ಹದಿಹರೆಯದ ವಯಸ್ಸಲ್ಲೇ ತಲೆ ಬೋಳಾಗ್ತಿದ್ಯಾ?; ಚಿಂತೆ ಬಿಡಿ ಉದ್ದ, ದಪ್ಪನೆಯ ಕೂದಲಿಗಾಗಿ ಈ ಟ್ರಿಕ್ಸ್ ಫಾಲೋ ಮಾಡಿ..Hair Care

 Does Frequent Trimming Really Make Your Hair Grow Faster
Does Frequent Trimming Really Make Your Hair Grow Faster
Published on

ಪ್ರಮುಖ ಮುಖ್ಯಾಂಶಗಳು

  • ಕೂದಲಿನ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ, ಕೂದಲು ಟ್ರಿಮ್ ಮಾಡುವುದರಿಂದಾಗುವ ಪ್ರಯೋಜನ.
  • ಕೂದಲಿನ ಆರೋಗ್ಯಕ್ಕೆ ಯಾವೆಲ್ಲ ಆಹಾರ ಸೇವಿಸಿದರೆ ಉತ್ತಮ.
  • ಕೂದಲು ಉದುರಲು ಒತ್ತಡವು ಒಂದು ಕಾರಣ, ಹೆಚ್ಚು ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಿ.
ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಹೇರ್​ ಕೇರ್​ ಹೆಚ್ಚು ಮುಖ್ಯ. ಕೂದಲು ಉದುರುವಿಕೆಯಿಂದ ಬೇಸತ್ತು ಕೆಲವರು ತಲೆ ಬೋಳಿಸಿ ಮತ್ತೆ ಬೆಳೆಸಲು ಏನೇನೋ ಪ್ರಯೋಗ ಮಾಡುತ್ತಾರೆ. ಇನ್ನೂ ಕೆಲವರು ಹೇರ್​ ಟ್ರಾನ್ಸ್​ಪ್ಲಾಂಟ್​ ಮಾಡಿಸಿಕೊಳ್ಳುತ್ತಾರೆ. ಆದರೆ, ಸಮಸ್ಯೆ ಚಿಕ್ಕದಿರುವಾಗಲೇ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ತೆಗೆದುಕೊಂಡು ಕೂದಲನ್ನು ಚೆನ್ನಾಗಿ ನೋಡಿಕೊಂಡರೆ ಮುಂದೆ ವ್ಯಥೆ ಪಡುವ ಅಗತ್ಯವಿಲ್ಲ.

ನೈಸರ್ಗಿಕವಾಗಿ ಕೂದಲಿನ ಆರೋಗ್ಯ ಮುಖ್ಯ

ಕೂದಲಿಗೆ ಮಾಸ್ಕ್​ ಹಾಕುವುದು, ದಾಸವಾಳ ಎಲೆ, ಮೆಂತ್ಯೆ, ಈರುಳ್ಳಿ, ಕರಿಬೇವು ತಿನ್ನುವುದು ಸೇರಿದಂತೆ ನಾನಾ ಮನೆ ಔಷಧಿ ಕೂದಲಿನ ಬೆಳವಣಿಗೆಗೆ, ಕಪ್ಪಾಗುವಿಕೆಗೆ ಮದ್ದು. ಹಾಗಾದ್ರೆ ಕೂದಲಿನ ಬೆಳವಣಿಗೆಗೆ ನೀವು ಮಾಡಬೇಕಾದ ಕ್ರಮ ಏನು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಹೊಟ್ಟೆಗೆ ಎಷ್ಟು ಆಹಾರ ಬೇಕೋ ಹಾಗೇಯೇ ದೇಹದ ಪ್ರತಿ ಅಂಗಾಂಗಕ್ಕೂ ತನ್ನದೇ ಆದ ಪ್ರತ್ಯೇಕ ಆಹಾರ ಬೇಕು. ಕಿಡ್ನಿ ಆರೋಗ್ಯಕ್ಕೆ ನೀರು, ಸೇಬು, ಎಲೆಕೋಸು ಮತ್ತು ಬೆರ್ರಿ ಹಣ್ಣು ಸೇವಿಸಬೇಕು. ಕಣ್ಣಿನ ಆರೋಗ್ಯಕ್ಕೆ ಕ್ಯಾರೋಟ್​, ಮೀನು ತಿನ್ನಬೇಕು ಚರ್ಮದ ಆರೋಗ್ಯಕ್ಕೆ ವಿಟಮಿನ್​ ಡಿ, ಅವಕಾಡೋ, ವಾಲ್​ನಟ್ ಬಾದಾಮಿ ತಿನ್ನ ಬೇಕಾಗುತ್ತದೆ. ಹೀಗಾಗಿ ನಾವು ಕೂದಲನ್ನು ಸಹ ಪ್ರತ್ಯೇಕವಾಗಿ ಕೇರ್​ ಮಾಡಬೇಕಾಗುತ್ತದೆ. ಆಗಾಗ್ಗೆ ಟ್ರಿಮ್​ ಮಾಡುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡಬಹುದು.

6-7ವಾರಕ್ಕೊಮ್ಮೆ ಟ್ರಿಮ್ ಮಾಡಿ

ಹೌದು, ಆರರಿಂದ ಏಳು ಅಥವಾ ಎಂಟು ವಾರಕ್ಕೊಮ್ಮೆ ಕೂದಲಿನ ತುದಿ ಭಾಗವನ್ನು ಟ್ರಿಮ್​ ಮಾಡುವ ಅಭ್ಯಾಸವಿಟ್ಟುಕೊಳ್ಳಿ. ಇದು ಕೂದಲು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ. ಸೀಳು ಕೂದಲಿನ ನಿವಾರಣೆ. ಕಾಮತಿಯುತವಾಗಿ ದಪ್ಪನಾಗಿ ಕಾಣಲು ಇದು ಸಹಾಯ ಮಾಡುತ್ತದೆ.

ಯಾವ ಆಹಾರ ತಿನ್ನಬೇಕು

ಕೂದಲಿನ ಬೆಳವಣಿಗೆಗೆ ಪ್ರೋಟಿನ್, ಬಯೋಟಿನ್​, ವಿಟಮಿನ್​ ಅಗತ್ಯ. ಹೀಗಾಗಿ ಕೂದಲು ಬೆಳೆಯಲು ಮೀನು, ಮೊಟ್ಟೆ ಹಾಗೂ ಸೊಪ್ಪನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಮೊಟ್ಟೆಯಲ್ಲಿ ಬಯೋಟಿನ್​ ಇದ್ದು ಇದು ಕೂದಲು ಉದುರುವಿಕೆ ತಡೆಯುತ್ತದೆ. ಕರಿಬೇವಿನ ಸೊಪ್ಪು ಮತ್ತು ಇತರ ಸೊಪ್ಪಿನಲ್ಲಿ ಕಬ್ಬಿಣಾಂಶ ಇರುವ ಕಾರಣ ಸಮೃದ್ಧವಾಗಿ ಬೆಳೆಯಲು ಸಹಕಾರಿ. ಬಾದಾಮಿ ಹಾಗೂ ವಾಲ್​ನಟ್​ ಕೂಡ ಕೂದಲಿನ ಪೋಷಣೆ ಮಾಡುತ್ತದೆ.

ಒತ್ತಡಕ್ಕೆ ಗುಡ್​ಬೈ ಹೇಳಿ

ಕೂದಲು ಉದುರಲು ಒತ್ತಡವು ಒಂದು ಕಾರಣ. ಮನಸ್ಸಿಗೆ ಶಾಂತಿ ಇರಬೇಕು. ನಿತ್ಯ ಏಳರಿಂದ ಎಂಟು ಗಂಟೆ ನಿದ್ದೆ ಮಾಡುವುದು ಕೂದಲಿನ ಕೋಶಗಳ ದುರಸ್ತಿಗೆ ಕಾರಣವಾಗುತ್ತದೆ. ಟೆಲೋಜನ್​ ಎಫ್ಲುವಿಯಮ್​​, ಅಲೋಪೆಸಿಯಾ ಅರೆಟಾ ಹಾಗೂ ಅಕಾಲಿಕ ನರೆಗೂದಲು ಕಾಣಿಸಿಕೊಳ್ಳುವಂತಯೆ ಮಾಡುತ್ತದೆ. ಹೀಗಾಗಿ ಕೂದಲು ಉದುರಲು ಶುರುವಾಗುತ್ತದೆ.

ಹೇರ್​ ಡ್ರೈಯರ್, ಸ್ಟ್ರೇಟನರ್​ ಬೇಡ

ನಿಮ್ಮ ಕೂದಲು ನೈಸರ್ಗಿಕವಾಗಿಯೆ ಚಂದ ಅದಕ್ಕೆ ನೈಸರ್ಗಿಕವಾಗಿಯೇ ಮದ್ದು ಕೊಡಲು ಯತ್ನಿಸಿ. ಆದರೆ ಮಾನವ ನಿರ್ಮಿತ ಸ್ಟ್ರೇಟನರ್​, ಡ್ರೈಯರ್​ ಬಳಕೆ ಮಾಡುವುದರಿಂದ ಕೂದಲಿನ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡಿ ಕೂದಲು ಉದುರುವಿಕೆಗೆ ಕಾರಣವಾಗಬಹುದು, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net