ಕುಡಿಯುವ ನೀರಿಗೂ ಎಕ್ಸ್ಪೈರಿ ಡೇಟ್ ಇದ್ಯಾ​? ಇಲ್ಲಿದೆ ನಿಮಗೆ ಗೊತ್ತಿರದ ರೋಚಕ ಮಾಹಿತಿ | Water Bottles

ನೀರಿನ ಬಾಟಲಿ
ನೀರಿನ ಬಾಟಲಿ
Published on

ಪ್ರಮುಖ ಮುಖ್ಯಾಂಶಗಳು

  • ಆಹಾರ ಉತ್ಪನ್ನಗಳಂತೆಯೇ ನೀರಿಗೂ ಇದೆಯಾ ಎಕ್ಸ್ಪೈರಿ ಡೇಟ್​?
  • ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಕೆಲವು ರೋಚಕ ಮಾಹಿತಿ
Water Bottles: ಊಟವಿಲ್ಲದೆ ಮನುಷ್ಯ ಕೆಲ ಕಾಲ ಬದುಕಬಹುದು. ಆದರೆ, ನೀರಿಲ್ಲದೆ ಒಂದು ದಿನ ಉಸಿರಾಡುವುದು ಕೂಡ ಕಷ್ಟಕರ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ನಮ್ಮ ದೈನಂದಿನ ಜೀವನದಲ್ಲಿ ನೀರು ಪ್ರಮುಖ ಅಲ್ಲ, ಮುಖ್ಯ ಪಾತ್ರವನ್ನು ವಹಿಸುತ್ತದೆ. ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಯಾವುದೇ ಇರಲಿ, ಕುಡಿಯಲು ನೀರು ಎಲ್ಲಾ ಜೀವಗಳಿಗೂ ಅತ್ಯವಶ್ಯಕ.
ಪ್ರತಿದಿನ ಎರಡರಿಂದ ಮೂರು ಲೀಟರ್​ಗಳ ನೀರನ್ನು ಕುಡಿಯುವುದು ನಮ್ಮ ದೇಹಕ್ಕೆ ಬಹಳ ಉಪಯುಕ್ತ ಮತ್ತು ಅವಶ್ಯಕ ಎಂದು ವೈದ್ಯರು ಸಲಹೆ ನೀಡುತ್ತಾರೆ. ಈ ನಿಟ್ಟಿನಲ್ಲಿ, ಜನರು ಮನೆ, ಕಚೇರಿ ಅಥವಾ ಪ್ರಯಾಣದಲ್ಲಿ ಇದ್ದಾಗಲೆಲ್ಲ ಊಟಕ್ಕಿಂತ ಹೆಚ್ಚಾಗಿ ನೀರಿಗೆ ಆದ್ಯತೆ ನೀಡುತ್ತಾರೆ. ಸಾಮಾನ್ಯವಾಗಿ, ಹೊರಗೆಲ್ಲ ಪ್ರಯಾಣ ಮಾಡುವಾಗ ತಮ್ಮದೇ ನೀರಿನ ಬಾಟಲಿಯನ್ನು ಹೊತ್ತುಕೊಂಡು ಸಾಗುವುದು ಕಷ್ಟಸಾಧ್ಯ ಎನ್ನುವ ಹಲವರು, ಅಂಗಡಿಗಳಲ್ಲಿ ಲಭ್ಯವಿರುವ ಪ್ಲಾಸ್ಟಿಕ್​ ಲೀಟರ್​ ನೀರಿನ ಬಾಟಲಿಯನ್ನು ಕೊಳ್ಳುತ್ತಾರೆ. ಆದರೆ, ಇಲ್ಲೊಂದು ತಪ್ಪು ಮಾಡುತ್ತಾರೆ. ಅದು ಅವರಿಗೂ ಗೊತ್ತಿರುವುದಿಲ್ಲ.
ತಿನ್ನುವ ಯಾವುದೇ ಆಹಾರ ಉತ್ಪನ್ನಗಳ ಎಕ್ಸ್​ಪೈರಿ ಡೇಟ್​ ನೋಡಿ ಕೊಳ್ಳುವ ನಾವು, ನೀರಿನ ಬಾಟಲಿಗಳ ಮೇಲೆಯೂ ಇಷ್ಟೇ ದಿನಕ್ಕೆ ನೀರು ಎಕ್ಸ್ಪೈರಿ ಆಗುತ್ತೆ ಅಂತ ಏನಾದರೂ ಬರೆದಿರುವುದನ್ನು ಗಮನಿಸುತ್ತಾರೆ. ಖಂಡಿತ ಇಲ್ಲಾ! ಹಾಗೇನಾದರೂ ಗಮನಿಸುವುದಾದರೆ, ಕೆಲವೇ ಕೆಲವರು ಮಾತ್ರ ಇದನ್ನು ನೋಡಿರಲು ಸಾಧ್ಯ. ಹಾಗಿದ್ದರೆ, ನೀರಿಗೂ ಎಕ್ಸ್ಪೈರಿ ಡೇಟ್​ ಇದೆಯೇ? ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ನೋಡಿ ರೋಚಕ ಉತ್ತರ.
ಈ ಬಗ್ಗೆ ಅನೇಕರಿಗೆ ಅನುಮಾನ, ಗೊಂದಲಗಳು ಕಾಡಲಾರಂಭಿಸಿವೆ ಎಂಬುದು ಇಲ್ಲಿ ಸ್ಪಷ್ಟ. ಸಾಮಾನ್ಯವಾಗಿ ನೀರು ತಾನಾಗಿಯೇ ಹಾಳಾಗುವುದಿಲ್ಲ. ವಾಸ್ತವವಾಗಿ, ನೀರಿಗೆ ಎಕ್ಸ್ಪೈರಿ ಡೇಟ್​ ಅನ್ನೋದೇ ಇಲ್ಲ. ಆದರೆ, ನೀರು ತುಂಬಿರುವ ಬಾಟಲಿಗಳು ಮತ್ತು ಶೇಖರಣಾ ವಿಧಾನವನ್ನು ಅವಲಂಬಿಸಿ ಅದು ಇಷ್ಟೇ ದಿನಕ್ಕೆ ಹಾಳಾಗುವ ಸಾಧ್ಯತೆಗಳನ್ನು ಗಮನಿಸಿ ಎಕ್ಸ್​ಪೈರಿ ದಿನಾಂಕವನ್ನು ಹಾಕಲಾಗಿರುತ್ತದೆ. ನೀರಿನ ಬಾಟಲಿಗಳ ಮೇಲೆ ಕೊನೆಯ ದಿನಾಂಕಗಳನ್ನು ಹೆಚ್ಚಾಗಿ ಮುದ್ರಿಸಲಾಗಿರುತ್ತದೆ. ಇದನ್ನು ಬಹುತೇಕರು ಗಮನಿಸುವುದಿಲ್ಲ.

ನೀರಿನಲ್ಲಿ ಪ್ಲಾಸ್ಟಿಕ್ ಕೆಮಿಕಲ್​ಗಳು ಕರಗುತ್ತವೆ

ಈ ಅಭ್ಯಾಸವು 1980ರಲ್ಲಿ ಯುಎಸ್‌ನಲ್ಲಿ ಪ್ರಾರಂಭವಾಯಿತು. ಪ್ರಸ್ತುತ, ಬಾಟಲಿ ನೀರಿನ ಮೇಲೆ ಯಾವುದೇ ಕಡ್ಡಾಯ ಎಕ್ಸ್ಪೈರಿ ಡೇಟ್​ ಅಂತೇನಿಲ್ಲ. ಅಸಲಿಗೆ, ಈ ದಿನಾಂಕಗಳು ಮುಖ್ಯವಾಗಿ ಪ್ಲಾಸ್ಟಿಕ್ ಬಾಟಲ್ ರಾಸಾಯನಿಕಗಳು ನೀರಿನೊಳಗೆ ಸೋರಿಕೆಯಾಗುವ ಅಪಾಯವನ್ನು ಸೂಚಿಸುತ್ತವೆ ಎಂಬುದು ಇಲ್ಲಿ ಗಮನಾರ್ಹ. ಪ್ಲಾಸ್ಟಿಕ್​ ಬಾಟಲಿಯಲ್ಲಿ ಆಂಟಿಮನಿ ಮತ್ತು ಬಿಸ್ಫೆನಾಲ್ ಎ ನಂತಹ ವಸ್ತುಗಳು, ವಿಶೇಷವಾಗಿ ಶಾಖಕ್ಕೆ ನೇರವಾಗಿ ಒಡ್ಡಿಕೊಂಡಾಗ, ಅದರಲ್ಲಿರುವ ಕೆಮಿಕಲ್​ ಅಂಶಗಳು ನಿಧಾನವಾಗಿ ನೀರಿನಲ್ಲಿ ಬೆರೆಯುತ್ತವೆ.

ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಬೇಡ

ಈ ಕಾರಣಗಳಿಂದಲೇ ತಜ್ಞರು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡದಂತೆ ಸಲಹೆ ನೀಡುತ್ತಾರೆ. ನೀರಿಗೆ ನಿರ್ದಿಷ್ಟ ಎಕ್ಸ್​ಪೈರಿ ದಿನಾಂಕವಿಲ್ಲದಿದ್ದರೂ, ಬಾಟಲಿಯ ಮುಚ್ಚಳವನ್ನು ತೆರೆದ ನಂತರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ನೀರನ್ನು ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಪರಿಸರ ಮಾಲಿನ್ಯದ ಅಧ್ಯಯನದ ಪ್ರಕಾರ, ನೀರಿನ ಬಾಟಲಿಗಳಲ್ಲಿ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ನೀರಿನ ಬಾಟಲಿಯ ಮುಚ್ಚಳವನ್ನು ತೆರೆದಾಗಲೆಲ್ಲಾ, ಸೂಕ್ಷ್ಮಜೀವಿಗಳು ಬಾಟಲಿಗೆ ಪ್ರವೇಶಿಸುತ್ತವೆ.
ಇವು ಬಾಟಲಿಯ ತುದಿಗಳಲ್ಲಿ ಅಂಟಿಕೊಳ್ಳುತ್ತವೆ ಮತ್ತು ಬೆಳೆಯುತ್ತವೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೆಚ್ಚಾಗಬಹುದು. ಇದು ಹೊಟ್ಟೆ ನೋವು, ಅತಿಸಾರ ಮತ್ತು ಇತರ ಸೋಂಕುಗಳಿಗೂ ಕಾರಣವಾಗಬಹುದು. ಈ ಸೂಕ್ಷ್ಮಜೀವಿಗಳು ಕೆಟ್ಟ ವಾಸನೆ ಮತ್ತು ಅಲರ್ಜಿಯನ್ನು ಉಂಟುಮಾಡಬಹುದು.

ಪ್ಲಾಸ್ಟಿಕ್​ ನೀರಿನ ಬಾಟಲಿಗಳು ಬೇಡ

ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುವ ಮತ್ತು ರಾಸಾಯನಿಕಗಳನ್ನು ಬಿಡುಗಡೆ ಮಾಡದ ಸ್ಟೇನ್‌ಲೆಸ್ ಸ್ಟೀಲ್ ಅಥವಾ ತಾಮ್ರದ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸುವುದು, ಅದನ್ನು ಕುಡಿಯಲು ಉಪಯೋಗಿಸುವುದು ಉತ್ತಮ. ನೀರನ್ನು ಶಾಖ ಮತ್ತು ಸೂರ್ಯನ ಬೆಳಕಿನಿಂದ ಆದಷ್ಟು ದೂರವಿಡಿ. ಅಲ್ಲದೆ, ಕಾರುಗಳಲ್ಲಿ ನೀರಿನ ಬಾಟಲಿಗಳನ್ನು ಬಿಡಬೇಡಿ. ಮುಖ್ಯವಾಗಿ, ಪ್ಲಾಸ್ಟಿಕ್ ಬಾಟಲಿಗಳನ್ನು ದೀರ್ಘಕಾಲ ಬಳಸಬೇಡಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net