕುಡಿಯುವುದು ಉತ್ತಮ.

Tea

ಖಾಲಿ ಹೊಟ್ಟೆಯಲ್ಲಿ ಹಾಲಿನ ಟೀ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದು ಗ್ಯಾಸ್ ಹಾರ್ಟ್ ಬರ್ನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.

Tea Bisket

ಹಾಲಿನ ಚಹಾವನ್ನು ಪದೇ ಪದೇ ಕುದಿಸುವುದು ಹಾಲಿನ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ನಾಶಪಡಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು ಕುಡಿಯುವುದರಿಂದ ಅಲ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

Tea Seller

ಚಹಾಕ್ಕೆ ಸಕ್ಕರೆಯನ್ನು ಸೇರಿಸುವುದರಿಂದ ದೇಹದಲ್ಲಿ ಹಾನಿಕಾರಕ ದ್ರವಗಳು ಸಂಗ್ರಹಗೊಳ್ಳಲು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net