

garbage: ಅಡುಗೆಮನೆಯ ಆಹಾರ ತ್ಯಾಜ್ಯ ಮತ್ತು ಕಸದ ತೊಟ್ಟಿಗೆ ಎಸೆಯಲಾದ ಇತರ ಕಸವು ಬೇಗನೆ ಕೊಳೆಯುತ್ತದೆ ಮತ್ತು ಅಹಿತಕರ ವಾಸನೆಯನ್ನು ಹೊರಸೂಸುತ್ತದೆ. ಕಸದ ತೊಟ್ಟಿಯಿಂದ ಹೊರಹೊಮ್ಮುವ ದುರ್ವಾಸನೆಯನ್ನು ಹೋಗಲಾಡಿಸುವುದು ಹೇಗೆ ಎನ್ನುವ ಪ್ರಶ್ನೆ ನಿಮಗೆ ಇದ್ದರೆ ನಾವು ಇಂದು ಕೆಲವು ಸಲಹೆ ನೀಡಲಿದ್ದೇವೆ.
ಹಣ್ಣಿನ ಸಿಪ್ಪೆಗಳು ಮತ್ತು ಉಳಿದ ಆಹಾರವನ್ನು ದೀರ್ಘಕಾಲದವರೆಗೆ ಕಸದ ಬುಟ್ಟಿಯಲ್ಲಿ ಇಡಬಾರದು. ಅವುಗಳನ್ನು ಸಾಧ್ಯವಾದಷ್ಟು ಬೇಗ ಹೊರಗೆ ವಿಲೇವಾರಿ ಮಾಡಬೇಕು. ಹೀಗೆ ಮಾಡುವುದರಿಂದ ಕೊಳೆಯುವ ಪ್ರಕ್ರಿಯೆ ನಿಧಾನವಾಗುತ್ತದೆ.
ಕಸದ ತೊಟ್ಟಿಯ ಕೆಳಭಾಗದಲ್ಲಿ ಸ್ವಲ್ಪ ಅಡುಗೆ ಸೋಡಾ ಸಿಂಪಡಿಸಿ ನಂತರ ಮೇಲೆ ಪ್ಲಾಸ್ಟಿಕ್ ಚೀಲ ಹಾಕಿ. ಅಥವಾ ಪ್ರತಿದಿನ ಕಸವನ್ನು ತೆಗೆದ ನಂತರ ಸ್ವಲ್ಪ ಅಡುಗೆ ಸೋಡಾ ಸಿಂಪಡಿಸಬಹುದು. ಇದು ವಾಸನೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಸಿಟ್ರಸ್ ಹಣ್ಣುಗಳು, ವಿಶೇಷವಾಗಿ ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳು ನೈಸರ್ಗಿಕ ಸುಗಂಧವನ್ನು ಹೊಂದಿರುತ್ತವೆ. ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳನ್ನು ಕಸದ ಬುಟ್ಟಿಯಲ್ಲಿ ಹಾಕುವುದರಿಂದ ವಾಸನೆಯನ್ನು ಕಡಿಮೆ ಆಗುತ್ತದೆ.
ಪ್ರತಿದಿನ ಕಸದ ತೊಟ್ಟಿಯನ್ನು ಖಾಲಿ ಮಾಡಿದ ನಂತರ, ಒಳಭಾಗವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕನಿಷ್ಠ ವಾರಕ್ಕೊಮ್ಮೆ, ಅದನ್ನು ಸಾಬೂನು ನೀರು ಅಥವಾ ಸೋಂಕುನಿವಾರಕದಿಂದ ಸ್ವಚ್ಛಗೊಳಿಸಿ ಮತ್ತು ಚೆನ್ನಾಗಿ ಒಣಗಿಸಿ. ಅದನ್ನು ಒಣಗಿಸುವುದರಿಂದ ವಾಸನೆ ಬರದಂತೆ ತಡೆಯಲು ಸಹಾಯವಾಗುತ್ತದೆ.
ಗಾಳಿಯಾಡದ ಮುಚ್ಚಳವಿರುವ ಕಸದ ಡಬ್ಬಿಯನ್ನು ಆಯ್ಕೆ ಮಾಡುವುದು ಉತ್ತಮ. ಇದು ವಾಸನೆಗಳು ಹೊರಹೋಗುವುದನ್ನು ತಡೆಯುತ್ತದೆ.