

Health Tips: ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜವನ್ನು ಫ್ರೂಟ್ ಸಲಾಡ್, ಫಲುಡಾ, ಇನ್ನಿತರ ತಂಪು ಪಾನೀಯಗಳಲ್ಲಿ ಸೇರಿಸಿ ಕೊಡುವುದು ನಮಗೆಲ್ಲ ಗೊತ್ತಿರುವ ಸಂಗತಿ. ಬಿರು ಬಿಸಿಲಿನಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲು ಈ ಬೀಜದ ಜ್ಯೂಸ್ ಮಾಡಿ ನಾವು ಕುಡಿಯುತ್ತೇವೆ. ಆದರೆ ಈ ಬೀಜದಿಂದ ದೇಹಕ್ಕೆ ಮಾತ್ರ ಉಪಯೋಗವಲ್ಲ, ಕೂದಲಿಗೂ ಸಹ ಉಪಯೋಗವಿದೆ. ಈ ಚಿಯಾ ಬೀಜದ ನೀರನ್ನು ಪ್ರತಿದಿನ ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆಗಳು ದೂರವಾಗುತ್ತವೆ. ದೈನಂದಿನ ಆಹಾರಕ್ರಮದಲ್ಲಿ ನೀವು ಇದನ್ನು ಹೇಗೆ ಸೇರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ಗಮನಿಸಿ.
ಚಿಯಾ ಬೀಜ ಪಾನೀಯ ಮಾಡುವ ವಿಧಾನ:
ರಾತ್ರಿಯಿಡೀ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಡಬೇಕು. ನೆನೆಸಿಟ್ಟಂತಹ ಬೀಜಗಳನ್ನು ಮೊಸರು ಅಥವಾ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿದಿನ ಕುಡಿಯಿರಿ. ಈ ಬೀಜಗಳನ್ನು ಸೇವಿಸಲು ಉತ್ತಮವಾದ ಸಮಯವೆಂದರೆ ಅದು ಬೆಳಗ್ಗೆ. ನೆನಪಿಡಿ, ಕೇವಲ ಚಿಯಾ ಬೀಜಗಳನ್ನು ಸೇರಿಸುವುದರಿಂದ ಕೂದಲು ಉದುರುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ.
ಚಿಯಾ ಬೀಜವನ್ನು ಸೇವಿಸುವುದರಿಂದ ಆಗುವ ಲಾಭಗಳು
1. ಹೃದ್ರೋಗದ ಅಪಾಯ ಕಡಿಮೆ: ನಿಮ್ಮ ದೈನಂದಿನ ಆಹಾರದಲ್ಲಿ ಕಾಮಕಸ್ತೂರಿ ಬೀಜಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ನಿರ್ದಿಷ್ಟವಾಗಿ, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಕರಗಿಸುತ್ತದೆ. ದೇಹದ ಅಂಗಾಂಗಗಳ ಉರಿಯೂತ ಕಡಿಮೆಯಾಗುತ್ತದೆ.
2. ಆರೋಗ್ಯಕರ ಕೂದಲು: ದೇಹದ ಆರೋಗ್ಯ ಅಷ್ಟೇ ಅಲ್ಲದೇ, ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಈ ಬೀಜಗಳನ್ನು ಉತ್ತಮ. ಇದರ ಸೇವನೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ನಯಾವಾಗಿ ಹಾಗೂ ಶೈನ್ ಆಗುತ್ತದೆ. ಮಾತ್ರವಲ್ಲದೆ ಇದು ಕೂದಲ ಉದುರುವಿಕೆ ತಡೆಯುತ್ತದೆ.
3. ಮೂಳೆಗಳಲ್ಲಿ ಬಲ: ಕಾಮಕಸ್ತೂರಿ ಬೀಜಗಳು ನಮ್ಮ ಮೂಳೆಗಳನ್ನು ಬಲಪಡಿಸುವ ಕ್ಯಾಲ್ಸಿಯಂ, ಪ್ರೊಟೀನ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ.