Sleep Apnea Awareness: ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ ದಿಂಬಿನ ಮೇಲೆ ಜೊಲ್ಲು ಸುರಿದಿರುವುದನ್ನು ಅಥವಾ ಬಾಯಿಯ ಪಕ್ಕದಲ್ಲಿ ಲಾಲಾರಸದ ಕಲೆಗಳಾಗಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹೆಚ್ಚಿನ ಜನರಲ್ಲಿ ಈ ಅನುಭವವಾಗಿರುತ್ತದೆ. ಹಲವರು ಇದನ್ನು ಮುಜುಗರದ ಸಂಗತಿ ಎಂದು ಭಾವಿಸಿದರೆ, ಇನ್ನು ಕೆಲವರು ತಮಗೆ ಏನೋ ಆರೋಗ್ಯ ಸಮಸ್ಯೆ ಅಥವಾ ಕಾಯಿಲೆ ಇರಬಹುದು ಎಂದು ಆತಂಕಪಡುತ್ತಾರೆ. ಆದರೆ, ಹೀಗೆ ನಿದ್ರೆಯಲ್ಲಿ ಜೊಲ್ಲು ಸುರಿಯುವುದು ನಿಜವಾಗಿಯೂ ಅಪಾಯಕಾರಿ ಲಕ್ಷಣವೇ? ಆರೋಗ್ಯ ತಜ್ಞರು ಹಾಗೂ ನಿದ್ರಾ ತಜ್ಞರು ಈ ಕುರಿತು ಏನು ಹೇಳುತ್ತಾರೆ ಎಂಬುದನ್ನು ವಿವರವಾಗಿ ತಿಳಿಯೋಣ.