

Health tips: ಇಂದಿನ ಯುವ ಸಮೂಹಗಳು ಅತಿಯಾದ ಬಿಸಿಲು ಹಾಗೂ ದೀರ್ಘವಾದ ಎಸಿಗಳಿಂದ ಆದಷ್ಟು ದೂರ ಇರಲು ಇಷ್ಟಪಡುತ್ತಿದ್ದಾರೆ. ಹಾಗೆಯೇ ಅನೇಕರ ಆರೋಗ್ಯದ ಮೇಲೆ ಈ ಎರಡು ಅಗತ್ಯಗಳು ಗಂಭೀರವಾದ ಪರಿಣಾಮವನ್ನು ಬೀರುತ್ತವೆ. ಇನ್ನು ಕೆಲವರಿಗೆ ಬಿಸಿಲಿಗೆ ಹೋದ ತಕ್ಷಣ ತಲೆ ಸುತ್ತುವುದು, ಬೆವರುವುದು,ಆಯಾಸ ಆಗುವುದು,ಡಿಹೈಡ್ರೇಷನ್ನಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಇನ್ನು ಕೆಲವರು ಎಸಿಯಲ್ಲಿ ಕುಳಿತ ಸ್ವಲ್ಪ ಸಮಯಕ್ಕೆ ಸೀನುವುದು, ಅಲರ್ಜಿ, ಕಣ್ಣಿನ ಕಿರಿಕಿರಿ, ಒಣ ಚರ್ಮ, ಶೀತ, ಶ್ವಾಸಕೋಸದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಹಾಗಾಗಿ ಅದರಿಂದ ಹೊರ ಬರಲು ಈ ರೀತಿಯ ಕ್ರಮಗಳನ್ನು ಕೈಗೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ..
ಈ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿನಿತ್ಯ ದಿನಕ್ಕೆ ಕನಿಷ್ಟ 3-4 ಲೀಟರ್ ನೀರನ್ನು ಕುಡಿಯಿರಿ. ಹಾಗೂ ತೆಂಗಿನ ನೀರು, ನಿಂಬೆ ರಸ, ಅಥವಾ ಎಲೆಕ್ಟ್ರೋಲೈಟ್ ಇರುವಂತಹ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಕಾಪಾಡಲು ಸಹಾಯವಾಗುತ್ತದೆ ಇದರಿಂದ ಸಮಸ್ಯೆಗಳನ್ನು ತಡೆಗಟ್ಟಬಹುದು.
ಯಾವುದೇ ವ್ಯಕ್ತಿ ಮೇಲಿರುವಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಆತನು ತಾವು ಧರಿಸುವ ಉಡುಗೆಗಳ ಮೇಲೆ ಗಮನಕೊಡುವುದು ಉತ್ತಮವಾಗಿರುತ್ತದೆ. ಹಾಗೆಯೇ ತೆಳುವಅದ ಬಟ್ಟೆ ಧರಿಸುವುದು, ಗಾಳಿಯಾಡುವಂತಹ ಹತ್ತಿ ಬಟ್ಟೆ ಧರಿಸುವುದರಿಂದ ಇದು ಶಾಖವನ್ನು ಕಡಿಮೆ ಮಾಡುವುದರಿಂದ ಬೆವರುವಿಕೆಯನ್ನು ಹೀರಿಕೊಳ್ಳುತ್ತದೆ.
ಎಸಿಯ ತಾಪಮಾನವನ್ನು ತಡೆಯಲು ಆಗದಿದ್ದರೆ, ಅದನ್ನು 24-26°C ಒಳಗೆ ಇರಿಸಿಕೊಳ್ಳಿ. ಇದರಿಂದ ದೇಹಕ್ಕೆ ಆರಾಮದಾಯಕವಾಗುತ್ತದೆ. ಹಾಗೆಯೇ ಶಾಖದ ಆಘಾತವನ್ನು ತಡೆಯುತ್ತದೆ. ಎಸಿಯನ್ನು ಆಗಾಗ ಆಫ್ ಮಾಡಿ, ಕಿಟಕಿಗಳನ್ನು ತೆಗೆದುಕೊಂಡು ನೈಸರ್ಗಿಕ ಗಾಳಿಯನ್ನು ಪಡೆದುಕೊಳ್ಳಿ ಇದರಿಂದ ನಿಮ್ಮ ಆರೋಗ್ಯ ಸಮನಾಗಿರುತ್ತದೆ.
ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಬೀಸುವಂತಹ ಗಾಳಿಯನ್ನು ತೆಗೆದುಕೊಳ್ಳಲು ಆದಷ್ಟು ಮನೆಯಿಂದ ಹೊರಗಡೆ ಇರಿ. ಇಲ್ಲಿ ಮರಗಿಡಗಳಿಮದ ಬೀಸುವ ನೈಸರ್ಗಿಕ ಗಾಳಿಯು ನಿಮಗೆ ಆರಾಮದಯಕ ಸ್ಥಿತಿಗೆ ತಲುಪಿಸುತ್ತದೆ. ಹಾಗೆಯೇ ನಿಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ.
ಅತಿಯಾದ ಶಾಖದಿಂದ ತಲೆತಿರುಗುವಿಕೆ, ಆಯಾಸ, ಅತಿಯಾದ ಬೆವರುವಿಕೆ, ಅಥವಾ ಒಣಗಿದ ಚರ್ಮದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಇನ್ನು ಆದಷ್ಟು ಶಾಖದಿಂದ ದೂರ ಇರಲು ಪ್ರಯತ್ಸಿಸಿ.
ಈ ರೀತಿಯ ಸಮಸ್ಯೆಯಿಮದ ಬಳಲುತ್ತಿರುವವರು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಲಘು ಆಹಾರ ಸೇವಿಸಿ. ಖಾರದ, ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ, ಇದು ದೇಹದ ಶಾಖವನ್ನು ಹೆಚ್ಚಿಸಬಹುದು.
ಶಾಖದ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಪ್ರತಿದಿನ ಯೋಗ, ಧ್ಯಾನ ಅಥವಾ ತಂಪಾದ ವಾತಾವರಣದಲ್ಲಿ ವಿಶ್ರಾಂತಿಯಿಂದ ಒತ್ತಡ ನಿವಾರಣೆಯಾಗುತ್ತದೆ. ಆದಷ್ಟು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ ಇದರಿಂದ ನೀವು ಆರಾಮವಾಗಿ ಇರುತ್ತೀರಿ..
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ